ಜ್ಞಾನವಾಪಿ ಮಸೀದಿ ಪ್ರಕರಣ: 45 ನಿಮಿಷಗಳ ಕಾಲ ವಾದ-ಪ್ರತಿವಾದ ಆಲಿಸಿದ ಕೋರ್ಟ್​​,ನಾಳೆ ತೀರ್ಪು ಪ್ರಕಟಿಸಲಿದೆ.

ವಾರಾಣಸಿ: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

ತೀವ್ರ ಕುತೂಹಲ ಮೂಡಿಸಿರುವ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ವಿಚಾರದ ಬಗ್ಗೆ ವಾದ -ಪ್ರತಿವಾದ ಆಲಿಸಿದ ಕೋರ್ಟ್​​​​ ಮಂಗಳವಾರಕ್ಕೆ ತೀರ್ಪು ಪ್ರಕಟಿಸಲಿದೆ.

ಜಿಲ್ಲಾ ನ್ಯಾಯಾಧೀಶ ಎಕೆ ವಿಶ್ವೇಶ ಅವರು ಪ್ರಕರಣದ ವಿಚಾರಣೆಯನ್ನು ಆಲಿಸಿದ್ದಾರೆ. ಕಾಶಿವಿಶ್ವನಾಥ ದೇವಾಲಯ ಹಾಗೂ ಜ್ಞಾನವಾಪಿ ಮಸೀದಿ ಪರವಾಗಿ ಇಬ್ಬರ ವಾದವನ್ನು 45 ನಿಮಿಷಗಳವರೆಗೆ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ನಾಳೆಗೆ ಪ್ರಕಟಿಸಲಾಗುವುದು ಎಂದು ವಿಚಾರಣೆಯನ್ನು ಮುಂದೂಡಿದ್ದಾರೆ.

ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಕೇವಲ 19 ಕೌನ್ಸಿಲರ್​​ ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ ಒಟ್ಟು 23 ಮಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಮಾಜಿ ಕೋರ್ಟ್​​ ಕಮಿಷನರ್​ ಅಜಯ್​ ಮಿಶ್ರಾ ಅವರನ್ನು ಸಹ ಒಳಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.

ಇನ್ನು ಈ ಪ್ರಕರಣ ಸುಪ್ರೀಂಕೋರ್ಟ್​ ಅಂಗಳಕ್ಕೂ ವಿಚಾರಣೆಗೆ ಬಂದಿತ್ತು. ಪ್ರಕರಣವನ್ನು ಸ್ಥಳೀಯ ನ್ಯಾಯಾಲಯದಲ್ಲೇ ಬಗೆಹರಿಸುವಂತೆ ಆದೇಶಿಸಿತ್ತು. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಜಾಗವನ್ನು ಸೀಲ್​ ಮಾಡುವಂತೆಯೂ ಸುಪ್ರೀಂ ಆದೇಶಿಸಿತ್ತು. ಸದ್ಯ ತೀರ್ಪಿಗಾಗಿ ಇಡೀ ದೇಶವೇ ಕಾಯುತ್ತಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೃಥ್ವಿ ಅಂಬರ್ - ಮಿಲನಾ ನಾಗರಾಜ್ ಅಭಿನಯದ "F0R REGN" ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ.

Mon May 23 , 2022
  ಮೇಕಿಂಗ್ ವಿಡಿಯೋ ಮೂಲಕ ನಿರ್ದೇಶಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಚಿತ್ರತಂಡ. 2020ರ ಸೂಪರ್ ಹಿಟ್ ಚಿತ್ರಗಳಾದ “ದಿಯಾ” ಹಾಗೂ “ಲವ್ ಮಾಕ್ಟೇಲ್” ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯದಲ್ಲಿ ಮೂಡಿಬರುರುತ್ತಿರುವ “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ‌. ಮೇ 24 ರಂದು ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಹುಟ್ಟುಹಬ್ಬ. ಆ ಸಂಭ್ರಮಕ್ಕಾಗಿ […]

Advertisement

Wordpress Social Share Plugin powered by Ultimatelysocial