“ರಿಕ್ಷಾ ರಿಪೇರಿ ಮಾಡುವ ಇಂಜಿನಿಯರ್ ಅವನು, ಫೇಲ್ ಆಗಿ ಮತ್ ಪಾಸ್ ಆಗಿದ್ದಾನೆ”

ಚನ್ನರಾಜ ಹಟ್ಟಿಹೊಳಿ ಬ್ಯಾಗ್ ಹಿಡಿದವ, ಮನೆ ಬಾಗಿಲು ಕಾದವ ಮತ್ತು ಡ್ರೈವಿಂಗ್ ಮಾಡಿದ ಅವನು ನನ್ನ ಲೇವಲ್ ಅಲ್ಲಾ. ಏಳು ದೇಶಕ್ಕೆ ಹೋಗಿ ಬಂದು ನಾನು ಇಂಜಿನಿಯರ್ ಅಂತಾನೆ. ಪಾನಾ ಹಿಡಿಯುವ ಇಂಜಿನಿಯರ್ ಅವನು, ರಿಕ್ಷಾ ರಿಪೇರಿ ಮಾಡುವ ಇಂಜಿನಿಯರ್ ಅವನು.” ಚನ್ನರಾಜ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ: ರಮೇಶ್ ಜಾರಕಿಹೊಳಿಗೂ  ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಏನು ಸಂಬಂಧ? ರಮೇಶ್ ವಿರುದ್ಧ ಹಕ್ಕು ಚ್ಯುತಿ ಮಾಡುವುದಾಗಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, “ಕನಿಷ್ಠ ಜ್ಞಾನ ಇಲ್ಲಾ, ಮೊದಲು ಕಾನೂನೂ ಓದಲಿ. ನಾನು ಪಕ್ಷ ಸಂಘಟನೆಗೆ ಬರಲು ಯಾರ ಅಪ್ಪನ ಅನುಮತಿ ಬೇಕಿಲ್ಲ. ಅವರ ಕೆಲಸದಲ್ಲಿ ನನ್ನ ಲೆಟರ್ ಕೊಟ್ಟು ಕೆಲಸ ಮಾಡಿದ್ರೇ ಹಕ್ಕು ಚ್ಯುತಿ ಹೇಗೆ ಆಗುತ್ತೆ. ಅವರ ಕ್ಷೇತ್ರದಲ್ಲಿ ನಾನು ಅನುದಾನ ತಂದು ಪೂಜೆ ಮಾಡಿದ್ರೇ ಅದಕ್ಕೆ ಹಕ್ಕು ಚ್ಯುತಿ ಆಗಿಬಿಡುತ್ತಾ? ಇದು ನಮ್ಮ ಪಕ್ಷದ ಪ್ರತಿಭಟನೆ, ಅವರ ಸರ್ಕಾರದ ದುಡ್ಡನ್ನ ಕಾಂಗ್ರೆಸ್ ಮಯ ಮಾಡಲು ಹೋರಟಿದ್ರೂ ಅದಕ್ಕೆ ವಿರೋಧ ಮಾಡ್ತಿದೀನಿ. ಎಂದು ಪ್ರತಿಕ್ರಿಯಿಸಿದರು.

“ಚನ್ನರಾಜ ಹಟ್ಟಿಹೊಳಿ ಬ್ಯಾಗ್ ಹಿಡಿದವ, ಮನೆ ಬಾಗಿಲು ಕಾದವ ಮತ್ತು ಡ್ರೈವಿಂಗ್ ಮಾಡಿದ ಅವನು ನನ್ನ ಲೇವಲ್ ಅಲ್ಲಾ. ಏಳು ದೇಶಕ್ಕೆ ಹೋಗಿ ಬಂದು ನಾನು ಇಂಜಿನಿಯರ್ ಅಂತಾನೆ. ಪಾನಾ ಹಿಡಿಯುವ ಇಂಜಿನಿಯರ್ ಅವನು, ರಿಕ್ಷಾ ರಿಪೇರಿ ಮಾಡುವ ಇಂಜಿನಿಯರ್ ಅವನು. ಫೇಲ್ ಆಗಿ ಮತ್ ಪಾಸ್ ಆಗಿದ್ದಾನೆ. ಹಡಗಲಿ ಗ್ರೀಸ್ ಹಚ್ಚುತ್ತಿದ್ದವ ಅಂಜಿ ಕೆಲಸ ಬಿಟ್ಟು ಓಡಿ ಬಂದಿದ್ದಾನೆ. ಜಪಾನ್ ದಿಂದಲೂ ಕೆಲಸ ಬಿಟ್ಟು ಚನ್ನರಾಜ ಓಡಿ ಬಂದಿದ್ದಾನೆ,” ಚನ್ನರಾಜ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವ್ಯಂಗ್ಯ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಚನ್ನರಾಜ್ ಹಟ್ಟಿಹೊಳಿ ಕುರಿತು ಮಾತನಾಡುತ್ತಾ “ಚನ್ನರಾಜ್ ಹಟ್ಟಿಹೊಳಿ ‌ಬಹಳ ಸಣ್ಣ ಹುಡುಗ, ಗಾಡಿ ಹೊಡೆದು, ಬಾಗಿಲು ಕಾದು ಎಂಎಲ್‌ಸಿ ಆದವ. ಅವನೇನೂ ಹೋರಾಟ ಮಾಡಿ, ಸಂಘಟನೆ ಮಾಡಿ ಎಂಎಲ್​ಸಿ ಆದವ ಅಲ್ಲ. ನಾನು ಚನ್ನರಾಜ ಜೊತೆಗೆ ಬಹಿರಂಗ ಚರ್ಚೆ ಮಾಡಲ್ಲ, ಅಗತ್ಯ ಬಿದ್ದರೆ ಡಿ.ಕೆ.ಶಿವಕುಮಾರ್ ಜೊತೆಗೆ ಚರ್ಚೆ ಮಾಡುತ್ತೇನೆ” ಎಂದರು.

ರಮೇಶ್ ಜಾರಕಿಹೊಳಿ VS ಚನ್ನರಾಜ್ ಹಟ್ಟಿಹೊಳಿ

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜಹಂಸಗಡ ಕೋಟೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ಕ್ರೆಡಿಟ್ ಪಾಲಿಟಿಕ್ಸ್ ನಡೆದಿತ್ತು. ಮಾರ್ಚ್ 5ರಂದು ಈ ಕೋಟೆಯಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರಿಂದ ಶಿವಾಜಿ ಮೂರ್ತಿ ಉದ್ಘಾಟನೆ ಮಾಡಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳರ್ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗದಂತೆ ತಡೆಯಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ.

ಲಕ್ಷ್ಮಿ ಹೆಬ್ಬಾಳ‌ಕರ್ ಸಹೋದರ ಇದರ ಕುರಿತು ಮಾತನಾಡಿದ, “ರಮೇಶ್ ಜಾರಕಿಹೊಳಿಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೂ ಏನ್ ಸಂಬಂಧ? ಯಾರು ಅವರು? ರಾಜಹಂಸಗಡ ಕೋಟೆ ಅಭಿವೃದ್ಧಿ ಆಗಬೇಕೆಂಬುದು ಬೆಳಗಾವಿ ತಾಲೂಕಿನ ಜನರ ಆಸೆಯಾಗಿತ್ತು. ಲಕ್ಷ್ಮಿ ಹೆಬ್ಬಾಳ‌ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥರಿದ್ದಾರೆ. ಇಲ್ಲಿ ಏನು ನಡೆದಿದೆ ಎಂದು ಹೇಳಲು ನಿಮಗೆ ಹಕ್ಕೂ ಇಲ್ಲ, ಧಿಕಾರವೂ ಇಲ್ಲ” ರಮೇಶ್ ವಿರುದ್ಧ ಹಕ್ಕು ಚ್ಯುತಿ ಮಾಡುವುದಾಗಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕಿಡಿಕಾರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿ. ಕೆ. ಎನ್. ರಾಜ ಕಾನೂನು ತಜ್ಞರು.

Sun Feb 19 , 2023
ಪ್ರೊ. ಸಿ. ಕೆ. ಎನ್. ಕಾನೂನು ತಜ್ಞರು, ಪ್ರಾಧ್ಯಾಪಕರು ಮತ್ತು ಬರಹಗಾರರು. ಇವರ ಮೂಲ ಹೆಸರು ಸಿ.ಎನ್. ಕೇಶವಮೂರ್ತಿ.ಸಿ. ಕೆ. ಎನ್. ರಾಜ 1932ರ ಫೆಬ್ರವರಿ 19ರಂದು ನಂಜನಗೂಡಿನಲ್ಲಿ ಜನಿಸಿದರು. ಚಾಮರಾಜನಗರದ ಸಮೀಪದ ಚಂದಕವಾಡಿ ಇವರ ಊರು. ತಂದೆ ಸಿ.ಕೆ. ನಾಗಪ್ಪ. ತಾಯಿ ಸೀತಾಲಕ್ಷ್ಮಮ್ಮ. ವೈಯಾಕರಣಿ ಶ್ರೀಕಂಠ ಶಾಸ್ತ್ರಿ, ರಾಮಾ ಶಾಸ್ತ್ರಿ ಇವರ ತಾಯಿಯ ಪೂರ್ವಿಕರು. ಪ್ರೌಢಶಾಲೆಯವರೆವಿಗೂ ನಂಜನಗೂಡಿನಲ್ಲೇ ಇವರ ವಿದ್ಯಾಭ್ಯಾಸ ನಡೆಯಿತು. ಇವರು ಶಾಲಾ ದಿನಗಳಿಂದಲೂ ಉತ್ತಮ ವಾಗ್ಮಿಯಾಗಿದ್ದರು. […]

Advertisement

Wordpress Social Share Plugin powered by Ultimatelysocial