ದ್ವೇಷಿಸುವವರ ಎದುರು ಅಭಿಮಾನದ ಬಲದಿಂದ ಬೆಳೆದು ನಿಂತ ನಾಯಕ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳ ಟ್ವಿಟ್ಟರ್, ಫೇಸ್ಬುಲ್, ಇನ್‌ಸ್ಟಾ ಖಾತೆಗಳಲ್ಲಿ ಈ ಸ್ಪೆಷಲ್ ಸಿಡಿಪಿ ರಾರಾಜಿಸ್ತಿದೆ.ಜನವರಿ 8ಕ್ಕೆ ಯಶ್ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹಾಸನದಲ್ಲಿ ನವೀನ್‌ಕುಮಾರ್ ಗೌಡ ಆಗಿ ಹುಟ್ಟಿದ ಯಶ್, ಇಂದ ರಾಕಿಂಗ್ ಸ್ಟಾರ್ ಆಗಿ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. KGF ರೀತಿಯ ಸೆನ್ಸೇಷನ್‌ ಸಿನಿಮಾದಿಂದ ದೇಶ ವಿದೇಶದಲ್ಲೂ ರಾಕಿ ಭಾಯ್ ಆಗಿ ಚಿರಪರಿಚಿತರಾಗಿದ್ದಾರೆ. ಯಶ್ ಕಾಲ್‌ಶೀಟ್‌ಗಾಗಿ ಪರಭಾಷಾ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಕೇವಲ 18 ಸಿನಿಮಾಗಳಲ್ಲಿ ನಟಿಸಿ, ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಒಂದೇ ಒಂದು ಸಿನಿಮಾದಿಂದ ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.ಕೊರೊನಾ ಹಾವಳಿ, ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಯಶ್ ಕಳೆದೆರಡು ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅಭಿಮಾನಿಗಳು ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಿ ಕೈಕುಲುಕಿ ಶುಭಾಶಯ ಕೋರುವ ಅವಕಾಶ ಸಿಗುವ ಸಾಧ್ಯತೆ ಇದೆ. ಜೊತೆಗೆ ಯಶ್‌19 ಅಪ್‌ಡೇಟ್ ಸಿಕ್ಕರೂ ಸಿಗಬಹುದು.ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಡಿಪಿ ಕ್ರಿಯೇಟ್ ಮಾಡಿ ವೈರಲ್ ಮಾಡುವುದು ಇತ್ತೀಚೆಗೆ ಕಾಮನ್. ಈ ವರ್ಷ ಕೂಡ ರಾಕಿಂಗ್ ಸ್ಟಾರ್ ಬರ್ತ್‌ಡೇಗೆ ಅಭಿಮಾನಿಗಳು ಬೊಂಬಾಟ್ ಆಗಿರುವ ಡಿಪಿ ಸಿದ್ಧಪಡಿಸಿದ್ದಾರೆ. KGF- 2 ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಭಾಯ್ ಹಡಗಿನ ಮೇಲೆ ನಿಂತಿರುವ ಫೋಟೊಗೆ ತಮ್ಮದೇ ಕಲ್ಪನೆಯಲ್ಲಿ ಹೊಸ ಅರ್ಥ ನೀಡಿ ಡಿಪಿ ಡಿಸೈನ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದು ಸಖತ್ ಸದ್ದು ಮಾಡ್ತಿದೆ. ಡಿಸೈನ್ ಸೂಪರ್ ಎನ್ನುವ ಮೆಚ್ಚುಗೆ ವ್ಯಕ್ತವಾಗ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಲಾಭದಾಯಕ ಚಿತ್ರರಂಗ ಯಾವುದೆಂದು ತಿಳಿಸಿದ ಕರಣ್ ಜೋಹರ್

Fri Jan 6 , 2023
‘ಕುಚ್‌ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಕರಣ್ ಜೋಹರ್, ಎಷ್ಟೊಳ್ಳೆ ನಿರ್ದೇಶಕರೋ ಅಷ್ಟೆ ಒಳ್ಳೆಯ ನಿರ್ಮಾಪಕರು ಸಹ.ಬಾಲಿವುಡ್‌ನ ದೈತ್ಯ ನಿರ್ಮಾಣ ಸಂಸ್ಥೆ ಧರ್ಮಾ ಪ್ರೊಡಕ್ಷನ್‌ನ ಮಾಲೀಕರಾಗಿರುವ ಕರಣ್ ಜೋಹರ್ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ, ವಿತರಣೆಗಳನ್ನು ಮಾಡುತ್ತಾ ಬಂದಿದ್ದಾರೆ.ಸಿನಿಮಾ ನಿರ್ದೇಶನ, ನಿರ್ಮಾಣ ನಟನೆಯ ಜೊತೆಗೆ ತಮ್ಮ ಟಾಕ್‌ ಶೋ, ಫ್ಯಾಷನ್ ಸೆನ್ಸ್, ಹಾಸ್ಯ ಮತ್ತು ಡೋಂಟ್ ಕೇರ್ ಮಾತುಗಳಿಂದಾಗಿಯೂ […]

Advertisement

Wordpress Social Share Plugin powered by Ultimatelysocial