ಇನ್ನು ಗೂಗಲ್‌ ಡ್ರೈವ್‌ ಒಟ್ಟು 15GB ಸ್ಟೋರೇಜ್‌ ಸ್ಪೇಸ್‌ ಅನ್ನು ಉಚಿತವಾಗಿ ನೀಡತ್ತಿದೆ.

ಇಂದಿನ ಡಿಜಿಟಲ್‌ ಜಮಾನದಲ್ಲಿ ನಿಮ್ಮ ಫೈಲ್‌ಗಳು ಮತ್ತು ಡೇಟಾವನ್ನು ಬ್ಯಾಕಪ್‌ ಮಾಡಲು ಹೆಚ್ಚಿನ ಕ್ಲೌಡ್‌ ಸ್ಟೋರೇಜ್‌ ಸೇವೆಗಳನ್ನು ಬಳಸುತ್ತಾರೆ. ಅದರಲ್ಲೂ ಆಂಡ್ರಾಯ್ಡ್‌ ಡಿವೈಸ್‌ ಬಳಸುವವರು ಗೂಗಲ್‌ ಡ್ರೈವ್‌ ಅನ್ನು ಬಳಸುತ್ತಾರೆ. ಇನ್ನು ಗೂಗಲ್‌ ಡ್ರೈವ್‌ ಒಟ್ಟು 15GB ಸ್ಟೋರೇಜ್‌ ಸ್ಪೇಸ್‌ ಅನ್ನು ಉಚಿತವಾಗಿ ನೀಡತ್ತಿದೆ.ಉಚಿತ ಸ್ಟೋರೇಜ್‌ ಸ್ಪೇಸ್‌ ಮಿತಿಯನ್ನು ಮೀರಿದರೆ, ಹೆಚ್ಚುವರಿ ಕ್ಲೌಡ್‌ ಸ್ಟೋರೇಜ್‌ಗಾಗಿ ಗೂಗಲ್‌ ಒನ್‌ ಕ್ಲೌಡ್ ಸ್ಟೋರೇಜ್ ಪ್ಲಾನ್‌ಗೆ ಸೈನ್ ಅಪ್ ಮಾಡಬೇಕಾಗುತ್ತದೆ.ಹೌದು, ಗೂಗಲ್‌ ಡ್ರೈವ್‌ನಲ್ಲಿ ನಿಮಗೆ ಉಚಿತವಾಗಿ 15GB ಸ್ಟೋರೇಜ್‌ ಸ್ಪೇಸ್‌ ದೊರೆಯಲಿದೆ. ಒಂದು ವೇಳೆ ನಿಮ್ಮ ಸ್ಟೋರೇಜ್‌ ಸ್ಪೇಸ್‌ ಮಿತಿಯನ್ನು ಮೀರಿದರೆ ಗೂಗಲ್‌ ಒನ್‌ ಪ್ಲಾನ್‌ಗೆ ಚಂದಾದಾರರಾಗಬೇಕಾಗುತ್ತದೆ. ಒಂದು ವೇಳೆ ನೀವು ಹಣಕೊಟ್ಟು ಚಂದಾದಾರಾಗಲು ಬಯಸದೇ ಹೋದರೆ ಉಚಿತವಾಗಿ ಹೆಚ್ಚಿನ ಸ್ಟೋರೇಜ್‌ ಪಡೆಯುವುದಕ್ಕೆ ಕೆಲವು ಅವಕಾಶಗಳಿವೆ. ಇದಕ್ಕಾಗಿ ನೀವು ಕೆಲವು ಟ್ರಿಕ್ಸ್‌ ಉಪಯೋಗಿಸಬೇಕಾಗುತ್ತದೆ. ಹಾಗಾದ್ರೆ ಉಚಿತವಾಗಿ 50GB ಕ್ಲೌಡ್‌ ಸ್ಟೋರೇಜ್‌ ಅನ್ನು ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.50GB ಕ್ಲೌಡ್ ಸ್ಟೋರೇಜ್ ಸ್ಪೇಸ್‌ ಅನ್ನು ಉಚಿತವಾಗಿ ಪಡೆಯುವುದು ಹೇಗೆ ಭಾರತದಲ್ಲಿ 50GB ತನಕ ಉಚಿತವಾಗಿ ಸ್ಟೋರೇಜ್‌ ಸ್ಪೇಸ್‌ ನೀಡುವ ಯಾವುದೇ ಕ್ಲೌಡ್‌ ಸ್ಟೋರೇಜ್‌ ಸೇವೆ ಲಭ್ಯವಿಲ್ಲ. ಆದರೆ ನೀವು 50GB ತನಕ ಸ್ಟೋರೇಜ್‌ ಸ್ಪೇಸ್‌ ಪಡೆಯುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಎರಡು ಹೊಸ ಗೂಗಲ್‌ ಅಕೌಂಟ್‌ಗಳನ್ನು ಕ್ರಿಯೆಟ್‌ ಮಾಡಬೇಕಾಗುತ್ತದೆ. ನೀವು ಈ ಎರಡು ಅಕೌಂಟ್‌ಗಳಿಂದ ಒಟ್ಟು 30GB ಸ್ಟೋರೇಜ್‌ ಸ್ಪೇಸ್‌ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗಂತ ನೀವು ಈ ಎರಡು ಹೊಸ ಉಚಿತ ಖಾತೆಗಳನ್ನು ಕ್ರಿಯೆಟ್‌ ಮಾಡುವುದರಿಂದ ನಿಮ್ಮನ್ನು ಮಿತಿಗೊಳಿಸುವ ಯಾವುದೇ ಆಯ್ಕೆಯನ್ನು ಗೂಗಲ್‌ ಹೊಂದಿಲ್ಲ.ಇನ್ನು ನೀವು ಹೊಸ ಗೂಗಲ್‌ ಅಕೌಂಟ್‌ ರಚಿಸಲು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಹೆಸರು, ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಸೆಟ್‌ ಮಾಡುವ ಮೂಲಕ ಗೂಗಲ್‌ ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಬಹುದು. ಎಲ್ಲಾ ಖಾತೆಗಳನ್ನು ಒಂದೇ ಸ್ಥಳದಲ್ಲಿ ಪ್ರವೇಶಿಸಲು ಗೂಗಲ್‌ ಅವಕಾಶ ನೀಡಿರುವುದರಿದ ಎರಡು ಅಕೌಂಟ್‌ಗಳನ್ನು ಕಂಟ್ರೋಲ್‌ ಮಾಡುವುದು ತುಂಬಾ ಸುಲಭವಾಗಿದೆ. ಆದರಿಂದ ನೀವು ಎರಡು ಖಾತೆಗಳನ್ನು ಹೊಂದಿದ್ದರೆ, ನೀವು ಜಿ-ಮೇಲ್‌, ಗೂಗಲ್‌ ಫೋಟೋಸ್‌ ಮತ್ತು ಗೂಗಲ್‌ ಡ್ರೈವ್‌ ಅಪ್ಲಿಕೇಶನ್‌ಗಳನ್ನು ಎರಡು ಅಕೌಂಟ್‌ಗಳಲ್ಲೂ ಬಳಸಬಹುದು.ಇದಲ್ಲದೆ ಸ್ವದೇಶಿ ಕ್ಲೌಡ್‌ ಸ್ಟೋರೇಜ್‌ ಸೇವೆಯಾದ ಡಿಜಿಬಾಕ್ಸ್ ಅನ್ನು ಸೈನ್‌ ಇನ್‌ ಆದರೆ ನಿಮಗೆ 20GB ಉಚಿತ ಸ್ಟೋರೇಜ್‌ ಸ್ಪೇಸ್‌ ದೊರೆಯಲಿದೆ. ಇದರಲ್ಲಿ ಖಾತೆಯನ್ನು ರಚಿಸಲು, ನಿಮ್ಮ ಡಿಜಿಸ್ಪೇಸ್ ಮತ್ತು ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ನಮೂದಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಗೂಗಲ್‌ ಎರಡು ಅಕೌಂಟ್‌ನಿಂದ 30GB ಸ್ಟೋರೇಜ್‌ ಮತ್ತು ಡಿಜಿಬಾಕ್ಸ್‌ನ 20GB ಸ್ಟೋರೇಜ್‌ ಸ್ಪೇಸ್‌ ಉಚಿತವಾಗಿ ಸಿಗಲಿದೆ. ಇದೆಲ್ಲವೂ ಸೇರಿ ಒಟ್ಟು 50GB ಸ್ಟೋರೇಜ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಕ-ಡೋಸ್ COVID ಜಬ್ ಸ್ಪುಟ್ನಿಕ್ ಲೈಟ್ಗೆ ತುರ್ತು ಬಳಕೆಯ ಅಧಿಕಾರವನ್ನು ಸರ್ಕಾರಿ ಸಮಿತಿ ಶಿಫಾರಸು ಮಾಡಿದೆ;

Sat Feb 5 , 2022
ವಿವಿಧ ನಿಯಂತ್ರಕ ನಿಬಂಧನೆಗಳಿಗೆ ಒಳಪಟ್ಟು ಏಕ-ಡೋಸ್ COVID-19 ಲಸಿಕೆ ಸ್ಪುಟ್ನಿಕ್ ಲೈಟ್‌ಗೆ ನಿರ್ಬಂಧಿತ ತುರ್ತು ಬಳಕೆಯ ಅಧಿಕಾರವನ್ನು (EUA) ನೀಡುವಂತೆ ಭಾರತದ ಕೇಂದ್ರ ಔಷಧ ಪ್ರಾಧಿಕಾರದ ಪರಿಣಿತ ಸಮಿತಿ ಶುಕ್ರವಾರ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸ್ಪುಟ್ನಿಕ್ ಲೈಟ್ ಘಟಕ-1 ರಂತೆಯೇ ಇರುತ್ತದೆಸ್ಪುಟ್ನಿಕ್ ವಿ. ಅಧಿಕೃತ ಮೂಲಗಳ ಪ್ರಕಾರ, ಜನವರಿ 31 ರಂದು ಎಸ್‌ಇಸಿ ಸಭೆಯಲ್ಲಿ ಮಾಡಿದ ಶಿಫಾರಸುಗಳ ಬೆಳಕಿನಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆ ಮತ್ತು […]

Advertisement

Wordpress Social Share Plugin powered by Ultimatelysocial