ರಾಜಹಂಸಗಢ ಶಿವಾಜಿ ಪ್ರತಿಮೆ ಇಬ್ಬರ ನಡುವಿನ ಪ್ರತಿಷ್ಠೆಯ ವಸ್ತುವಾಗಿಬಿಟ್ಟಿದೆ.

ರಾಜಹಂಸಗಢ ಶಿವಾಜಿ ಪ್ರತಿಮೆ ಇಬ್ಬರ ನಡುವಿನ ಪ್ರತಿಷ್ಠೆಯ ವಸ್ತುವಾಗಿಬಿಟ್ಟಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಪಾರುಪತ್ಯದ ಫೈಟ್​​ಗೆ ಇವತ್ತು ಕ್ಲೈಮ್ಯಾಕ್ಸ್. ಹೆಬ್ಬಾಳ್ಕರ್​​ಗೆ ಸೆಡ್ಡು ಹೊಡೆದ ಸಾಹುಕಾರ್ ಶಿವಾಜಿ ಪ್ರತಿಮೆ ಅನಾವರಣಕ್ಕೆ ಇವತ್ತೇ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಈ ನಡುವೆ ಶಾಸಕಿಯ ಆಪ್ತೆ ಗ್ರಾಮಸ್ಥರಿಗೆ ಧಮ್ಕಿ ಹಾಕಿರೋ ಆಡಿಯೋ ಕೂಡಾ ವೈರಲ್ ಆಗಿದೆ.

ಬೆಳಗಾವಿ ಅಂದ್ರೆ ಥಟ್ ಅಂತಾ ನೆನಪಾಗೋದು ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ರಾಜಕೀಯ ಕದನ. ಜಿಲ್ಲೆಯ ಪಾರುಪತ್ಯಕ್ಕಾಗಿ ಇಬ್ಬರ ನಡುವಿನ ಜಗಳಕ್ಕೆ ಇಡೀ ರಾಜ್ಯವೇ ಸಾಕ್ಷಿಯಾಗಿದೆ. ಚುನಾವಣೆ ಸಂದರ್ಭದಲ್ಲಂತೂ ಇಬ್ಬರ ಕಿತ್ತಾಟ ತೀವ್ರ ಸ್ವರೂಪಪಡೆದುಕೊಳ್ಳುತ್ತೆ. ಇದೀಗ ಶಿವಾಜಿ ಪ್ರತಿಮೆ ಅನಾವರಣ ವಿಚಾರವಾಗಿ ಮತ್ತೊಂದು ಸಮರಕ್ಕೆ ವೇದಿಕೆ ಸಜ್ಜಾಗಿದೆ. ಹೆಬ್ಬಾಳ್ಕರ್ ವಿರುದ್ಧ ಸೆಡ್ಡು ಹೊಡೆದಿರೋ ಸಾಹುಕಾರ್, ಇವತ್ತೇ ಶಿವಾಜಿ ಪ್ರತಿಮೆ ಅನಾವರಣ ಮಾಡಿಸುವ ಮೂಲಕ ಟಕ್ಕರ್ ಕೊಡಲು ಪ್ಲಾನ್ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ ಹಂತ ತಲುಪಿದ ಸಾಹುಕಾರ್-ಹೆಬ್ಬಾಳ್ಕರ್ ನಡುವಿನ ಪ್ರತಿಮೆ ಫೈಟ್
ಇದೇ ಶಿವಾಜಿ ಪ್ರತಿಮೆ ಸದ್ಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಸಂಘರ್ಷದ ಕಿಡಿ ಹೊತ್ತಿಸಿದೆ. ನಾಲ್ಕೂವರೆ ಕೋಟಿ ವೆಚ್ಚದಲ್ಲಿ ರಾಜಹಂಸಗಡ ಕೋಟೆ ಅಭಿವೃದ್ಧಿ ಮಾಡಲಾಗಿದ್ದು, ಇದ್ರ ಭಾಗವಾಗಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಯನ್ನೂ ಸ್ಥಾಪನೆ ಮಾಡಲಾಗಿದೆ. ಈ ಪ್ರತಿಮೆ ಲೋಕಾರ್ಪಣೆಗೆ ಮಾರ್ಚ್ 5ರ ಮುಹೂರ್ತವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಫಿಕ್ಸ್ ಮಾಡ್ತಿದ್ದಂತೆ ಇಬ್ಬರ ನಡುವೆ ಕ್ರೆಡಿಟ್ ವಾರ್ ಸ್ಫೋಟಗೊಂಡಿದೆ. ಹೀಗಾಗಿ ಶಿವಾಜಿ ಪ್ರತಿಮೆ ಅನಾವರಣಕ್ಕೆ ಇವತ್ತಿನ ಡೇಟ್ ಫಿಕ್ಸ್ ಮಾಡಿದ ಸಾಹುಕಾರ್ ಸಿಎಂ ಬೊಮ್ಮಾಯಿ ಮೂಲಕ ಉದ್ಘಾಟನೆ ಮಾಡಿಸಲಿದ್ದಾರೆ.

ಆಪ್ತನ ಆಡಿಯೋ ವೈರಲ್, ಗ್ರಾಮಸ್ಥರಿಂದ ಹೆಬ್ಬಾಳ್ಕರ್​​ಗೆ ಮುತ್ತಿಗೆ

ಈ ನಡುವೆ ಶಿವಾಜಿ ಪ್ರತಿಮೆ ಅನಾವರಣ ಫೈಟ್​ನಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲಬೇಕು ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನಂತೆ. ಹೀಗಂತಾ ಶಾಸಕಿ ಹೆಬ್ಬಾಳ್ಕರ್ ಆಪ್ತ ಎಸ್.ಎಂ.ಬೆಳವಟಕರ್​ ಮಾತಾಡಿರೋ ಆಡಿಯೋ ಫುಲ್ ವೈರಲ್ ಆಗಿದೆ.

ಈ ಆಡಿಯೋ ವೈರಲ್ ಆಗ್ತಿದ್ದಂತೆ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಜೀವ‌ ಬೆದರಿಕೆ ಹಾಕಿದವನನ್ನು ತಮ್ಮ ವಶಕ್ಕೆ ನೀಡಬೇಕು ಅಂತಾ ಜನ ಪ್ರತಿಭಟನೆ ಮಾಡಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ದಿಢೀರ್ ಪ್ರತಿಭಟನೆಯಿಂದ 1 ಗಂಟೆ ಕಾಲ ಕಾರಿನಲ್ಲಿಯೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಲಾಕ್ ಆಗಿದ್ದರು. ರಾಜಹಂಸಗಡ ಕೋಟೆ ಆವರಣದಲ್ಲಿ‌ ಮೊನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇದ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಳಿಕ ಸ್ಥಳಕ್ಕಾಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಗ್ರಾಮಸ್ಥರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿವಾಜಿ ಪ್ರತಿಮೆ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಜಬರ್ದಸ್ತ್ ಫೈಟ್ ನಡೀತಿದೆ. ಇವತ್ತು ಸಿಎಂ ಬೊಮ್ಮಾಯಿ ಪ್ರತಿಮೆ ಲೋಕಾರ್ಪಣೆ ಮಾಡಿದ್ರೆ, ನಾಡಿದ್ದು 5ರಂದು ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಶಿವಾಜಿ ಪ್ರತಿಮೆಯನ್ನು ಮತ್ತೆ ಲೋಕಾರ್ಪಣೆ ಮಾಡಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಸಿದ್ದರಾಮಯ್ಯಗೆ ಬಿಗ್​ ಶಾಕ್.

Thu Mar 2 , 2023
ಚುನಾವಣೆ ಹತ್ತಿರ ಬರ್ತಿದ್ದಂತೆ ಕಾಂಗ್ರೆಸ್​ನಲ್ಲಿ ಟಿಕೆಟ್ ಕಿತ್ತಾಟ ಜೋರಾಗಿದೆ. ರಾಮದುರ್ಗ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇದ್ದ ಗೊಂದಲವನ್ನು ಸಿದ್ದರಾಮಯ್ಯ ಬಗೆಹರಿಸಿದ್ದರು. ಇನ್ನೇನು ತಮ್ಮ ಆಪ್ತನಿಗೆ ಟಿಕೆಟ್ ಕೊಟ್ಟೇ ಬಿಡೋದು ಅಂತಾ ನಿರ್ಧರಿಸಿದ ಸಿದ್ದರಾಮಯ್ಯಗೆ ಎದುರಾಗಿದ್ದು, ಬೆಂಬಲಿಗರ ಪ್ರತಿಭಟನೆಯ ಸ್ವಾಗತ. ತಾವು ಉಳಿದುಕೊಂಡ ಹೋಟೆಲ್ ಆವರಣದಲ್ಲೇ ತಡರಾತ್ರಿ ಹೈಡ್ರಾಮ ನಡೆದಿದೆ. ಖಾಸಗಿ ಹೋಟೆಲ್ ಮುಂದೆ ಕಾಂಗ್ರೆಸ್​ ಬೆಂಬಲಿಗರು ಜಮಾಯಿಸಿದ್ದರು. ಚಿಕ್ಕ ರೇವಣ್ಣರಿಗೆ ಟಿಕೆಟ್ ಕೊಡಿ ಅಂತಾ ಪೋಸ್ಟರ್ ಹಿಡಿದುಕೊಂಡು ರಾತ್ರೋರಾತ್ರಿ ಮಹಿಳೆಯರು, […]

Advertisement

Wordpress Social Share Plugin powered by Ultimatelysocial