ಹೆಣ್ಮಕ್ಳೇ ಹುಷಾರ್: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮಾರುಕಟ್ಟೆಯಲ್ಲಿ ವ್ಯಕ್ತಿ ಓಡಾಟ!.ಯಾಕೆ ಹೀಗ್‌ ಮಾಡ್ತಿದ್ದ ಗೊತ್ತಾ?

 

ಇಂದು ವಿಶ್ವದಾದ್ಯಂತ ಮಹಿಳಾ ಸುರಕ್ಷತೆಯ ವಿಷಯ ಅತ್ಯಂತ ಪ್ರಮುಖವಾಗಿದ್ದು, ಈ ವಿಷಯದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಕೆಲವು ಸ್ಥಳಗಳು ಮಹಿಳೆಯರಿಗೆ ಸಾಕಷ್ಟು ಸುರಕ್ಷಿತವೆಂದು ಹೇಳಲಾಗುತ್ತದೆ.

ಆದರೆ, ಇನ್ನೂ ಕೆಲವು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಇದೆಲ್ಲದರ ನಡುವೆ ಇಲ್ಲೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊ ಮತ್ತು ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ ಇಂದಿನ ಕಾಲದಲ್ಲೂ ಜನರ ಮನಸ್ಥಿತಿ ಬದಲಾಗಿಲ್ಲ ಎಂದು ಎಲ್ಲರೂ ಭಾವಿಸಬೇಕಾಗುತ್ತದೆ.

ಕಾಲಿಗೆ ಮೊಬೈಲ್‌ ಕಟ್ಟಿಕೊಂಡು ಅಡ್ಡಾಡುತ್ತಿದ್ದ ವ್ಯಕ್ತಿ

ಈ ಘಟನೆ ಮಲೇಷ್ಯಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇಲ್ಲೊಬ್ಬ ವ್ಯಕ್ತಿ ತನ್ನ ಕಾಲಿನ ಪಾದದ ಮೇಲ್ಭಾಗಕ್ಕೆ ಮೊಬೈಲ್ ಕಟ್ಟಿಕೊಂಡು ಮಾರುಕಟ್ಟೆಯಲ್ಲಿ ಅಡ್ಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೂಲಂಕುಷವಾಗಿ ನೋಡಿದರೆ ಆ ವ್ಯಕ್ತಿ ಮೊಬೈಲ್ ಅನ್ನು ತಲೆಕೆಳಗಾಗಿ ಇಟ್ಟಿರುವುದು ಅಂದರೆ, ಕ್ಯಾಮೆರಾದ ಬದಿ ಮೇಲ್ಮುಖವಾಗಿರುವುದು ಕಂಡು ಬರುತ್ತದೆ. ಇದನ್ನು ನೋಡಿದ ಜನರಿಗೆ ಆ ವ್ಯಕ್ತಿ ಯಾಕೆ ಹೀಗೆ ಮಾಡಿದ್ದಾನೆ, ಆತನ ಉದ್ದೇಶವೇನು ಎಂಬುದೇ ತಿಳಿದಿರಲಿಲ್ಲ.

ವಾಸ್ತವವಾಗಿ ಆತ ಮಾರುಕಟ್ಟೆಯಲ್ಲಿ ಬರುವ ಹುಡುಗಿಯರ ಸ್ಕರ್ಟ್ ಅಡಿಯಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದನು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ: ಇಂಡಿಯಾ ಟುಡೇ ವರದಿ

Mon May 16 , 2022
ಗ್ಯಾನವಾಪಿ ಮಸೀದಿಯ ವೀಡಿಯೋ ಚಿತ್ರೀಕರಣವು ಪೂರ್ಣಗೊಂಡಿದ್ದು ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದು ಪರ ವಕೀಲರು ಹೇಳಿದ್ದಾರೆ. ಈ ಕುರಿತು ಇಂಡಿಯಾ ಟುಡೇ ಮಾಧ್ಯಮಕ್ಕೆ ವಕೀಲ ವಿಷ್ಣು ಜೈನ್ ಫೋನ್‌ ನಲ್ಲಿ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಶಿವಲಿಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದರ ರಕ್ಷಣೆಗೆ ಸಿವಿಲ್‌ ಕೋರ್ಟ್‌ ಮೊರೆ ಹೋಗುವುದಾಗಿ ವಕೀಲರು ತಿಳಿಸಿದ್ದಾರೆ. ದೆಹಲಿ ಮೂಲದ ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, […]

Advertisement

Wordpress Social Share Plugin powered by Ultimatelysocial