ತಾತ- ಮೊಮ್ಮಗನ ಭಾವನಾತ್ಮಕ ಯಾನ.

ಹಿರಿಯ ನಟ ಅನಂತ್ ನಾಗ್ ಮತ್ತು ದಿಗಂತ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ಈ ಬಾರಿ ತಾತ ಮೊಮ್ಮಗನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ‘ತಿಮ್ಮಯ್ಯ & ತಿಮ್ಮಯ್ಯ’ ಸಿನಿಮಾದಲ್ಲಿ ಸೀನಿಯರ್ ತಿಮ್ಮಯ್ಯನಾಗಿ ಅನಂತ್ ನಾಗ್ ಮತ್ತು ಜೂನಿಯರ್ ತಿಮ್ಮಯ್ಯನಾಗಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಈ ತಾತ-ಮೊಮ್ಮಗನ ಕಥೆಯನ್ನು ತೆರೆಮೇಲೆ ಸಂಜಯ್ ಶರ್ಮಾ ಹೇಳಿದ್ದಾರೆ ತನ್ನ ಗೆಳತಿ ಸೌಮ್ಯಾ (ಶುಭ್ರ) ಜೊತೆಗೆ ವಿದೇಶಕ್ಕೆ ಹೋಗಿ ನೆಲೆಸಬೇಕು, ಇಲ್ಲಿರುವ ಆಸ್ತಿಯನ್ನೆಲ್ಲ ಮಾರಬೇಕು ಎಂಬುದು ಜೂ. ತಿಮ್ಮಯ್ಯನ (ದಿಗಂತ್‌) ಪ್ಲ್ಯಾನ್. ಎಲ್ಲ ಅಂದುಕೊಂಡಂತೆ ಆಯಿತು ಎನ್ನುವಾಗಲೇ, ಕೂರ್ಗ್‌ನಲ್ಲಿರುವ ಸೀನಿಯರ್ ತಿಮ್ಮಯ್ಯನನ್ನು (ಅನಂತ್ ನಾಗ್‌) ಮೂರು ತಿಂಗಳು ನೋಡಿಕೊಳ್ಳುವ ಹೊಣೆ ಜೂ. ತಿಮ್ಮಯ್ಯನ ಹೆಗಲಿಗೆ ಬೀಳುತ್ತದೆ. ಸೀನಿಯರ್ ತಿಮ್ಮಯ್ಯನಿಗೆ ವಯಸ್ಸಾಗಿದ್ದರೂ, ಸೃಷ್ಟಿಸುವ ಸಮಸ್ಯೆಗಳು, ಹಠ ಸಾಮಾನ್ಯವೇನಲ್ಲ! ಇಂಥ ತಾತನನ್ನು ಮೂರು ತಿಂಗಳು ಸಂಭಾಳಿಸುವ ಮೊಮ್ಮಗನಿಗೆ ಆಗುತ್ತದೆಯೇ? ಅಂದುಕೊಂಡಂತೆ ಆತ ವಿದೇಶಕ್ಕೆ ಹೋಗುತ್ತಾನಾ? ಮೊಮ್ಮಗನ ಪ್ರೇಮಕಥೆ ಏನಾಗುತ್ತದೆ ಅನ್ನೋದೇ ‘ತಿಮ್ಮಯ್ಯ & ತಿಮ್ಮಯ್ಯ’ ಸಿನಿಮಾದ ಕೂತುಹಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಶಿಖರ್ಜಿ ಉಳಿಸಿ ಅಭಿಯಾನ ಆರಂಭ ಜಾರ್ಖಂಡ್ ಸರ್ಕಾರದ ವಿರುದ್ಧ ಪ್ರತಿಭಟನೆ.

Wed Dec 28 , 2022
ಜೈನ ಸಮುದಾಯದ ತೀರ್ಥ ಕ್ಷೇತ್ರ ಎಂದೇ ಕರೆಯಿಸಿಕೊಳ್ಳುವ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡದೇ ಅದರ ಪಾವಿತ್ರ್ಯತೆ ಕಾಪಾಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಶಿಖರ್ಜಿ ಉಳಿಸಿ ಎಂಬ ಅಭಿಯಾನ ನಡೆಸಲಾಯಿತು..ಅದರಂಗವಾಗಿ ಜೈನ ಸಮಾಜದ ಸಾವಿರಾರು ಜನ ಪ್ರತಿಭಟನಾ ರ್‍ಯಾಲಿ ನಡೆಸಿ, ತಹಸೀದಾರ ಮುಖಾಂತರ ಕೇಂದ್ರ ಹಾಗೂ ಜಾರ್ಖಂಡ್ ಸರ್ಕಾರಕ್ಕೆ ಮನವಿ ಸಲ್ಲಿಸಿದರು.. ನಗರದ ರೈಲ್ವೆ ನಿಲ್ದಾಣ ಎದುರಿನ ಜೈನ್ ಮಂದಿರದಿಂದ ಪ್ರತಿಭಟನಾ ರಾಲಿ ಆರಂಭಗೊಳಿಸಿ ತಹಶಿಲ್ದಾರರಕಚೇರಿವರೆಗೂ ಪ್ರತಿಭಟನಾ […]

Advertisement

Wordpress Social Share Plugin powered by Ultimatelysocial