ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ!

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ  ಸಿಡಿ ಬಹಿರಂಗ ಪ್ರಕರಣ ಸಂಬಂಧ ವೀಡಿಯೋ ಕಾನ್ಫೆರೆನ್ಸ್  ಮೂಲಕ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಂತ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದರು.ಶರ್ಟ್ ಧರಿಸದೇ ವಿಚಾರಣೆಗೆ ಹಾಜರಾದಂತ ವ್ಯಕ್ತಿಯ ಬಗ್ಗೆ ವಕೀಲರು ಆಕ್ಷೇಪಿಸಿದ ಕಾರಣ, ಹೈಕೋರ್ಟ್ ಗರಂ ಆಗಿತ್ತು. ಈ ಬಳಿಕ ಅಚಾತುರ್ಯದಿಂದ ಆದಂತ ಘಟನೆ ಅಂತ ವ್ಯಕ್ತಿ ಕೋರ್ಟ್ ಗೆ ಬೇಷರತ್ ಕ್ಷಮೆ ಕೇಳಿದ ಕಾರಣದಿಂದ, ಇಂದು ಶ್ರೀಧರ್ ಭಟ್ ಗೆ ಹೈಕೋರ್ಟ್ (   ಕ್ಷಮಾದಾನ ನೀಡಿದೆ.ನವೆಂಬರ್ 30, 2021ರಂದು ಹೈಕೋರ್ಟ್ ನ್ಯಾಯಪೀಠವು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಪ್ರಕರಣ ಸಂಬಂಧ ಶ್ರೀಧರ್ ಭಟ್ ಎಂಬುವರು, ಶರ್ಟ್ ಧರಿಸದೇ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತ ಪಡಿಸಿದ್ದರುಈ ಸಂಬಂಧ ಇಂದು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠದ ಮುಂದೆ ಶ್ರೀಧರ್ ಭಟ್, ಅಚಾತುರ್ಯದಿಂದ ನಡೆದಂತ ಘಟನೆಯಾಗಿದೆ. ತಮ್ಮ ತಪ್ಪನ್ನು ಕ್ಷಮಿಸುವಂತೆ ಬೇಷರ್ ಕ್ಷಮೆ ಯಾಚಿಸಿದರು. ಈ ಹಿನ್ನಲೆಯಲ್ಲಿ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಸಮ್ಮತಿಯ ಮೇರೆಗೆ ಹೈಕೋರ್ಟ್ ನ್ಯಾಯಪೀಠವು ಮುಂದೆ ಹೀಗೆ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ, ಕ್ಷಮಾದಾನ ನೀಡಿದೆ. ಈ ಮೂಲಕ ಶ್ರೀಧರ್ ಭಟ್ ಗೆ ಬಿಗ್ ರಿಲೀಫ್ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಎಂಕೆ ಸದಸ್ಯನ ಹತ್ಯೆಗೆ ಸಂಬಂಧಿಸಿದಂತೆ ತಮಿಳುನಾಡಿನ ತಿರುಚ್ಚಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ

Thu Feb 3 , 2022
  ಡಿಎಂಕೆ ಕಾರ್ಯಕರ್ತ ಸೆಲ್ವಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ತಿರುಚ್ಚಿ ಬಳಿ ಇಬ್ಬರನ್ನು ಬಂಧಿಸಲಾಗಿದೆ. ಘಟನೆ ಬಳಿಕ ಇಬ್ಬರು ಚೆನ್ನೈ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಚ್ಚಿಯ ಸಮಯಪುರಂ ಚೆಕ್ ಪೋಸ್ಟ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಆಡಳಿತಾರೂಢ ಡಿಎಂಕೆ ಪಕ್ಷದ ಸದಸ್ಯ ಸೆಲ್ವಂ ಅವರನ್ನು ಚೆನ್ನೈನ ಮಡಿಪಕ್ಕಂನಲ್ಲಿರುವ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. ಫೆ.1ರ ಮಂಗಳವಾರದಂದು ಸೆಲ್ವಂ ಮನೆಗೆ ಹಾರ ಹಾಕುವ ನೆಪದಲ್ಲಿ ಅಪರಿಚಿತ ತಂಡವೊಂದು […]

Advertisement

Wordpress Social Share Plugin powered by Ultimatelysocial