HEALTH TIPS:ಕ್ಯಾನ್ಸರ್‌ ವಿರುದ್ಧ ಹೋರಾಡಲು ಬೀಟ್ರೂಟ್ ಸಹಕಾರಿ;

ಋತುಮಾನಕ್ಕೆ ತಕ್ಕಂತೆ ಬರುವ ತರಕಾರಿಗಳು ಮತ್ತು ಹಣ್ಣುಗಳು ಬೇರೆಬೇರೆ ಆಗಿರುತ್ತದೆ. ಚಳಿಗಾಲದ ಆಹಾರದ ವಿಷಯಕ್ಕೆ ಬಂದರೆ, ನಮ್ಮ ದೇಹಕ್ಕೆ ಪೋಷಣೆ ಸಿಗಲು ಸಾಕಷ್ಟು ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅಂತಹ ಒಂದು ತರಕಾರಿ ಅಂದರೆ, ಬೀಟ್ರೂಟ್. ಇದು ಅನೇಕ ಪ್ರಯೋಜನಗಳನ್ನು ಹೊಂದಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವವರು ಬೀಟ್ರೂಟ್ ತಿನ್ನಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ.

ಆದರೆ ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ರುಚಿಕರವಾದ ಬೀಟ್ರೂಟ್ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?..

ಹೌದು, ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್‌ನಿಂದ ಪ್ರಕಟವಾದ “ಬೀಟ್‌ರೂಟ್ ಎ ಪೊಟೆನ್ಶಿಯಲ್ ಫಂಕ್ಷನಲ್ ಫುಡ್ ಫಾರ್ ಕ್ಯಾನ್ಸರ್ ಕೆಮೊಪ್ರೆವೆನ್ಶನ್” ಅಧ್ಯಯನದ ಪ್ರಕಾರ, ಬೀಟ್‌ರೂಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದ್ದು, ಕೀಮೋಥೆರಪಿಗೆ ಸಂಬಂಧಿಸಿದ ನೋವಿನ ಪರಿಣಾಮಗಳನ್ನು ನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಈ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ.

ಸಂಶೋಧನೆ ಏನು ಹೇಳುತ್ತದೆ?:ಬೀಟ್ರೂಟ್‌ಗೆ ಕೆಂಪು ಬಣ್ಣವು ಬೆಟಾಲೈನ್ಸ್ ಎಂಬ ಸಂಯುಕ್ತಗಳಿಂದ ಬರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಇದು ಹೃದಯ ಸಮಸ್ಯೆ ಮತ್ತು ಕ್ಯಾನ್ಸರ್ ಎರಡರಿಂದಲೂ ರಕ್ಷಣೆ ನೀಡುತ್ತದೆ. ಅಧ್ಯಯನದ ಪ್ರಕಾರ, ಬೀಟ್‌ರೂಟ್ ಕಾರ್ಸಿನೋಜೆನ್‌ಗಳ ರಚನೆಯನ್ನು ತಡೆಯುತ್ತದೆ ಮತ್ತು ದೇಹದ ಪ್ರತಿರಕ್ಷಣಾ ಕೋಶಗಳು ಮತ್ತು ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಕ್ಯಾನ್ಸರ್ ಬೆಳವಣಿಗೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ಪಾಲಿಫಿನಾಲ್ಗಳು, ಫ್ಲೇವನಾಯ್ಡ್ಗಳು, ಆಹಾರದ ನೈಟ್ರೇಟ್ಗಳು ಮತ್ತು ಇತರ ಉಪಯುಕ್ತ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ ಮತ್ತು ಕಿಮೊಥೆರಪಿಗೆ ಸಂಬಂಧಿಸಿದ ಅನಗತ್ಯ ಪರಿಣಾಮಗಳನ್ನು ನಿರ್ವಹಿಸುತ್ತದೆ.

ಬೀಟ್ರೂಟ್ ಹೇಗೆ ತಿನ್ನಬೇಕು?:

ದರೆ, ಹೆಚ್ಚು ಪ್ರಯೋಜನಕಾರಿಯಾಗಿದೆ, ಜೊತೆಗೆ ಅದರ ರಸವನ್ನು ತೆಗೆದು ಸಹ ಕುಡಿಯಬಹುದು. ಅಲ್ಲದೆ, ಅಮೇರಿಕನ್ ಇನ್ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಬೀಟ್ರೂಟ್‌ಗಳನ್ನು ಅತಿಯಾಗಿ ಬೇಯಿಸುವುದಕ್ಕಿಂತ ಕೇವಲ 15 ನಿಮಿಷಗಳ ಕಾಲ ಕುದಿಸುವುದು ಉತ್ತಮ ಎಂದು ಸಲಹೆ ನೀಡುತ್ತದೆ.

ಪ್ರತಿಯೊಬ್ಬರೂ ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಇದು ನೈಟ್ರೇಟ್ ಅನ್ನು ಹೊಂದಿದ್ದು, ಇದು ರಕ್ತದೊಂದಿಗೆ ಸೇರಿ ನೈಟ್ರಿಕ್ ಆಕ್ಸೈಡ್ ಅನ್ನು ರೂಪಿಸುತ್ತದೆ. ಈ ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸಲು ಮತ್ತು ವಿಶ್ರಾಂತಿ ಮಾಡಲು ಸಹಾಯ ಮಾಡಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಇತರ ಸಂಶೋಧನೆಗಳ ಪ್ರಕಾರ, ಪ್ರತಿದಿನ 250 ಮಿಲಿ ಬೀಟ್ರೂಟ್ ಜ್ಯೂಸ್ ಕುಡಿಯುವ ಜನರು ಕಡಿಮೆ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಹೊಂದಿರುತ್ತಾರೆ.

ಬೀಟ್ರೂಟ್‌ನ ಆರೋಗ್ಯ ಪ್ರಯೋಜನಗಳು:

ಬೀಟ್ರೂಟ್ ರುಚಿಯಲ್ಲಿ ಸಿಹಿಯಾಗಿರುತ್ತದೆ, ಆದರೆ ಇದು ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂದು ಸಂಶೋಧನೆ ಹೇಳುತ್ತದೆ. ಇದು ಫೋಲೇಟ್‌ನ ಅತ್ಯುತ್ತಮ ಮೂಲವಾಗಿದ್ದು, ಇದು ಹೃದಯದ ಆರೋಗ್ಯವನ್ನು ಬೆಂಬಲಿಸುವ ಒಂದು ವಿಧದ ಬಿ ವಿಟಮಿನ್ ಆಗಿದ್ದು, ಡಿಎನ್‌ಎ ಉತ್ಪಾದನೆ ಮತ್ತು ದುರಸ್ತಿಯಲ್ಲಿ ಅದರ ಪಾತ್ರದಿಂದಾಗಿ ಕ್ಯಾನ್ಸರ್ ವಿರೋಧಿ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಈ ಕೆಳಗಿನ ಪ್ರಯೋಜನಗಳನ್ನು ಸಹ ಬೀಟ್ರೂಟ್ ನಮಗೆ ನೀಡುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2ನೇ ಐಟಂ ಸಾಂಗ್‌ಗೆ ಸಮಂತಾ ಸಹಿ;

Sun Jan 23 , 2022
ಅಲ್ಲು ಅರ್ಜುನ್ ರಗಡ್ ಲುಕ್ ಇಷ್ಟ ಆಯ್ತೋ ಇಲ್ಲವೋ ಗೊತ್ತಿಲ್ಲ. ರಶ್ಮಿಕಾ ಡಿ ಗ್ಲಾಮರ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತೋ ಇಲ್ಲವೋ ಗೊತ್ತಿಲ್ಲ. ಸುಕುಮಾರ್ ನಿರ್ದೇಶನ ಕೆಲವರಿಗೆ ಇಷ್ಟ. ಮತ್ತೆ ಕೆಲವರಿಗೆ ಕಷ್ಟ. ಆದರೆ, ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಮಾತ್ರ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿತ್ತು. ಇದೇ ಮೊದಲ ಬಾರಿಗೆ ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್‌ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತಿ. ದೇವಿಶ್ರೀ ಹಾಕಿದ ಭರ್ಜರಿ ಟ್ಯೂನ್‌ಗೆ ಸಮಂತಾ […]

Advertisement

Wordpress Social Share Plugin powered by Ultimatelysocial