ಸ್ಟೋರ್ ಕೀಫರ್ ಆಗಿದ್ದ ಗೋವಿಂದ್ ಕಾರಜೋಳರನ್ನ ಬೆಳೆಸಿದ್ದು ನಾನೇ!

ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ.ಅವರನ್ನ ಬೆಳೆಸಬೇಕು ಅಂತಾನೇ ನಾನು ರಾಜ್ಯ ರಾಜಕಾರಣಕ್ಕೆ ತಲೆ ಹಾಕಿಲ್ಲ

ಕಾರಜೋಳರನ್ನ ಬೆಳೆಸೋಕೆ ನಾನು ತ್ಯಾಗ ಮಾಡಿದ್ದೀನಿಸ್ಟೋರ ಕೀಫರ್ ಕೆಲಸಕ್ಕೆ ರಾಜೀನಾಮೆ ಕೊಡೆಸಿ ನನ್ನ ಜೊತೆಗಿಟ್ಟುಕೊಂಡೆ.

ಯಾರಾದ್ರು ಇಟ್ಟುಕೊಳ್ತಾರಾ..?ರಾಜಕೀಯದಲ್ಲಿ ಜೊತೆಗಿರೋರು ಬೆಳೆಯಲಿ ಅಂತಾ ಯಾರು ಯೋಚನೆ ಮಾಡಲ್ಲ.

ಎತ್ತರಕ್ಕೆ ಬೆಳೆದರೆ ನನ್ನ ಮುಗಿಸಿ ಬಿಡ್ತಾರೆ ಅಂತಾ ಬೇರೆಯವರನ್ನು ಬೆಳೆಸಲ್ಲ.ಆದ್ರೆ ನಾನು ಮುಧೋಳ ಕ್ಷೇತ್ರ ತ್ಯಾಗ ಮಾಡಿ ಅಲ್ಲಿಂದ ಗೋವಿಂದ ಕಾರಜೋಳರನ್ನ ನಿಲ್ಲಿಸಿದೆ.

ರೆಡ್ಡಿ ಗೌಡರು ನನಗೆ ನಿಲ್ಲಿ ಅಂತಾ ಹೊಡೆಯೋಕೆ ಬೆನ್ನು ಹತ್ತಿದ್ದರು.ಹೆಗಡೆಯವರು ಪಾರ್ಲಿಮೆಂಟ್ ಗೆ ಹೋಗು ಅಂದ್ರು ಅಲ್ಲಿಯು ಹೋದೆ.

1998 ರಲ್ಲಿ ರಾಜ್ಯ ರಾಜಕಾರಣ ಬಿಟ್ಟಿದ್ದೀನಿ, ವಾಪಾಸ್ ವಿಧಾನ ಸೌಧ ನೋಡಿಲ್ಲ, ಎಲ್ ಎಚ್ ನೋಡಿಲ್ಲ, ಸಂಪರ್ಕ‌ ಕಳೆದುಕೊಂಡಿದ್ದೇನೆ.

ಕಾರಜೋಳ ನನ್ನ ಎತ್ತರಕ್ಕೆ ಬೆಳೆಯಲಿ ಎಂದು ಇಷ್ಟೆಲ್ಲ ತ್ಯಾಗ ಮಾಡಿದೆ.ನಾನೇ ಶಾಸಕ ಆಗ್ತೀನಿ ಎಂದಿದ್ರೆ ಕಾರಜೋಳ ಸಾಹೇಬ್ರಿಗೆ ತೊಂದರೆ ಆಗ್ತಿತ್ತು.

ನಮ್ಮ ಸಮಾಜದವ ಬೆಳೆಯಲಿ ಅಂತ ತ್ಯಾಗ ಮಾಡಿ 25 ವರ್ಷ ದೂರಿದ್ದೀನಿ.ನನ್ನ ಎತ್ತರಕ್ಕೆ ಬೆಳೆಯಲಿ ಎಂದು 25 ವರ್ಷದಿಂದ ಬೆಂಗಳೂರು ಕಡೆಗೆ ಹಾದಿಲ್ಲ.ಈ ಬಾರಿ ರಾಜ್ಯ ರಾಜಕಾರಣಕ್ಕೆಪ್ರವೇಶ ವಿಚಾರನಾವು ಕಾರಜೋಳರು ಸೇರಿ ಮಾತನಾಡ್ತೀವಿ.

ಅವ ನಿಲ್ತೀನಿ ಅಂದರೆ ಅವನನ್ನ ನಿಲ್ಲಿಸ್ತೀನಿ, ಅವನ ಮಗ ನಿಲ್ತಾನೆ ಅಂದ್ರೆ ಅವನನ್ನ ನಿಲ್ಲಿಸ್ತೀನಿ.ನನ್ನ ಮಗನನ್ನ ಮಾತ್ರ ನಿಲ್ಲಿಸಲ್ಲ.ಹೈ ಕಮಾಂಡ್ ಹೇಗ್ ಹೇಳತ್ತೋ ಹಾಗೇ ಕೇಳ್ತೀನಿ.

ರಾಜ್ಯಕ್ಕೆ ಹೋಗು ಅಂತ ಅಂದ್ರೆ ಇಲ್ಲಿಗೆ ಬರ್ತೀನಿ, ಬೇಡ ಅಂದ್ರೆ ತೋಟಕ್ಕೆ ಹೋಗ್ತೀನಿ ಎಂದ ಜಿಗಜಿಣಗಿ.ಮಾಧ್ಯಮದವರು ನಮ್ಮ ಕುಲಬಾಂದವರ ನಡುವೆ ಜಗಳ ಹಚ್ಚೋ ಕೆಲಸ ಮಾಡಬೇಡಿ ಎಂದ ಜಿಗಜಿಣಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಟ ಸುದೀಪ್,ಅಜಯ್ ದೇವಗನ್ ಹಿಂದಿ ಭಾಷೆ ವಿವಾದ ವಿಚಾರ!

Thu Apr 28 , 2022
ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ. ನಾನು ಇಬ್ಬರು ಪರವಾಗಿ ಇಲ್ಲ.ಸರ್ಕಾರದ ನೀತಿ ಪರವಾಗಿ ಇದ್ದೇನೆ. ಹಿಂದಿ ಬೇಕು ಅಂದ್ರೇ ಹಿಂದಿ ಪರ ಇರ್ತೇನಿ.ಬೇಡ ಅಂದ್ರೇ ಬೇಡವಾದ ಪರವಾಗಿ ಇರ್ತೇನಿ. ಕೇಂದ್ರ ಸರ್ಕಾರದ ಪರ ನಾನು ಇರ್ತೇನಿ ಅಷ್ಟೆ ಎಂದ ಸಂಸದ ಜಿಗಜಿಣಗಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial