ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ಗೃಹ ಸಚಿವ ಅಮಿತ್ ಶಾ

ವದೆಹಲಿ: ಅದಾನಿ ಹಿಂಡೆನ್‌ಬರ್ಗ್ ಸಂಚಿಕೆ ನಂತರ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಮರೆಮಾಡಲು ಅಥವಾ ಭಯಪಡಲು ಏನೂ ಇಲ್ಲ ಎಂದು ಹೇಳಿದ್ದಾರೆ. ಸರ್ಕಾರ ಅದಾನಿ ಗ್ರೂಪ್ ಪರವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೇ ಗೃಹ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮರೆಮಾಡಲು ಏನೂ ಇಲ್ಲ ಮತ್ತು ಭಯಪಡಬೇಕಾಗಿಲ್ಲ ಅಂಥ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಮನಕ್ಕೆ ತಂದಿದೆ. ಸಚಿವನಾಗಿ ಸುಪ್ರೀಂ ಕೋರ್ಟ್‌ಗೆ ವಿಷಯ ಮುಟ್ಟಿಸಿದರೆ ನಾನು ಹೇಳಿಕೆ ನೀಡುವುದು ಸರಿಯಲ್ಲ, ಆದರೆ ಇದರಲ್ಲಿ ಬಿಜೆಪಿಯವರು ಮುಚ್ಚಿಡಲು ಏನೂ ಇಲ್ಲ, ಭಯಪಡಬೇಕಾಗಿಲ್ಲ ಅಂತ ಅವರು ಹೇಳಿದರು. ಅದಾನಿ ಸಮೂಹದಲ್ಲಿ ಎಲ್‌ಐಸಿ ಮತ್ತು ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹೂಡಿಕೆ ಕುರಿತು ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಪಿಎಸ್‌ಯುಗಳು ಮತ್ತು ನಿಯಂತ್ರಕ ಸಂಸ್ಥೆಗಳು ತಮ್ಮ ನಿಯಮಗಳನ್ನು ಅನುಸರಿಸುವ ಮತ್ತು ಅವರ ಆದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಬಗ್ಗೆ ಹೇಳಿಕೆಗಳನ್ನು ನೀಡುವುದರೊಂದಿಗೆ ಸರ್ಕಾರವು ಆರೋಪಗಳನ್ನು ತಿರಸ್ಕರಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಅವರನ್ನು ಮನವೊಲಿಕೆಗೆ ಹೊರಟ ಕ್ಷೇತ್ರದ ಜನರು.

Tue Feb 14 , 2023
ಸಿದ್ದರಾಮಯ್ಯ ಅವರನ್ನು ಮನವೊಲಿಕೆಗೆ ಹೊರಟ ಕ್ಷೇತ್ರದ ಜನರು…. ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಡ ಹಾಕಲು…. ಕ್ಷೇತ್ರದ ಸಾವಿರಾರು ಜನರು ಬೆಂಗಳೂರಗೆ ದೌಡು…. ನೂರಾರು ವಾಹನಗಳಲ್ಲಿ ಬೆಂಗಳೂರಗೆ ತೆರಳಿದ ಬಾದಾಮಿ ಜನರು… ಬೆಂಗಳೂರಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ…. ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವ ಒತ್ತಡ…. ಬಾದಾಮಿ ದೂರ ಆಗುತ್ತೆ ಅಂತಾದ್ರೆ ಹೆಲಿಕ್ಯಾಪ್ಟರ್ ಕೊಡಿಸಲು ಸಿದ್ದ ಎಂದಿದ್ದ ಅಭಿಮಾನಿಗಳು…. ಇದೀಗ ಬಾದಾಮಿಗೆ ಬರುವಂತೆ ಒತ್ತಡ ಹಾಕಲು ಬಾದಾಮಿ ಜನರಿಂದ ಬೆಂಗಳೂರ ಚಲೋ…. ಬಾದಾಮಿ […]

Advertisement

Wordpress Social Share Plugin powered by Ultimatelysocial