ಹಿಜಾಬ್ ವಿವಾದ: ಸಂವಿಧಾನಕ್ಕಿಂತ ಧರ್ಮ ದೊಡ್ಡದಲ್ಲ – ಮಾಜಿ ಸಿಎಂ ಯಡಿಯೂರಪ್ಪ

 

ಬೆಂಗಳೂರು: ಹಿಜಾಬ್ ಕುರಿತಂತೆ   ಹೈಕೋರ್ಟ್   ನೀಡಿರುವಂತ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಂವಿಧಾನಕ್ಕಿಂತ ಧರ್ಮ ದೊಡ್ಡದಲ್ಲ. ಸಂವಿಧಾನವನ್ನು ಗೌರವಿಸುವವರು ತೀರ್ಪು ಗೌರವಿಸಬೇಕು ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಅವರು ಹೇಳಿದ್ದಾರೆ.ಇಂದು ಹಿಜಾಬ್ ವಿವಾದದ ಕುರಿತಂತೆ ಹೈಕೋರ್ಟ್ ತೀರ್ಪು ಪ್ರಕಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ರಾಜ್ಯ ಸರ್ಕಾರದ ಸಮವಸ್ತ್ರ ನೀತಿಯನ್ನು ಕೋರ್ಟ್ ಎತ್ತಿ ಹಿಡಿದಿದೆ. ಸಂವಿಧಾನವನ್ನು ಗೌರವಿಸುವವರು, ಇಂದಿನ ಹೈಕೋರ್ಟ್ ತೀರ್ಪನ್ನು ಗೌರವಿಸಬೇಕು. ಹಿಜಾಬ್ ವಿವಾದವನ್ನು ಇಲ್ಲಿಗೆ ಬಿಡಬೇಕು ಎಂಬುದಾಗಿ ಹೇಳಿದರು.ಹಿಜಾಬ್ ವಿವಾದ’ದ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರದ ‘ಅಡ್ವಕೇಟ್ ಜನರಲ್’ ಹೇಳಿದ್ದೇನು ಗೊತ್ತಾ.?ಬೆಂಗಳೂರು: ಹೈಕೋರ್ಟ್ ( Karnataka High Court ) ತ್ರಿಸದಸ್ಯ ನ್ಯಾಯಪೀಠದಿಂದ ಇಂದು ಹಿಜಾಬ್ ಅನುಮತಿ ( Hijab Row ) ವಿವಾದದ ಐತಿಹಾಸಿಕ ತೀರ್ಪು ಪ್ರಕಟಗೊಂಡಿದೆ. ಇಂದಿನ ತೀರ್ಪಿನಲ್ಲಿ ರಾಜ್ಯ ಸರ್ಕಾರ ಸಮವಸ್ತ್ರ ನಿಯಮವನ್ನು ಎತ್ತಿ ಹಿಡಿಯಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಅಡ್ವಕೇಟ್ ಜನರಲ್ ಹೇಳಿದ್ದೇನು ಅಂತ ಮುಂದೆ ಓದಿ.ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ರಾಜ್ಯ ಸರ್ಕಾರ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾಡವಗಿ ಅವರು, ರಾಜ್ಯ ಸರ್ಕಾರದ ಪರವಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಲ್ಲ ಎಂಬುದಾಗಿ ವಾದ ಮಂಡನೆ ಮಾಡಲಾಗಿತ್ತು. ಈ ವಾದವನ್ನು ಸಂವಿಧಾನದ ಪೀಠವು ಎತ್ತಿ ಹಿಡಿದಿದೆ ಎಂದು ತಿಳಿಸಿದರು.ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠವು, ತೀರ್ಪಿನಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅತ್ಯವಶ್ಯಕ ಆಚರಣೆಯಲ್ಲ ಅಂತ ಹೋಲ್ಡ್ ಮಾಡಿದೆ. ಶೈಕ್ಷಣಿ ಸಂಸ್ಥೆಗಳಲ್ಲಿ ಸಮವಸ್ತ್ರ ರೀಜನೇಬಲ್ ರಿಸ್ಟ್ರಿಕ್ಷನ್ ಎಂದಿದ್ದಾರೆ. ಈ ಮೂಲಕ ಹಿಜಾಬ್ ವಿವಾದ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಲ್ ಸ್ಮಿತ್: ನನ್ನ ಮದುವೆಯಲ್ಲಿ ಯಾವುದೇ ದ್ರೋಹವಿಲ್ಲ!

Tue Mar 15 , 2022
ಹಾಲಿವುಡ್ ತಾರೆ ವಿಲ್ ಸ್ಮಿತ್ ಅವರು ತಮ್ಮ ಮದುವೆಯಲ್ಲಿ ಎಂದಿಗೂ ದಾಂಪತ್ಯ ದ್ರೋಹ ನಡೆದಿಲ್ಲ ಮತ್ತು ಜಾಡಾ ಪಿಂಕೆಟ್ ಸ್ಮಿತ್ ಅವರೊಂದಿಗಿನ ಸಂಬಂಧದಲ್ಲಿ ಏನೂ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ‘ಕಿಂಗ್ ರಿಚರ್ಡ್’ ಸ್ಟಾರ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ 2020 ರಲ್ಲಿ ಗಾಯಕ ಆಗಸ್ಟ್ ಅಲ್ಸಿನಾ ಅವರೊಂದಿಗಿನ ತನ್ನ “ಸಂಕಷ್ಟ” ಕುರಿತು ಮಾತನಾಡಿದ್ದಾರೆ ಆದರೆ 53 ವರ್ಷದ ನಟ ತಮ್ಮ ಸಂಬಂಧದಲ್ಲಿ ಸಂಭವಿಸಿದ ಯಾವುದೂ ಆಶ್ಚರ್ಯಕರವಾಗಿಲ್ಲ ಎಂದು ಫೀಮೇಲ್ […]

Advertisement

Wordpress Social Share Plugin powered by Ultimatelysocial