ಶಾಸಕ ಹರತಾಳು ಹಾಲಪ್ಪ ವಿರುದ್ಧ ಮರಳು ಲಾರಿಗಳಿಂದ ಕಮಿಷನ್ ಪಡೆಯುತ್ತಿದ್ದಾರೆ!

ಧರ್ಮಸ್ಥಳ: ರಾಜ್ಯ ರಾಜಕೀಯದಲ್ಲಿ ಮತ್ತೆ ಆಣೆ-ಪ್ರಮಾಣಗಳು ಆರಂಭವಾಗಿವೆ. ಶಾಸಕ ಹರತಾಳು ಹಾಲಪ್ಪ ವಿರುದ್ಧ ಮರಳು ಲಾರಿಗಳಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವಂತೆ ಹಾಕಿದ್ದ ಸವಾಲು ಸ್ವೀಕರಿಸಿರುವ ಹರತಾಳು ಹಾಲಪ್ಪ ಇದೀಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಶಾಸಕ ಹಾಲಪ್ಪ, ದೇವರ ಮುಂದೆ ಪ್ರಮಾಣ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಮರಳು ದಂಧೆಯಲ್ಲಿ ಯಾವುದೇ ಕಮಿಷನ್ ನಾನು ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ. ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಿರುವ ಬೇಳೂರು ಗೋಪಾಲಕೃಷ್ಣ ಅವರಿಗೆ ದೇವರು ಸದ್ಬುದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.ಬೇಳೂರು ಗೋಪಾಲ ಕೃಷ್ಣಗೆ ಬುದ್ಧಿ ಭ್ರಮಣೆಯಾಗಿದೆ. ನನಗೆ ಸವಾಲು ಹಾಕಿ ಇವರು ಪಲಾಯನವಾದ ಮಾಡಿದ್ದಾರೆ. ಧರ್ಮಸ್ಥಳಕ್ಕೆ ಬರದೇ ಗೋವಾ ಚುನಾವಣೆಗೆ ಹೋಗುತ್ತೇನೆ ಎಂದಿದ್ದಾರೆ. ಇವರಿಗೆ ಗೋವಾ ಚುನಾವಣೆಗೆ ಕರೆದವರು ಯಾರು. ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಹೊರಟಿದ್ದಾರೆ. ದೇವರೆದುರು ನಾನು ಆಣೆ-ಪ್ರಮಾಣ ಮಾಡಿದ್ದೇನೆ. ನಾನು ಯಾವುದೇ ಕಮಿಷನ್ ಹಣ ಪಡೆದಿಲ್ಲ. ಪ್ರತಿ ಬಾರಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದೇವರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೆಹರು ಒಮ್ಮೆ 'ಗೋನ್ಸ್ ಆರ್ ಸ್ಟ್ರೇಂಜ್' ಎಂದು ಹೇಳಿದರು, ಮಮತಾ ಅದನ್ನು ಪುನರಾವರ್ತಿಸಬಹುದು; ಬಿಜೆಪಿಯ 'ಉಲ್ಟಿ ಗಿಂಟಿ' ಶುರುವಾಗಿದೆ: ದಿಗಂಬರ್ ಕಾಮತ್

Sat Feb 12 , 2022
  ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಗೋವಾದಲ್ಲಿ ಸರ್ಕಾರ ರಚಿಸಲು ವಿರೋಧ ಮತಗಳ ವಿಭಜನೆಯ ಮೇಲೆ ತನ್ನ ಭರವಸೆಯನ್ನು ಹೊಂದಿದ್ದು, ಇತರ ರಾಜ್ಯಗಳ ಪ್ರಾದೇಶಿಕ ರಾಜಕೀಯ ಪಕ್ಷಗಳು ಇಲ್ಲಿ ಕಾಲಿಡಲು ಪ್ರಯತ್ನಿಸುತ್ತಿವೆ. ಗೋವಾದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್, ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ “ಹೊರಗಿನ” ಪಕ್ಷಗಳಿಗೆ ಯಾವುದೇ ಎಳೆತ ಸಿಗುವುದಿಲ್ಲ ಎಂದು ಹೇಳುತ್ತಾರೆ. ಮಾರ್ಗೋವಾದಿಂದ ಏಳು ಬಾರಿ ಶಾಸಕರಾಗಿ ಮತ್ತು […]

Advertisement

Wordpress Social Share Plugin powered by Ultimatelysocial