ತೂಕ ಇಳಿಕೆಗೆ ಗ್ರೀನ್‌ ಟೀ ಯಾವ ಟೈಮ್‌ನಲ್ಲಿ ಕುಡಿದರೆ ಒಳ್ಳೆಯದು.

ತೂಕ ಇಳಿಕೆಗೆ ಗ್ರೀನ್ ಟೀ ಕುಡಿಯೋದು ಬೆಸ್ಟ್; ಆದ್ರೆ ಯಾವ ಸಮಯದಲ್ಲಿ ಸೇವಿಸಬೇಕು ಗೊತ್ತಾ? ಇಲ್ಲವಾದರೆ ಅಪಾಯವೂ ಆಗಬಹುದು!ಬೆಳಿಗ್ಗೆ ಎದ್ದ ತಕ್ಷಣ ಕೈಯಲ್ಲಿ ಒಂದು ನ್ಯೂಸ್ ಪೇಪರ್, ಹಾಗೇನೇ ಜೊತೆಗೆ ಬಿಸಿ ಬಿಸಿ ಚಹಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಲ್ವಾ?ಇದು ನಮ್ಮ ದೇಶದಲ್ಲಿ ಹಲವರ ದಿನನಿತ್ಯದ ಚಟುವಟಿಕೆ. ಒಂದು ಗುಟುಕು ಬಿಸಿಬಿಸಿ ಚಹಾ ನಾಲಿಗೆಗೆ ತಾಕಿದರೆ ಸಾಕು ಆ ಬೆಳಗು ಎಷ್ಟು ಆಹ್ಲಾದಕರ ಎನಿಸುತ್ತೆ. ಅಷ್ಟೇ ಅಲ್ಲ ದೇಹದಲ್ಲಿ ಅದೇನೋ ಹೊಸತನ, ಹೊಸ ವೈಬ್ರೇಶನ್ ಹುಟ್ಟಿಕೊಳ್ಳುತ್ತೆ. ದೇಹದಲ್ಲಿರುವಂತಹ ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡಲು ದೇಹವನ್ನು ಇಡೀ ದಿನ ಸಕ್ರಿಯವಾಗಿರಿಸಿಕೊಳ್ಳಲು ಕಾಫಿಗಿಂತ ಚಹಾ ಹೆಚ್ಚು ಉತ್ತಮ ಎಂದು ಹಲವರು ಭಾವಿಸುತ್ತಾರೆ. ಗ್ರೀನ್ ಟೀ, ಬ್ಲಾಕ್ ಟೀ, ನೀಲಿ ಪಿ ಟಿ, ವೈಟ್ ಟಿ ಹೀಗೆ ವಿಶ್ಚಾದ್ಯಂತ ಜನರು ಇಷ್ಟಪಡುವಂತಹ ತರಾವರಿ ಟೀ ಲಭ್ಯವಿದೆ.ಚಹಾ ಕುಡಿಯುವುದು ದೇಹದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಚಹಾವನ್ನು ಯಾವ ಸಮಯದಲ್ಲಿ ಕುಡಿಯಬೇಕು, ಯಾವ ರೀತಿಯ ಚಹಾ ಕುಡಿಯಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ನೀವು ದಿನವೂ ಗ್ರೀನ್ ಟೀ ಕುಡಿಯಲು ಅಭ್ಯಾಸ ಮಾಡಿಕೊಂಡಿದ್ದರೆ ಈ ಕೆಲವು ಮುಖ್ಯವಾದ ವಿಚಾರಗಳನ್ನು ತಿಳಿದುಕೊಳ್ಳಿ.ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಚಹಾದ ವಿಷಯಕ್ಕೆ ಬಂದರೆ ಇತರ ಎಲ್ಲಾ ಚಹಾ ಗಳಿಗಿಂತ ಗ್ರೀನ್ ಟಿ ಸೇವನೆ ಬಹಳ ಒಳ್ಳೆಯದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹಾಗೂ ಉರಿಯುತದ ಗುಣಲಕ್ಷಣಗಳು ಇರುತ್ತವೆ. ಹಾಗಾಗಿ ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಗ್ರೀನ್ ಟೀ ಸೇರಿಸುವುದು ಒಳ್ಳೆಯದು. ಅತಿಯಾದರೆ ಅಮೃತವು ವಿಷ ಎನ್ನುವಂತೆ ಗ್ರೀನ್ ಟೀಯನ್ನು ಕೂಡ ಮಿತವಾಗಿ ಸೇವನೆ ಮಾಡಬೇಕು ಜೊತೆಗೆ ಸರಿಯಾದ ಸಮಯಕ್ಕೆ ಸೇವನೆ ಮಾಡಬೇಕು. ಇಲ್ಲವಾದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.ನಿಮಗೆ ಒಂದು ಕಪ್ ಚಹಾ ಕುಡಿದರೆ ಕಿಕ್ ನೀಡಿದ ಹಾಗೆ ಆಗುತ್ತೆ ಎಂದು ಯಾವತ್ತಾದರೂ ಅನಿಸಿದೆಯಾ? ಹಾಗಾದ್ರೆ ಅದಕ್ಕೆ ಕಾರಣ ಚಹಾದಲ್ಲಿ ಇರುವಂತಹ ಕೆಫೀನ್ ಅಂಶ. ಗ್ರೀನ್ ಟೀಗೆ ಹೋಲಿಸಿದರೆ ಬ್ಲ್ಯಾಕ್ ಟೀಯಲ್ಲಿ ಕೆಫೀನ್ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಅತಿ ಹೆಚ್ಚು ಕೆಫೀನ್ ಇರುವ ಟೀಯನ್ನು ದಿನದ ಎಲ್ಲಾ ಸಮಯದಲ್ಲಿಯೂ ಸೇವಿಸಬಾರದು.ಗ್ರೀನ್ ಟೀ ಅಥವಾ ಹಸಿರು ಚಹಾದಲ್ಲಿ ಇರುವ ಕೆಫೀನ್ ಅಂಶ ಅಷ್ಟು ಹೆಚ್ಚಿನ ಸೈಡ್ ಎಫೆಕ್ಟ್ ಹೊಂದಿಲ್ಲ. ಬುದ್ಧಿ, ಏಕಾಗ್ರತೆ ಹೆಚ್ಚಾಗಲು ಹಾಗೂ ನಮ್ಮನ್ನು ಎನರ್ಜಿಟಿಕ್ ಆಗಿ ಇಡಲು ಸಹಾಯ ಮಾಡುತ್ತೆ. ಆದಾಗ್ಯೂ ಕೆಫೀನ್ ಅಂಶ ಅಧಿಕವಾದರೆ ಕೆಲವು ತೊಂದರೆಗಳು ಆಗಬಹುದು ಆಹಾರವನ್ನು ಜೀರ್ಣಿಸಲು ಸಹಾಯ ಮಾಡುವಂತಹ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆ ಇದರಿಂದ ಜಾಸ್ತಿ ಆಗಬಹುದು ಆಮ್ಲ ದೇಹದಲ್ಲಿ ಜಾಸ್ತಿ ಆದರೆ ಹೊಟ್ಟೆಯಲ್ಲಿ ತೀವ್ರ ಸಮಸ್ಯೆ ಕಾಣಿಸುತ್ತಿದೆ.ಗ್ರೀನ್ ಟೀ ಕೂಡ ಕುಡಿಯುವುದು ಅತಿಯಾದರೆ ಆರೋಗ್ಯದ ಮೇಲೆ ಕೆಲವು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. ಅದರಲ್ಲೂ ಮುಖ್ಯವಾಗಿ ನೀವು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸುವುದಾದರೆ ಈ ಕೆಲವು ಸಮಸ್ಯೆಗಳನ್ನು ಎದುರಿಸುವ ಸಂಭವ ಇರುತ್ತೆ. ಹುಳಿತೇಗು, ಹೊಟ್ಟೆಯಲ್ಲಿ ಅಜೀರ್ಣದ ಸಮಸ್ಯೆ, ತಲೆನೋವು, ಆತಂಕ, ರಕ್ತ ಹೀನತೆ, ಮಹಿಳೆಯರಲ್ಲಿ ಅತಿಯಾದ ರಕ್ತಸ್ರಾವ, ತಲೆನೋವು, ವಾಕರಿಕೆ, ಪಿತ್ತಜನನಾಂಗದ ಸಮಸ್ಯೆ, ಮೂಳೆಯ ಅನಾರೋಗ್ಯ ಮೊದಲಾದ ಸಮಸ್ಯೆಗಳು ಕೂಡ ಗ್ರೀನ್ ಟೀ ಸೇವನೆಯಿಂದ ಉಂಟಾಗಬಹುದು. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟಿ ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪೌಷ್ಟಿಕ ತಜ್ಞ ನಯಂಬಿಯಾರ್ ತೇಜಶ್ವಿ ಹೇಳುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನಿಂದ ಕೆಸಿಸಿ ಕ್ರಿಕೆಟ್ ಕದನ: ಕಿಚ್ಚ, ಶಿವಣ್ಣನ ಕ್ರಿಕೆಟ್ ಖದರ್.

Fri Feb 24 , 2023
ಬೆಂಗಳೂರು: ಸಿನಿಮಾ, ಕ್ರಿಕೆಟ್ ಫ್ಯಾನ್ಸ್ ಗೆ ಇಂದು ಮತ್ತು ನಾಳೆ ಹಬ್ಬವಾಗಲಿದೆ. ಇಂದಿನಿಂದ ಕೆಸಿಸಿ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 6 ತಂಡಗಳನ್ನೊಳಗೊಂಡ ಕೆಸಿಸಿ ಕಪ್ ನಡೆಯಲಿದೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ, ಡಾಲಿ ಧನಂಜಯ್, ಉಪೇಂದ್ರ ಅವರ ನಾಯಕತ್ವದ ತಂಡಗಳು ಕಣಕ್ಕಿಳಿಯಲಿವೆ. ಮೊನ್ನೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ ಶುರುವಾಗಿದೆ. ಇಂದು ಮತ್ತು ನಾಳೆ ಟೂರ್ನಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ […]

Advertisement

Wordpress Social Share Plugin powered by Ultimatelysocial