ಹಿಜಾಬ್- ಹಲಾಲ್‌, ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಚರ್ಚೆ!ಳಿನ್ ಕುಮಾರ್

 

ಬೆಂಗಳೂರು:2023ರ ವಿಧಾನಸಭಾ ಚುನಾವಣೆ ಸಿದ್ಧತೆಯ ಭಾಗವಾಗಿ ಆರ್‌ಎಸ್‌ಎಸ್ ನಾಯಕರು ಜುಲೈ 14 ಮತ್ತು 15 ರಂದು ಎರಡು ದಿನಗಳ ಚಿಂತನ ಮಂಥನವನ್ನು ಬೆಂಗಳೂರಿನಲ್ಲಿ ನಡೆಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸುವ ಸಾಧ್ಯತೆಯಿದೆ.

ಜೂನ್ 30 ರಂದು ಬೆಂಗಳೂರಿನ ಆರ್‌ಎಸ್‌ಎಸ್ ಪ್ರಧಾನ ಕಛೇರಿ ಕೇಶವಕೃಪಾದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮುಕುಂದ್ ಮತ್ತು ಸುಧೀರ್ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು.

ಹಿಜಾಬ್ ಮತ್ತು ಹಲಾಲ್‌ನಂತಹ ಸೂಕ್ಷ್ಮ ವಿಷಯಗಳ ಹೊರತಾಗಿಯೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಬ್ಯಾಕ್ ಟು ಬ್ಯಾಕ್ ಮಾದರಿ ಸಮೀಕ್ಷೆಗಳಿಂದಾಗಿ ಪಕ್ಷದ ಸೈದ್ಧಾಂತಿಕ ವಿಭಾಗವಾಗಿರುವ ಆರ್‌ಎಸ್‌ಎಸ್ ಆತಂಕಕ್ಕೊಳಗಾಗಿದೆ.

ಆರೆಸ್ಸೆಸ್ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ನಾಯಕರಿಗೆ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲು ವಿಫಲವಾಗಿರುವ ಬಿಜೆಪಿ ನಾಯಕರುಗಳ ಬಗ್ಗೆಯೂ ಆರ್ ಎಸ್ ಎಸ್ ಗೆ ಕಳವಳ ಎದುರಾಗಿದೆ.

ವಿಧಾನಸಭೆ ಚುನಾವಣೆಯ ಕಾರ್ಯತಂತ್ರಗಳು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಿದೆ. ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು, ಚುನಾವಣೆಯಲ್ಲಿ ಗೆಲ್ಲಲು ಸರ್ಕಾರ, ಪಕ್ಷ, ನಾಯಕರು ಮತ್ತು ಆರ್‌ಎಸ್‌ಎಸ್ ಯಾವ ಪಾತ್ರವನ್ನು ವಹಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕಗಳ ಪರಿಷ್ಕರಣೆ ಮತ್ತು ಅದರ ಪರಿಣಾಮಗಳ ವಿಷಯವೂ ಚರ್ಚೆಗೆ ಬರುವ ಸಾಧ್ಯತೆಯಿದೆ, ಖ್ಯಾತ ಬರಹಗಾರ ದೇವನೂರು ಮಹಾದೇವ ಅವರ ಇತ್ತೀಚಿನ ಆರ್‌ಎಸ್‌ಎಸ್ ಬಗ್ಗೆ ಬರೆದಿರುವ ಪುಸ್ತಕವು ಆರ್ ಎಸ್ ಎಸ್ ಸಂಘಟನೆಯನ್ನು ಟೀಕಿಸಿದೆ. ಹೀಗಾಗಿ ಅದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಚಿಂತಕರ ಚಾವಡಿಯಲ್ಲಿ ಚರ್ಚಿಸಬಹುದು ಎಂದು ತಿಳಿದು ಬಂದಿದೆ.

ವಿವಿಧ ವಿಷಯಗಳ ಗೊಂದಲ ನಿವಾರಣೆಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಜವಾಬ್ದಾರಿಗಳನ್ನು, ವಿಶೇಷವಾಗಿ ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕಾತಿ ಬಗ್ಗೆ ಚರ್ಚೆ ನಡೆಯಲಿವೆ. ಮುಕುಂದ್‌ ಸೇರಿದಂತೆ ಆರ್‌ಎಸ್‌ಎಸ್‌ ಮುಖಂಡರು, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ಸೇರಿದಂತೆ ಬಿಜೆಪಿ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

 

Please follow and like us:

Leave a Reply

Your email address will not be published. Required fields are marked *

Next Post

ಖಾದ್ಯ ತೈಲ ಬೆಲೆಯು ಲೀಟರ್‌ಗೆ 15 ರೂಪಾಯಿ ಇಳಿಕೆ!

Sat Jul 9 , 2022
ಕೇಂದ್ರ ಸರ್ಕಾರವು ಖಾದ್ಯ ತೈಲ ತಯಾರಕರು ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಬೆಲೆಯನ್ನು ಡಿತ ಮಾಡುವಂತೆ ಇತ್ತೀಚೆಗೆ ಹೇಳಿದೆ. ಇದಕ್ಕಾಗಿ ಗಡುವು ಕೂಡಾ ಕೇಂದ್ರ ಸರ್ಕಾರ ನೀಡಿದೆ. ಈಗ ಖಾದ್ಯ ತೈಲ ಬೆಲೆಯು ಲೀಟರ್‌ಗೆ 15 ರೂಪಾಯಿ ಇಳಿಕೆಯಾಗಲಿದೆ ಎಂದು ವರದಿಯಾಗಿದೆ. “ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಜುಲೈ 6, 2022 ರಂದು ನಡೆದ ಸಭೆಯಲ್ಲಿ ಖಾದ್ಯ ತೈಲಗಳ ಎಂಆರ್‌ಪಿಯಲ್ಲಿ 15 ರೂಪಾಯಿ ಕಡಿತ ಮಾಡಬೇಕೆಂದು ಪ್ರಮುಖ ಖಾದ್ಯ […]

Advertisement

Wordpress Social Share Plugin powered by Ultimatelysocial