ನುಗ್ಗೆ, ಬೀಟ್‌ರೂಟ್‌ ದರ ಏರಿಕೆ

ಬೀದರ್: ಕಳೆದ ವಾರ ತರಕಾರಿ ಮಾರುಕಟ್ಟೆ ಬೆಲೆಯಲ್ಲಿ ಶತಕ ಬಾರಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಹಸಿ ಮೆಣಸಿನಕಾಯಿ ಈಗ ಸ್ವಲ್ಪ ಖಾರ ಇಳಿಸಿಕೊಂಡಿದೆ. ಬೆಲೆ ಹೆಚ್ಚಳದ ಖುಷಿಯಲ್ಲಿ ರೈತರು ಮಾರುಕಟ್ಟೆಗೆ ಒಮ್ಮೆಲೆ ಮೆಣಸಿನಕಾಯಿ ತಂದ ಕಾರಣ ಬೆಲೆ ಕಡಿಮೆಯಾಗಿದೆ.ಆದರೆ, ಒಣ ಮೆಣಸಿನಕಾಯಿ ಬೆಲೆಯಲ್ಲಿ ನಿರೀಕ್ಷಿತ ಇಳಿಕೆಯಾಗಿಲ್ಲ.ನುಗ್ಗೆಕಾಯಿ ಮತ್ತೆ ಏರಿ ಕುಳಿತಿದೆ. ಹಿರೇಕಾಯಿ ಬೆಲೆ ಏರಿಸಿಕೊಂಡು ಹಿರಿಹಿರಿ ಹಿಗ್ಗಿದರೆ, ಬೀಟ್‌ರೂಟ್‌ ಸಹ ಗಡ್ಡೆಗೆಣಸುಗಳ ಸಾಮ್ರಾಜ್ಯದಲ್ಲಿ ನನ್ನನ್ನು ಮೀರಿಸುವಂತಿಲ್ಲ ಎಂದು ಬೀಗುತ್ತಿದೆ.ಎರಡು ತಿಂಗಳಿಂದ ನುಗ್ಗೆಕಾಯಿ ಬೆಲೆ ನೂರು ರೂಪಾಯಿಗಿಂತ ಕೆಳಗೆ ಇಳಿದೇ ಇಲ್ಲ. ನುಗ್ಗೆಕಾಯಿ ಬೆಲೆ ಮತ್ತೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ. ಪ್ರತಿ ಕೆ.ಜಿಗೆ ₹ 130ರಂತೆ ಮಾರಾಟವಾಗುತ್ತಿದೆ. ಬೆಲೆ ಹೆಚ್ಚಳವಾದರೂ ನುಗ್ಗೆಕಾಯಿ ಪ್ರಿಯರು ಖರೀದಿ ನಿಲ್ಲಿಸಿಲ್ಲ. ಸಬ್ಬಸಗಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ, ಹಿರೇಕಾಯಿ ಹಾಗೂ ಬೀಟ್‌ರೂಟ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಳವಾಗಿದೆ.ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಕಡಿಮೆಯಾಗಿದೆ. ಕರಿಬೇವು ₹ 2 ಸಾವಿರ, ಬೆಳ್ಳುಳ್ಳಿ, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಇಳಿದಿದೆ.ಈರುಳ್ಳಿ, ಆಲೂಗಡ್ಡೆ, ಗಜ್ಜರಿ, ಬೀನ್ಸ್‌, ಡೊಣ ಮೆಣಸಿನಕಾಯಿ, ಚವಳೆಕಾಯಿ, ಎಲೆಕೋಸು, ಹೂಕೋಸು, ಮೆಂತೆ ಸೊಪ್ಪು, ಟೊಮೆಟೊ, ಕೊತಂಬರಿ ಹಾಗೂ ಪಾಲಕ್‌ ಬೆಲೆ ಸ್ಥಿರವಾಗಿದೆ.’ಬಹುತೇಕ ತರಕಾರಿಗಳ ಬೆಲೆ ಹೇಳಿಕೊಳ್ಳುವಷ್ಟು ಹೆಚ್ಚಾಗಿಲ್ಲ. ಗುಣಮಟ್ಟದ ಆಧಾರದ ಮೇಲೆ ಮಾರಾಟವಾಗುತ್ತಿವೆ. ಇನ್ನು ಮದುವೆ ಹಂಗಾಮು ಶುರುವಾಗಲಿದೆ. ಟೊಮೊಟೊ ಹಾಗೂ ಬೀನ್ಸ್‌ ಬೆಲೆಯಲ್ಲಿ ಹೆಚ್ಚಳವಾದರೂ ಅಚ್ಚರಿ ಇಲ್ಲ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

 

ಹೈದರಾಬಾದ್‌ನಿಂದ ಆವಕ

ಹೈದರಾಬಾದ್‌ನಿಂದ ಗಜ್ಜರಿ, ಬೀಟ್‌ರೂಟ್‌, ಚವಳೆಕಾಯಿ, ಹಿರೇಕಾಯಿ, ಡೊಣ ಮೆಣಸಿನಕಾಯಿ ಇಲ್ಲಿಯ ಮಾರುಕಟ್ಟೆಗೆ ಆವಕವಾಗಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಹಸಿ ಮೆಣಸಿನಕಾಯಿ ಬೆಳಗಾವಿ ಹಾಗೂ ಬೈಲಹೊಂಗಲ ತಾಲ್ಲೂಕಿನಿಂದ ಬಂದಿದೆ. ಚಿಟಗುಪ್ಪ, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು, ಕರಿಬೇವು ಹಾಗೂ ಕೊತಂಬರಿ ಬಂದಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.); ಕಳೆದ ವಾರ; ಈ ವಾರ
ತರಕಾರಿ ಮಾರುಕಟ್ಟೆ ಬೆಲೆ

ಈರುಳ್ಳಿ; 20-30; 20-30
ಮೆಣಸಿನಕಾಯಿ; 80-100; 60-80
ಆಲೂಗಡ್ಡೆ; 20-30; 20-30
ಎಲೆಕೋಸು; 20-30; 20-30
ಬೆಳ್ಳುಳ್ಳಿ; 40-50; 30-40
ಗಜ್ಜರಿ; 30-40; 30-40
ಬೀನ್ಸ್‌; 30-40; 30-40
ಬದನೆಕಾಯಿ; 30-40; 20-30
ಮೆಂತೆ ಸೊಪ್ಪು; 20-30; 20-30
ಹೂಕೋಸು; 30-40; 30-40
ಸಬ್ಬಸಗಿ; 40-50; 60-80
ಬೀಟ್‌ರೂಟ್‌; 50-60; 60-80
ತೊಂಡೆಕಾಯಿ; 40-50; 30-40
ಕರಿಬೇವು; 70-80; 50-60
ಕೊತಂಬರಿ; 20-30; 10-20
ಟೊಮೆಟೊ; 10-20; 10-20
ಪಾಲಕ್‌; 30-40; 30-40
ಬೆಂಡೆಕಾಯಿ; 60-70; 50-60
ಹಿರೇಕಾಯಿ; 60-80; 60-80
ನುಗ್ಗೆಕಾಯಿ; 100-120; 120-130
ಡೊಣ ಮೆಣಸಿನಕಾಯಿ; 50-60; 50-60
ಚವಳೆಕಾಯಿ; 50-60; 50-60

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಗೆ ಪ್ಯಾರಿಸ್ ಉಡುಗೊರೆ: ನಗರದ ಮೆಟ್ರೋ ಗೋಡೆಯ ಮೇಲೆ 'ಫ್ರೆಂಚ್ ಗಾರ್ಡನ್' ಬೆಳೆದಿದೆ

Sun Feb 27 , 2022
  ಫ್ರೆಂಚ್ ಉದ್ಯಾನ ಮತ್ತು ಅದರ ಕುತೂಹಲಕಾರಿ ಸಹ-ನಿವಾಸಿಗಳನ್ನು ಚಿತ್ರಿಸುವ ರೋಮಾಂಚಕ ಬಣ್ಣಗಳು ಮತ್ತು ವಿಷಯಾಧಾರಿತ ಕಲಾಕೃತಿಯೊಂದಿಗೆ, ಫ್ರಾನ್ಸ್‌ನ ಕಲಾವಿದರೊಬ್ಬರು ಭಾರತದ ರಾಜಧಾನಿಯಲ್ಲಿನ ಕೊಳಕು ಗೋಡೆಯನ್ನು ಬೆರಗುಗೊಳಿಸುವ ಕ್ಯಾನ್ವಾಸ್ ಆಗಿ ಮಾರ್ಪಡಿಸಿದ್ದಾರೆ, ಇದು ಎರಡು ದೇಶಗಳ ನಡುವಿನ “ಶಾಶ್ವತ ಸ್ನೇಹ” ವನ್ನು ಗುರುತಿಸುತ್ತದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಅಂಗವಾಗಿ ದೆಹಲಿಯ ಸಾಂಸ್ಕೃತಿಕ ಕೇಂದ್ರವಾದ ಮಂಡಿ ಹೌಸ್‌ನಲ್ಲಿರುವ ಮೆಟ್ರೋ ನಿಲ್ದಾಣದ ಆವರಣದ ಗೋಡೆಯ ಮೇಲೆ ಈ ಭಿತ್ತಿಚಿತ್ರವನ್ನು ಶನಿವಾರ […]

Advertisement

Wordpress Social Share Plugin powered by Ultimatelysocial