ಹರ್ಬಟ್ ಹೋಪ್ ರಿಸ್ಲೆ ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಜ್ಞರು

ಹರ್ಬಟ್ ಹೋಪ್ ರಿಸ್ಲೆ ಭಾರತದ ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಧಾನಗಳಲ್ಲಿ ಪ್ರಮುಖ ಸ್ಥಾನ ಪಡೆದವರು. ರಿಸ್ಲೆ ಬ್ರಿಟಿಷ್ ಪುರಾತತ್ತ್ವಜ್ಞ ಹಾಗೂ ಮಾನವ ಶಾಸ್ತ್ರಜ್ಞ ಅಧಿಕಾರಿಯಾಗಿದ್ದರು.
ಹರ್ಬಟ್ ಹೋಪ್ ರಿಸ್ಲೆ 1851ರ ಜನವರಿ 4ರಂದು ಜನಿಸಿದರು. ತಂದೆ ಜಾನ್ ಹೊಲ್ ಪೊರ್ಡ್ ರಿಸ್ಲೆ. ಇವರು ಮೂಲತಃ ವಿನ್ಚಸ್ಟರ್ನಿಂದ ಬಂದವರು. ರಿಸ್ಲೆ 1873ರಲ್ಲಿ ಬಿ.ಎ. ಪದವಿಯನ್ನು ಪಡೆದು ಭಾರತದ ಇಂಡಿಯನ್ ಸಿವಿಲ್ ಸರ್ವಿಸ್ನ ಸೇವೆಯ ಮೇರೆಗೆ ಭಾರತಕ್ಕೆ ಬಂದರು (1873). ಇವರ ಸೇವೆ ಮಿಡ್ನಾಪುರದಲ್ಲಿ ಪ್ರಾರಂಭವಾಯಿತು. ಆಗ ಅಲ್ಲಿನ ವಿವಿಧ ಸಂಸ್ಕೃತಿ ಮತ್ತು ವೈವಿಧ್ಯಮಯ ಜನಸಮೂಹ ಕಂಡು, ಅವರ ಬಗ್ಗೆ ಆಸಕ್ತಿ ಮೂಡಿ ಅಧ್ಯಯನವನ್ನು ಆರಂಭಿಸಿ, ಓರಾನ್ ಆದಿವಾಸಿಗಳ ಬಗ್ಗೆ ಪ್ರಬಂಧವನ್ನು ಬರೆದರು.
ಹಂಟರ್ ಎಂಬಾತ ಭಾರತೀಯ ಸಂಖ್ಯಾಶಾಸ್ತ್ರ ಸರ್ವೇಕ್ಷಣ (1869) ವನ್ನೂ ಇಂಪೀರಿಯಲ್ ಗೆಜಿಟಿಯರನ್ನೂ (1881) ಪ್ರಕಟಿಸಿದರು. ರಿಸ್ಲೆಯ ಒಲವು ಮಾನವಶಾಸ್ತ್ರ, ಸಮಾಜ ಶಾಸ್ತ್ರದ ಕಡೆ ಹೆಚ್ಚು ಇದ್ದುದರಿಂದ ಇವರನ್ನು ಭಾರತೀಯ ಸಂಖ್ಯಾಶಾಸ್ತ್ರ ಸರ್ವೇಕ್ಷಣೆಯಲ್ಲಿ ಸಹಾಯಕ ನಿರ್ದೇಶಕನಾಗಿ ಸೇರಿಸಿಕೊಳ್ಳಲಾಯಿತು(1875). ಇವರು ಗುಡ್ಡಗಾಡು ಜಿಲ್ಲೆಗಳಾದ ಹಜಾರಿಬಾಗ್ ಮತ್ತು ಲೂಹೋಡಗದ ಗೆಜಿಟಿಯರನ್ನು ಹೊರತಂದರು. ಇವರ ಕಾರ್ಯ ದಕ್ಷತೆಯನ್ನು ಅರಿತ ಪಶ್ಚಿಮ ಬಂಗಾಲ ಸರ್ಕಾರ 1879ರಲ್ಲಿ ಇವರನ್ನು ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಿತು. ಅನಂತರ ಇವರು ತಮ್ಮ ಕಾರ್ಯ ವ್ಯಾಪ್ತಿಯನ್ನು ಛೋಟಾ ನಾಗಪುರಕ್ಕೆ ವಿಸ್ತರಿಸಿದರು(1880). ಜರ್ಮನ್ ಮಹಿಳೆಯೊಬ್ಬಳನ್ನು ಮದುವೆಯಾದರು. ಇವರ ಕಾರ್ಯ ದಕ್ಷತೆಯನ್ನು ಮೆಚ್ಚಿದ ಬಂಗಾಲದ ಲೆಫ್ಟಿನೆಂಟ್ ಗೌರ್ನರ್ ರಿವರ್ಸ್ ತಾಮ್ಸನ್ ಇವರನ್ನು ಬುಡಕಟ್ಟು ಸಮೂಹದ ಬಗ್ಗೆ ಅಧ್ಯಯನ ಮಾಡಲು ಆಯ್ಕೆ ಮಾಡಿದರು (1885). ಜೇಮ್ಸ್ ಎಂಬವರು ತಾವು ಪಶ್ಚಿಮ ಬಂಗಾಲದ ಜನರ ಬಗ್ಗೆ ಕೈಗೊಂಡ ಅಧ್ಯಯನದ ಅಪೂರ್ಣ ಮಾಹಿತಿಗಳನ್ನು ರಿಸ್ಲೆಗೆ ನೀಡಿದರು. ಅದನ್ನು ಬಳಸಿಕೊಂಡ ರಿಸ್ಲೆ ಅಪಾರ ಪರಿಶ್ರಮದಿಂದಾಗಿ ದಿ ಡಿಸ್ಕ್ರಿಪ್ಟ್ ಎತ್ನಾಲಜಿ ಆಫ್ ಬೆಂಗಾಲ್ (1872) ಮತ್ತು ಗೆಜಿಟಿಯರ್ ಆಫ್ ಸಿಕ್ಕಿಂ (1894) ಎಂಬ ಗ್ರಂಥಗಳನ್ನು ಪ್ರಕಟಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐದು ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಗದಗದಲ್ಲಿ ವಿರಾಟಪುರ ವಿರಾಗಿ ಟ್ರೈಲರ್ ಬಿಡುಗಡೆ.

Wed Jan 4 , 2023
ವಿರಾಟಪುರ ವಿರಾಗಿ ಸಿನಿಮಾವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ವಾರ ಸಿನಿಮಾ ತೋರಿಸುವೆ ಎಂದ ಸಚಿವ ಸಿ.ಸಿ. ಪಾಟೀಲ್ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದಿರುವ, ಹಾನಗಲ್ಲ ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ ಗದಗನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯಿತು. ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು, ನಾಡಿನ ಅನೇಕ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೂ ಮುನ್ನ […]

Advertisement

Wordpress Social Share Plugin powered by Ultimatelysocial