ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್.

ಡಿಕೇರಿ: ರೈತರಿಗೆ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯ ವಿಸ್ತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಗೋಣಿಕೊಪ್ಪದ ಪೊನ್ನಪ್ಪಸಂತೆ ಗ್ರಾಮದಲ್ಲಿ ನಿರ್ಮಾಣವಾದ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ಮತ್ತು ನೂತನ ಶಾಖೆ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ರೈತರ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ವಿಸ್ತರಿಸಲಾಗಿದ್ದು, ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಸೌಲಭ್ಯಗಳು ಹೆಚ್ಚಿನ ರೈತರಿಗೆ ಸಿಗುವ ಉದ್ದೇಶದಿಂದ ಯಶಸ್ವಿನಿ ಯೋಜನೆ ಅರ್ಜಿ ಸಲ್ಲಿಕೆ ಅವಧಿಯನ್ನು ಮಾರ್ಚ್ 30ರವರೆಗೆ ವಿಸ್ತರಿಸಲಾಗಿದೆ. ಸಾವಿರಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ 1650 ಬಗೆಯ ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ 33 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ರಾಶಿಯ ಮಹಿಳೆಯರು ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ.

Fri Jan 27 , 2023
ಕೆಲವು ಮಹಿಳೆಯರು ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ತಮ್ಮ ಸಂಗಾತಿಯ ಬಗ್ಗೆ ಭಾವೋದ್ರಿಕ್ತರು ಮತ್ತು ಪೊಸೆಸಿವ್‌ ಆಗಿರುತ್ತಾರೆ ಮತ್ತು ಅವರ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳಾದರೂ ಬಿಡುವುದಿಲ್ಲ. ಅವರು ತಮ್ಮ ಸಂಗಾತಿಗೆ ತುಂಬಾ ಬದ್ಧರಾಗಿರುತ್ತಾರೆ ಮತ್ತು ಅವರ ಸಂಬಂಧದಲ್ಲಿ ನಿಷ್ಠೆ ಮತ್ತು ನಂಬಿಕೆಯ ಬಗ್ಗೆ ಅರಿತಿರುತ್ತಾರೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರದ ಚಿಹ್ನೆಗಳ ಸಹಾಯದಿಂದ ಜನರು ತಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬಹುದು. ಈ ಲೇಖನದಲ್ಲಿ ಸಂಗಾತಿಗೆ ನಿಷ್ಠರಾಗಿರುವ ಮಹಿಳೆಯವರು ಯಾವ ರಾಶಿಯವರು ಎನ್ನುವುದನ್ನು […]

Advertisement

Wordpress Social Share Plugin powered by Ultimatelysocial