ಸದ್ಯದಲ್ಲೇ ಆರಂಭವಾಗಲಿದೆ ‘ ಹೊಂಬಾಳೆ ಫಿಲಂಸ್’ ಹೊಸ ಚಿತ್ರ !

ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಬರಲಿದೆ ಈ ನೂತನ ಸಿನಿಮಾ.‘ಹೊಂಬಾಳೆ ಫಿಲಂಸ್’ ಈಗ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ.
ಈ ಸಂಸ್ಥೆಯ ನಿರ್ಮಾಣದ “ಕೆ ಜಿ ಎಫ್ 2” ವಿಶ್ವದೆಲ್ಲೆಡೆ ಯಶಸ್ಸಿನ ಜಯಭೇರಿ ಬಾರಿಸುತ್ತಿದೆ. ಗಳಿಕೆಯಲ್ಲೂ ಮೇಲುಗೈ ಸಾಧಿಸಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಾಹಸಕ್ಕೆ ಜನ ಬಹುಪರಾಕ್ ಹೇಳುತ್ತಿದ್ದಾರೆ.

ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಾಣ ಮಾಡಿರುವ ಈ ಸಂಸ್ಥೆಯಿಂದ ಅನೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈಗ ಮತ್ತೊಂದು ಹೊಸ ಚಿತ್ರದ ಘೋಷಣೆಯಾಗಿದೆ.

ವಿಶೇಷ ಏನೆಂದರೆ, ಈ ಬಾರಿ ‘ಹೊಂಬಾಳೆ ಫಿಲಂಸ್’ ಗೆ ಸಿನಿಮಾ ಮಾಡುವ ಅವಕಾಶ ಪಡೆದಿರುವುದು ಸುಧಾ ಕೊಂಗರ ಅವರು.
ಈ ಮಹಿಳೆ ಮೂಲತಃ ಆಂಧ್ರ ಪ್ರದೇಶದವರು. ತಮಿಳು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೂರ್ಯ ನಟನೆಯ ‘ಸೂರರೈ ಪೋಟ್ರು’ ಚಿತ್ರವನ್ನು ನಿರ್ದೇಶಿಸುವ ಮೂಲಕ ಸುಧಾ ಕೊಂಗರ ಎಲ್ಲರ ಮನ ಸೆಳೆದಿದ್ದಾರೆ.

ಈಗ ಸುಧಾ ಕೊಂಗರ ಮತ್ತು ‘ಹೊಂಬಾಳೆ ಫಿಲಂಸ್ ಸಂಸ್ಥೆ ಕೈ ಜೋಡಿಸಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ.

ಗುರುವಾರದಂದು ಈ ಹೊಸಚಿತ್ರ ನಿರ್ಮಾಣದ ಹೊಸ ಸುದ್ದಿಯನ್ನು ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಚ್ಚರಿ ಎಂದರೆ, ಈ ಬಾರಿ ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲು ‘ಹೊಂಬಾಳೆ ಫಿಲಂಸ್’ ಸಂಸ್ಥೆ ಮುಂದಾಗಿದೆ. ‘ಕೆಲವು ನೈಜ ಕಥೆಗಳನ್ನು ಹೇಳಲೇ ಬೇಕು. ಸುಧಾ ಕೊಂಗರ ಅವರ ಜೊತೆ ನಮ್ಮ ಹೊಸ ಸಿನಿಮಾ ಘೋಷಣೆ ಮಾಡಲು ಹೆಮ್ಮೆ ಆಗುತ್ತಿದೆ’ ಎಂದು ಪೋಸ್ಟ್ ಮಾಡಲಾಗಿದೆ.

ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದ ‘ಸೂರರೈ ಪೋಟ್ರು’ ಚಿತ್ರ ಕೂಡ ಸತ್ಯ ಘಟನೆ ಆಧಾರಿತ ಚಿತ್ರ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸುಧಾ ಅವರು ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಟೀಲ್‌ ಸ್ಥಾವರದ ಮೇಲೆ ದಾಳಿ ನಡೆಸಬೇಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ.

Fri Apr 22 , 2022
  ಕೀವ್‌/ಮಾಸ್ಕೋ: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಪಡೆಗಳಿಗೆ, ಮರಿಯುಪೋಲ್‌ನಲ್ಲಿ ಉಕ್ರೇನಿಯರಿಗೆ ಭದ್ರಕೋಟೆಯಂತಾಗಿರುವ ಸ್ಟೀಲ್‌ ಸ್ಥಾವರದ ಮೇಲೆ ದಾಳಿ ನಡೆಸಬೇಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ ಮರಿಯುಪೋಲ್‌ನಲ್ಲಿ ಇನ್ನೂ ಸಾವಿರಾರು ಯೋಧರು ಹೋರಾಟ ನಡೆಸುತ್ತಿದ್ದಾರೆ ಎಂದು ರಷ್ಯಾದ ರಕ್ಷಣ ಸಚಿವರು ಹೇಳಿದ ಅನಂತರ ಪುಟಿನ್‌ ಈ ಆದೇಶ ಮಾಡಿದ್ದಾರೆ. ಮತ್ತೂಂದೆಡೆ, ಕೀವ್‌ನ ಶವಾಗಾರಗಳಲ್ಲಿ 1,020 ಉಕ್ರೇನಿಯರ ಶವಗಳು ಬಿದ್ದಿವೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಅಜೋವಸ್ತಲ್‌ದಲ್ಲಿ […]

Advertisement

Wordpress Social Share Plugin powered by Ultimatelysocial