ಮೆಹಂದಿ ಎಲೆಗಳ ಆರೋಗ್ಯಯುತ ಪ್ರಯೋಜನಗಳಾದರು ಏನು????

ಮೆಹಂದಿಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಒಂದು ಅಂಶವಿದ್ದು, ಇದನ್ನು ಎಲ್ಲಿ ಲೇಪಿಸುತ್ತೇವೆಯೋ ಅಲ್ಲಿ ಕೆಂಪು ಅಥವಾ ಕಂದು ಬಣ್ಣದ ಕಲೆ ಮೂಡುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಪ್ರಸಾದನ ಸಾಮಾಗ್ರಿಗಳಲ್ಲಿ ಬಳಸುತ್ತಾರೆ.ಹೆಚ್ಚಾಗಿ ಇದನ್ನು ಕೈಗಳಿಗೆ ಅಥವಾ ಚರ್ಮದ ಮೇಲೆ ವಿನ್ಯಾಸಗಳನ್ನು ರೂಪಿಸಲು ಹಾಗು ಕೂದಲಿಗೆ ಬಣ್ಣವನ್ನು ತರಲು ಬಳಸುತ್ತಾರೆ. ಇದರ ಜೊತೆಗೆ ಮೆಹಂದಿಯಲ್ಲಿ ಹಲವಾರು ಆರೋಗ್ಯಯುತ ಪ್ರಯೋಜನಗಳು ಇವೆಯೆಂದು ತಿಳಿದು ಬಂದಿದೆ.

ಮೆಹಂದಿಯ ಎಲೆಗಳು ತುಂಬಾ ಪ್ರಯೋಜನಕಾರಿ. ಮೆಹಂದಿಯ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಬಳಸುತ್ತಾರೆ. ಇದರಿಂದ ಪ್ರಯೋಜನಗಳ ಪಟ್ಟಿಯನ್ನು ಇಲ್ಲಿ ನಿಮಗಾಗಿ ನೀಡಿದ್ದೇವೆ ಓದಿ ಅದರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

ಮೆಹಂದಿಯಲ್ಲಿ ತಂಪನ್ನುಂಟು ಮಾಡುವ ಅಂಶಗಳು ಅಡಕಗೊಂಡಿವೆ. ಇದೊಂದು ಪರಿಣಾಮಕಾರಿ ಮೊಡವೆ ನಿರೋಧಕ ಮೂಲಿಕೆಯಾಗಿದೆ. ಏಕೆಂದರೆ ಇದು ಮೊಡವೆಗಳ ಕಾರಕಗಳನ್ನು ನಾಶ ಮಾಡಿ ಮೊಡವೆಗಳುಂಟಾಗದಂತೆ ತಡೆಯುತ್ತದೆ. ಮೆಹಂದಿಯನ್ನು ಹಚ್ಚಿಕೊಂಡರೆ ದೇಹದಲ್ಲಿರುವ ಉಷ್ಣವು ಇಳಿದು ಹೋಗುತ್ತದೆ. ಮೆಹಂದಿಯನ್ನು ಕಾಲಿಗೆ ಹಚ್ಚಿಕೊಂಡರೆ ಅದು ರಾತ್ರೋ ರಾತ್ರಿ ದೇಹಕ್ಕೆ ಅಗತ್ಯವಾದ ತಂಪನ್ನು ನೀಡುತ್ತದೆ. ಈ ಪ್ರಯೋಜನವನ್ನು ಹಲವಾರು ಅಧ್ಯಯನಗಳು ಪುಷ್ಠೀಕರಿಸಿವೆ.

ಮೆಹಂದಿ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಕೂದಲಿಗೆ ಹಚ್ಚುತ್ತಾರೆ. ಇದು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮೆಹಂದಿಯ ಪೇಸ್ಟನ್ನು ವಾರಕ್ಕೊಮ್ಮೆಯಾದರು ಕೂದಲಿಗೆ ಲೇಪಿಸುವುದರಿಂದ ಡ್ಯಾಂಡ್ರಫನ್ನು ನಿವಾರಿಸಬಹುದು, ಜೊತೆಗೆ ಕೂದಲಿಗೆ ಹೊಳಪು ಬರುತ್ತದೆ ಮತ್ತು ಕೂದಲಿನ ಆಯಸ್ಸು ಹೆಚ್ಚುತ್ತದೆ. ಇದರ ಜೊತೆಗೆ ಬಿಳಿಕೂದಲನ್ನು ಕಂದು ಕೂದಲಾಗಿ ಪರಿವರ್ತಿಸಲು ಮೆಹಂದಿ ಉಪಯೋಗಕ್ಕೆ ಬರುತ್ತದೆ. ಈಗಾಗಿ ಕೂದಲಿನ ಆರೋಗ್ಯದ ವಿಷಯದಲ್ಲಿ ಮೆಹಂದಿಗೆ ಪ್ರಮುಖ ಸ್ಥಾನವಿದೆ. ಇದಕ್ಕಾಗಿ ನಿಮ್ಮ ಬಳಿ ಯಾವಾಗಲು ಮೆಹಂದಿಯ ಪುಡಿ ಇರಲಿ ಹಾಗು ಅದರ ಹೇರ್ ಪ್ಯಾಕನ್ನು ನಿರಂತರವಾಗಿ ಬಳಸಿ.

ಮೆಹಂದಿಯು ಸುಟ್ಟಗಾಯಗಳಿಗೆ ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಏಕೆಂದರೆ ಈ ಮೊದಲೇ ತಿಳಿಸಿದಂತೆ ಮೆಹಂದಿಯು ಅತ್ಯುತ್ತಮವಾದ ತಂಪುಕಾರಕ ಗುಣಗಳನ್ನು ಒಳಗೊಂಡಿದೆ. ಆದ್ದರಿಂದ ಮೆಹಂದಿ ಎಲೆಗಳನ್ನು ಸುಟ್ಟಗಾಯಗಳ ಮೇಲೆ ಉಜ್ಜಿದರೆ ನೋವು ತಕ್ಷಣ ಉಪಶಮನಗೊಳ್ಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಜನರಿಗೆ ಬಿಟ್ಟ ಕೇಜ್ರಿವಾಲ್!

Thu Jan 13 , 2022
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ಸಾಮಾನ್ಯ ಜನತೆಯನ್ನು ಕೇಳಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಜನರಿಂದ ಪ್ರತಿಕ್ರಿಯೆ ಪಡೆಯಲು ಮೊಬೈಲ್ ನಂಬರ್ ಒಂದನ್ನು ಪಂಜಾಬ್ ಎಎಪಿ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಹಿರಿಯ ಮುಖಂಡ ರಾಘವ್ ಚಡ್ಡಾ ಅವರ ಸಮ್ಮುಖದಲ್ಲಿ ಕೇಜ್ರಿವಾಲ್ ಬಿಡುಗಡೆ ಮಾಡಿದ್ದಾರೆ. ಜನವರಿ 17 ರ ಸಂಜೆಯವರೆಗೂ ಜನರು […]

Advertisement

Wordpress Social Share Plugin powered by Ultimatelysocial