ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

 ಈ ಮೂಲಕ ಹಾರ್ದಿಕ್ ಪಾಂಡ್ಯ ಕೂಡ ಐಪಿಎಲ್ ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ನಾಯಕ ಎನಿಸಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಜಿಟಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಏನು ಹೇಳಿದರು ಕೇಳಿ.

ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ವರ್ಷವೇ ಗುಜರಾತ್ ಟೈಟಾನ್ಸ್ (Gujarat Titans) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಕೂಡ ಐಪಿಎಲ್ (IPL) ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ನಾಯಕ ಎನಿಸಿಕೊಂಡರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ಕೈಗೊಂಡ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 130 ರನ್ ಪೇರಿಲಸಷ್ಟೇ ಶಕ್ತವಾಯಿತು. ಟೂರ್ನಿಯ ಸರ್ವಾಧಿಕ ರನ್ ಸ್ಕೋರರ್ ಜೋಸ್ ಬ್ಲಟರ್‌ಗೆ (39ರನ್, 35 ಎಸೆತ, 5 ಬೌಂಡರಿ) ಕಡಿವಾಣ ಹೇರಿ ಟೈಟ್ ಬೌಲಿಂಗ್ ಮಾಡಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಜಿಟಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ (hardik Pandya) ಏನು ಹೇಳಿದರು ಕೇಳಿ.

“ನೀವು ಒಂದು ತಂಡವಾಗಿ ಆಡಿದರೆ, ನಿಮ್ಮ ಜೊತೆಗಿರುವ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಏನು ಬೇಕಾದರೂ ಸಾಧಿಸಿಬಹುದು. ವಿಶ್ವದ ಯಾವುದೇ ತಂಡಕ್ಕೆ ಇದೊಂದು ಉತ್ತಮ ಉದಾಹರಣೆ. ನಾನು ಮತ್ತು ಆಶಿಶ್ ನೆಹ್ರಾ ಸರಿಯಾದ ಬ್ಯಾಟರ್ ಮತ್ತು ಬೌಲರ್​ಗಳನ್ನು ಆಡಿಸುವ ಬಗ್ಗೆ ಮಾತನಾಡಿಕೊಳ್ಳುತ್ತೇವೆ. ನಾನು ನೋಡಿದ ಹಾಗೆ ಟಿ20 ಕ್ರಿಕೆಟ್ ಬ್ಯಾಟರ್​ಗಳ ಪಂದ್ಯ. ಆದರೆ, ಬೌಲರ್​​ಗಳು ನಿಮಗೆ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಅನೇಕ ಪಂದ್ಯಗಳಲ್ಲಿ ಜಯ ಸಾಧಿಸಿದ್ದೇವೆ. ಆದರೆ, ಪಂದ್ಯ ಮುಗಿದ ಬಳಿಕ ಪ್ರತಿ ಬಾರಿ ನಾವು ಏನು ತಪ್ಪು ಮಾಡಿದೆವು? ಇಲ್ಲಿ ಉತ್ತಮ ಪಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. 5 ಫೈನಲ್ ಪಂದ್ಯವನ್ನು ಗೆದ್ದ ನಾನು ಅದೃಷ್ಠ ಎನಿಸುತ್ತದೆ. ಇದು ತುಂಬಾನೆ ವಿಶೇಷ. ಮೊದಲ ಆವೃತ್ತಿಯಲ್ಲೇ ನಾವು ಪ್ರಶಸ್ತಿ ಗೆದ್ದಿರುವುದರಿಂದ ಮುಂಬರುವ ಪೀಳಿಗೆಯಲ್ಲೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ,” ಎಂದು ಹೇಳಿದ್ದಾರೆ.

“ನಾನು ಕಷ್ಟಪಟ್ಟು ಏನು ಮಾಡಿದ್ದೇನೆ ಎಂಬುದನ್ನು ಸರಿಯಾದ ಸಮಯದಲ್ಲಿ ತೋರಿಸಲು ಬಯಸುತ್ತೇನೆ. ಆ ದಿನ ಇಂದು. ನಾನು ನನ್ನ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಬೌಲಿಂಗ್ ಮಾಡಿದ್ದೇನೆ. ನನ್ನ ಮೊದಲ ಓವರ್​ನ ಎರಡನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಔಟಾದರು. ಉತ್ತಮ ಲೆಂತ್​​ನಲ್ಲಿ ಬೌಲಿಂಗ್ ಮಾಡಿದೆ ಅದು. ಇದು ನನಗೆ ನನ್ನ ತಂಡಕ್ಕೆ ತುಂಬಾನೆ ಮುಖ್ಯವಾಗಿತ್ತು. ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿರುವುದು ತುಂಬಾ ಸಂಸತ ತಂದಿದೆ,” ಎಂಬುದು ಹಾರ್ದಿಕ್ ಮಾತು.

ಇನ್ನು ಸೋತ ತಂಡದ ನಾಯಕ ಸಂಜ ಸ್ಯಾಮ್ಸನ್ ಮಾತನಾಡಿ, ಈ ಸೀಸನ್ ನಮಗೆ ತುಂಬಾನೆ ವಿಶೇಷ. ಕಳೆದ ಎರಡು ಮೂರು ಸೀಸನ್​ಗಳು ನಮಗೆ ಹಾಗೂ ನಮ್ಮ ಅಭಿಮಾನಿಗಳಿಗೆ ತುಂಬಾನೆ ಕಷ್ಟಕರವಾಗಿತ್ತು. ಈಗ ಅವರಿಗೆ ಸಂತಸ ನೀಡಿದ್ದು ನಮಗೆ ಖುಷಿ ನೀಡಿದೆ. ನನ್ನ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಅತ್ಯುತ್ತಮ ಯುವ ಆಟಗಾರರು, ಅತ್ಯುತ್ತಮ ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದಾರೆ,” ಎಂದು ಹೇಳಿದರು.

ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಕ್ಕೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಬಾಜಿಕೊಂಡ ಜೋಸ್ ಬಟ್ಲರ್ ಮಾತನಾಡಿ, “ನಾವು ಟ್ರೋಫಿ ಗೆಲ್ಲಬೇಕಿತ್ತು. ಇದಕ್ಕೆ ಬೇಸರವಿದೆ. ಹಾರ್ದಿಕ್ ಪಾಂಡ್ಯ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು. ಅವರು ಇದಕ್ಕೆ ಅರ್ಹರು. ಈ ಟೂರ್ನಿಯಲ್ಲಿ ಆಡಿದ್ದಕ್ಕೆ ತುಂಬಾ ಸಂತಸವಿದೆ. ಮೈದಾನದಲ್ಲಿ ಪ್ರೇಕ್ಷಕರನ್ನು ನೋಡಲು ತುಂಬಾ ಖುಷಿ ಆಗುತ್ತದೆ,” ಎಂದು ಹೇಳಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

11 ಐಎಎಸ್ ಅಧಿಕಾರಿಗಳ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ!

Mon May 30 , 2022
ಹನ್ನೊಂದು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಭಾನುವಾರ ರಾತ್ರಿ ಆದೇಶ ಹೊರಡಿಸಿದೆ. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್ ಅವರನ್ನು ಅಭಿವೃದ್ಧಿ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬೆಂಗಳೂರು : 11 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಜನೀಶ್ ಗೋಯಲ್​ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಐಎಸ್​ಎನ್ ಪ್ರಸಾದ್​ ಅಭಿವೃದ್ಧಿ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ. ಉಮಾಶಂಕರ್ ಅವರನ್ನು ಕಂದಾಯ ಇಲಾಖೆಯ ಪ್ರಧಾನ […]

Advertisement

Wordpress Social Share Plugin powered by Ultimatelysocial