ಭೂಮಿತಾಯಿಯನ್ನು “ಜೀವಂತ ವ್ಯಕ್ತಿ’ ಎಂದು ಘೋಷಿಸಿದ ಹೈಕೋರ್ಟ್‌

 

ಚೆನ್ನೈ:ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮದ್ರಾಸ್‌ ಹೈಕೋರ್ಟ್‌ “ಪೇರೆನ್ಸ್‌ ಪೇಟ್ರಿಯಾ ಜ್ಯೂರಿಸ್‌ಡಿಕ್ಷನ್‌’ ಅಧಿಕಾರವನ್ನು ಬಳಸಿಕೊಂಡು “ಪ್ರಕೃತಿ ಮಾತೆ’ಯನ್ನು ಜೀವಂತ ವ್ಯಕ್ತಿ ಎಂದು ಘೋಷಿಸಿದೆ.

ಈ ಮೂಲಕ ಜೀವಂತ ವ್ಯಕ್ತಿಗಿರುವ ಎಲ್ಲ ಹಕ್ಕುಗಳು, ಕರ್ತವ್ಯಗಳು ಹಾಗೂ ಹೊಣೆಗಾರಿಕೆಯು ಈಗ ಭೂತಾಯಿಗೆ ದೊರೆತಂತಾಗಿದೆ.

ಪ್ರಕೃತಿಯನ್ನು ಉಳಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಹೈಕೋರ್ಟ್‌ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ.

ಸರ್ಕಾರಿ ಜಮೀನಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾ. ಎಸ್‌. ಶ್ರೀಮತಿ ಅವರು, “ಹಿಂದಿನ ತಲೆಮಾರಿನ ಜನರು ಭೂಮಿ ತಾಯಿಯನ್ನು ಅದರ ಪ್ರಾಚೀನ ವೈಭವದೊಂದಿಗೇ ನಮಗೆ ಹಸ್ತಾಂತರಿಸಿದ್ದಾರೆ. ಅದನ್ನು ಮುಂದಿನ ತಲೆಮಾರಿಗೆ ಅದೇ ವೈಭವದೊಂದಿಗೆ ಹಸ್ತಾಂತರಿಸಬೇಕಾದ ನೈತಿಕತೆ ನಮ್ಮದು. ಈ ಕಾರಣಕ್ಕಾಗಿ ನಾವು ಇಲ್ಲಿ “ದೇಶದ ಪೋಷಕ’ ಎಂಬ ಅಧಿಕಾರವನ್ನು ಬಳಸಿಕೊಂಡು ಭೂಮಿ ತಾಯಿಯನ್ನೂ “ಒಂದು ಜೀವಿ’ ಎಂದು ಘೋಷಿಸುತ್ತಿದ್ದೇವೆ’ ಎಂದರು.

ಏನಿದು ಪೇರೆನ್ಸ್‌ ಪೇಟ್ರಿಯಾ ಜ್ಯೂರಿಸ್‌ಡಿಕ್ಷನ್‌?
ನಿಂದನೀಯ ಅಥವಾ ಮಕ್ಕಳನ್ನು ನಿರ್ಲಕ್ಷಿಸುವ ಪೋಷಕರು ಅಥವಾ ಕಾನೂನಾತ್ಮಕ ಆರೈಕೆದಾರರ ವಿರುದ್ಧ ಮಧ್ಯಪ್ರವೇಶಿಸಿ, ರಕ್ಷಣೆಯ ಅಗತ್ಯವಿರುವ ಮಗು ಅಥವಾ ವ್ಯಕ್ತಿಯ ಪೋಷಕರ ಸ್ಥಾನವನ್ನು ತುಂಬಲು ಸರ್ಕಾರಕ್ಕೆ ಇರುವ ಕಾನೂನಾತ್ಮಕ ಅಧಿಕಾರವನ್ನು “ದೇಶದ ಪೋಷಕ’

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿನ್ನ ಪ್ರಿಯರೇ ಗುಡ್‌ ನ್ಯೂಸ್‌: ಮತ್ತೆ ಇಳಿಕೆಯಾಗಿದೆ ಚಿನ್ನದ ಬೆಲೆ!

Mon May 2 , 2022
  ನವದೆಹಲಿ: ಮೇ 3ರಂದು ದೇಶದೆಲ್ಲೆಡೆ ಹಿಂದೂ ಬಾಂಧವರು ಅಕ್ಷಯ ತೃತೀಯ ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಜನರಿಗೆ ಸಿಹಿ ಸುದ್ದಿ ಲಭಿಸಿದ್ದು, ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಹಬ್ಬ ಎಂದರೆ ಚಿನ್ನ ಖರೀದಿಸಲು ಜನರು ಮುಂದಾಗುತ್ತಾರೆ. ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಮಂಗಳವಾಗುತ್ತದೆ ಎಂಬುದು ಭಾರತೀಯರ ನಂಬಿಕೆ. ಕಳೆದ ಕೆಲ ದಿನವೂ ಭಾರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಸಹ ಇಳಿಕೆ ಕಂಡಿದೆ. ಇಂದು […]

Advertisement

Wordpress Social Share Plugin powered by Ultimatelysocial