ಬೇಲೂರು:ದೇಗುಲದಲ್ಲಿ ಉತ್ಸವ ಹೊರುವ ಅಡ್ಡೆಗಾರರು ಹೊರಕ್ಕೆ;

ಬೇಲೂರು: ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿಗೆ ದೇಗುಲದಲ್ಲಿ ಉತ್ಸವ ಹೊರುವ ಅಡ್ಡೆಗಾರರನ್ನು ನೇಮಕ ಮಾಡದಿರುವ ಬಗ್ಗೆ ಧಾರ್ಮಿಕ ದತ್ತಿ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

ಜ. 21ರಂದು ದೂರು ಆಯುಕ್ತರೊಂದಿಗೆ, ಜಿಲ್ಲಾಧಿಕಾರಿಗಳು, ಶಾಸಕರಿಗೂ ದೂರು ನೀಡಲಾಗಿದ್ದು ಅಡ್ಡೆಗಾರರನ್ನು ಸಮಿತಿಯೊಳಗೆ ಸೇರಿಸುವಂತೆ ಆಗ್ರಹಿಸಲಾಗಿದೆ.

ಒಂದೊಮ್ಮೆ ಸೇರಿಸದಿದ್ದರೆ ದೇಗುಲದ ಉತ್ಸವ ಹೊರುವುದಕ್ಕೆ ಹಿಂದೇಟು ಹಾಕುವ ಸಂಭವ ಕಂಡುಬರುತ್ತಿದೆ.

ಸಮಿತಿ ರಚನೆ ಸಂದರ್ಭ ಅಡ್ಡೆಗಾರರನ್ನು ಕೈಬಿಟ್ಟಿದ್ದರಿಂದ ಈ ಹಿಂದೆಯೂ ಹಲವು ಭಾರಿ ಉತ್ಸವ ಹೊರುವುದರಿಂದ ದೂರ ಉಳಿದಿದ್ದರು. ಆ ವೇಳೆ ಪಟ್ಟಣ ಪ್ರಮುಖರು ಮನವಿ ಮಾಡಿ ಉತ್ಸವ ಹೊರುವಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಇದೀಗ ಅದೆ ಸಮಸ್ಯೆ ಉದ್ಭವವಾಗುವ ಸಂಭವ ಕಾಣಬರುತ್ತಿದ್ದು, ಶೀಘ್ರ ಕ್ರಮಕೈಗೊಳ್ಳದೆ ಇದ್ದಲ್ಲಿ ಸಮಸ್ಯೆ ಎದುರಾಗಲಿದೆ.

ಈ ವರ್ಷ ರಚಿಸಿದ ಸಮಿತಿಯಲ್ಲಿ ಅಡ್ಡೆಗಾರರನ್ನು ಕೈಬಿಟ್ಟಿದ್ದರಿಂದ ಅಸಮಾಧಾನಗೊಂಡಿರುವ ಅಡ್ಡೆಗಾರರ ಬಳಗ ಧಾರ್ಮಿಕ ಧತ್ತಿ ಆಯುಕ್ತರಿಗೆ ದೂರುನೀಡಿದ್ದಾರೆ. ಅದರ ಪ್ರತಿಯನ್ನು ಶಾಸಕರು, ಜಿಲ್ಲಾಧಿಕಾರಿಗಳಿಗೂ ಸಲ್ಲಿಸಿ ಈವರಗಿನ ಎಲ್ಲಾ ಬೆಳವಣಿಗೆಗಳ ಮಾಹಿತಿ ಒದಗಿಸಿದ್ದಾರೆ. ಆದರೆಈಗಾಗಲೇ ರಚನೆಗೊಂಡಿರುವ ಸಮಿತಿಗೆ ಹೆಚ್ಚುವರಿ ಯಾಗಿ ಸದಸ್ಯರ ನೇಮಕ ಸಾಧ್ಯವಾಗದ ಮಾತು. ಇದು ನಿಯಮ ಬಾಹಿರ ಕೂಡ. ಈ ನಡುವೆಅಡ್ಡೆಗಾರರನ್ನು ವಿಶೇಷ ಆಹ್ವಾನಿತರು ಎಂಬಂತೆಬಿಂಬಿಸಿ ಸಭೆಗೆ ಕರೆಯುವ ಬಗ್ಗೆ ಆಲೋಚನೆ ಇದೆ ಎನ್ನಲಾಗಿದೆ.

ಇದೆ ರೀತಿ ಸಮಸ್ಯೆ ಹಿಂದೊಮ್ಮೆ ಉಂಟಾದಾಗ, ವಿಶೇಷ ಆಹ್ವಾನಿತರೆಂದು ಅಡ್ಡೆಗಾರರೊಬ್ಬರಿಗೆ ಸಭೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿತ್ತು. ಈಗಲೂ ಇದನ್ನೇ ಅನುಸರಿಸುವ ಲಕ್ಷಣಗಳುಕಂಡುಬರುತ್ತಿದೆ. ಈ ನಡುವೆ ಅಡ್ಡೆಗಾರರುಯಾವುದೇ ಕಾರಣಕ್ಕೂ ವಿಶೇಷ ಆಹ್ವಾನಿತರೆಂದುಪರಿಗಣಿಸುವುದಕ್ಕೆ ಒಪ್ಪಿಗೆ ನೀಡಬಾರದು, ಕಾಯಂಸದಸ್ಯರೆಂದು ಪಟ್ಟಿಯಲ್ಲಿ ಪರಿಗಣಿಸಬೇಕು ಎಂದು ಪಟ್ಟುಹಿಡಿದಿದ್ದಾರೆ.

ಈ ಬಗ್ಗೆ ದೇಗುಲದ ಕಾರ್ಯನಿರ್ವಹಣಾಧಿಕಾರಿವಿದ್ಯುಲ್ಲತಾ ಅವರನ್ನು ಸಂಪರ್ಕಿಸಿದಾಗ, ಅಡ್ಡೆಗಾರರು ದೂರು ನೀಡಿರುವುದು ನಿಜ. 2012 ರಲ್ಲಿ ಇದೆ ರೀತಿ ಸಮಸ್ಯೆ ಉಂಟಾದಾಗ ಅಂದಿನ ಜಿಲ್ಲಾಧಿಕಾರಿಗಳು ಸಂಧಾನಸಭೆ ನಡೆಸಿ ಸಮಿತಿಯಲ್ಲಿ ಕಾಯಂ ಆಗಿಅಡ್ಡೆಗಾರರ ಪೈಕಿ ಒಬ್ಬರನ್ನು ನೇಮಕ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದರು. ಆದರೆ ಏಕೋ ಏನೋ ಈ ವರ್ಷ ಸಮಿತಿಯಲ್ಲಿ ಅಡ್ಡೆಗಾರರನ್ನುಕೈಬಿಡಲಾಗಿದೆ. ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು.

ಅಡ್ಡೆಗಾರರಿಗೆ ಹಿಂದೆ ಸಿಕ್ಕಿತ್ತು ಪ್ರಾತಿನಿಧ್ಯ :

ಪ್ರಥಮ ದರ್ಜೆ ದೇಗುಲವಾದ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ ಆರಂಭದಿಂದ 9 ಸದಸ್ಯರನ್ನು ಒಳಗೊಂಡ ಧರ್ಮದರ್ಶಿ ಸಮಿತಿ ರಚನೆ ಮಾಡಲಾಗುತ್ತಿದ್ದು, ಅಲ್ಲಿಂದಲೂ ಉತ್ಸವ ಹೊರುವ 4 ಮೂಲೆಯ ಅಡ್ಡೆಗಾರರನ್ನು ಸಮಿತಿಗೆ ನೇಮಿಸಲಾಗುತ್ತಿತ್ತು. ಸಮಿತಿಯಲ್ಲಿ ಇಬ್ಬರು ಅಡ್ಡೆಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, 2012ರಲ್ಲಿ ಸಮಿತಿ ರಚನೆ ವೇಳೆ ಅಡ್ಡೆಗಾರರನ್ನು ಕಡೆಗಣಿಸಿದ್ದರಿಂದ ಉತ್ಸವ ಹೊರುವುದಿಲ್ಲವೆಂದು ಅಡ್ಡೆಗಾರರು ಪಟ್ಟು ಹಿಡಿದಿದ್ದರು. ಆ ವೇಳೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಸಮಿತಿಯಲ್ಲಿ ಅಡ್ಡೆಗಾರರಿಗೆ ಪ್ರಾತಿನಿಧ್ಯ ಕೊಡುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಅದರಂತೆ ಅಂದಿನಿಂದಲೂ ಸಮಿತಿಯಲ್ಲಿ ಅಡ್ಡೆಗಾರರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಮುಂಬೈಗೆ ಮರಳಿದ ನಂತರ ಗೃಹ ಪ್ರವೇಶ ಸಮಾರಂಭದಲ್ಲಿ ಭಾವುಕರಾದ ಮೌನಿ ರಾಯ್;

Mon Jan 31 , 2022
ನಟಿ ಮೌನಿ ರಾಯ್ ತಮ್ಮ ಮದುವೆಯ ನಂತರದ ಸಮಾರಂಭಗಳ ಕೆಲವು ಸ್ಮರಣೀಯ ಕ್ಷಣಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. 36 ವರ್ಷದ ನಟಿ ತನ್ನ ಚೆಲುವೆ ಸೂರಜ್ ನಂಬಿಯಾರ್ ಅವರೊಂದಿಗೆ ಗೋವಾದಲ್ಲಿ ವಿನೋದ ಮತ್ತು ಹಬ್ಬದ ವಿವಾಹ ಸಮಾರಂಭದಲ್ಲಿ ಗಂಟು ಹಾಕಿದರು. ದಂಪತಿಗಳು ಈಗ ಮುಂಬೈನಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊವು ದಂಪತಿಗಳು ಮತ್ತು ಅವರ ಸ್ನೇಹಿತರು ಮತ್ತು ಕುಟುಂಬದವರು ಆನಂದಿಸುತ್ತಿರುವ ಹೋಮ್‌ಕಮಿಂಗ್ ಸಂಭ್ರಮಾಚರಣೆಯ ಸ್ನೀಕ್ ಪೀಕ್ […]

Advertisement

Wordpress Social Share Plugin powered by Ultimatelysocial