ಹೊಸ ಟ್ಯಾಬ್ಲೆಟ್‌ ಪ್ಯಾನಾಸೊನಿಕ್‌ ಟಫ್ ಬುಕ್ S1 ರಗಡ್ ಟ್ಯಾಬ್ಲೆಟ್ ಬಿಡುಗಡೆ;

ಪ್ಯಾನಾಸೋನಿಕ್‌ ಕಂಪೆನಿ ಟೆಕ್‌ ವಲಯದಲ್ಲಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೊನ್‌,ಸ್ಮಾರ್ಟ್‌ಟಿವಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಟ್ಯಾಬ್ಲೆಟ್‌ ಪ್ಯಾನಾಸೊನಿಕ್‌ ಟಫ್ ಬುಕ್ S1 ರಗಡ್ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಪರಿಚಯಿಸಿದೆ.

ಇನ್ನು ಈ ರಗಡ್‌ ಟ್ಯಾಬ್ಲೆಟ್‌ ಲಾಜಿಸ್ಟಿಕ್ಸ್, ಸಾರಿಗೆ, ಕ್ಷೇತ್ರ ಸೇವೆ ಮತ್ತು ಇತರ ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡಿದೆ. ಇದು ಆಂಡ್ರಾಯ್ಡ್‌ ಎಂಟರ್‌ಪ್ರೈಸ್‌ನೊಂದಿಗೆ ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಪ್ಯಾನಾಸೋನಿಕ್‌:
ಹೌದು, ಪ್ಯಾನಾಸೋನಿಕ್‌ ಕಂಪೆನಿ ಹೊಸ ಪ್ಯಾನಾಸೊನಿಕ್‌ ಟಫ್ ಬುಕ್ S1 ರಗಡ್ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಇದು ಅಪ್ಲಿಕೇಶನ್ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ವ್ಯವಹಾರಗಳಿಗೆ ನಿರ್ವಹಣೆಯನ್ನು ಹೆಚ್ಚಿಸುತ್ತದೆ ಎಂದು ಹೆಳಲಾಗುತ್ತದೆ. ಜೊತೆಗೆ ಈ ಟ್ಯಾಬ್ಲೆಟ್‌ ಎರಡು ಬ್ಯಾಟರಿ ಗಾತ್ರದ ಆಯ್ಕೆಗಳೊಂದಿಗೆ ಸಂಯೋಜಿತ ಬಾರ್‌ಕೋಡ್ ರೀಡರ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಟ್ಯಾಬ್ಲೆಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ಹೇಗಿದೆ?

ಪ್ಯಾನಾಸೋನಿಕ್ ಟಫ್‌ಬುಕ್ S1 800×1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 7 ಇಂಚಿನ WXGA IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹೊರಾಂಗಣದಲ್ಲಿ ವೀಕ್ಷಿಸಲು ಸುಲಭವಾಗಿದೆ. ಅಲ್ಲದೆ ಈ ಟ್ಯಾಬ್ಲೆಟ್‌ ಅನ್ನು ಕೈಗವಸುಗಳು ಅಥವಾ ಹೆಚ್ಚುವರಿ ನಿಷ್ಕ್ರಿಯ ಪೆನ್‌ನೊಂದಿಗೆ ಬಳಸಬಹುದು ಎಂದು ಹೇಳಲಾಗಿದೆ. ಜೊತೆಗೆ ಪ್ಯಾನಾಸೋನಿಕ್ ಟ್ಯಾಬ್ಲೆಟ್ ಡ್ರಾಪ್ ರೆಸಿಸ್ಟೆಂಟ್ 20 ರಿಂದ 50 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನದಲ್ಲಿ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ.

ಪ್ರೊಸೆಸರ್‌ ಯಾವುದು?

ಪ್ಯಾನಾಸೋನಿಕ್ ಟಫ್‌ಬುಕ್ S1 ಟ್ಯಾಬ್ಲೆಟ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 660 SoC ಪ್ರೊಸೆಸರ್‌ ಹೊಂದಿದೆ. ಇದು 512 GPU ಹೊಂದಿದ್ದು, ಆಂಡ್ರಾಯ್ಡ್‌ ಎಂಟರ್‌ಪ್ರೈಸ್‌ನೊಂದಿಗೆ ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.ಇದು ಅಪ್ಲಿಕೇಶನ್ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ವ್ಯವಹಾರಗಳಿಗೆ ನಿರ್ವಹಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಕ್ಯಾಮೆರಾ;

ಪ್ಯಾನಾಸೋನಿಕ್ ಟಫ್‌ಬುಕ್ S1 ಟ್ಯಾಬ್ಲೆಟ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ;

ಪ್ಯಾನಾಸೋನಿಕ್ ಟಫ್‌ಬುಕ್ S1 ಟ್ಯಾಬ್ಲೆಟ್‌ ಸ್ಟ್ಯಾಂಡರ್ಡ್ 3,200mAh ಮತ್ತು ವಿಸ್ತೃತ 5,580mAh ಸಾಮರ್ಥ್ಯದ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಅಯ್ಕೆಗಳಲ್ಲಿ 4G LTE, ಡ್ಯುಯಲ್-ಬ್ಯಾಂಡ್ Wi-Fi 802.11 , ಬ್ಲೂಟೂತ್ v5.1, NFC, USB ಟೈಪ್-C ಪೋರ್ಟ್, ಮೈಕ್ರೊ SD/ SDXC ಕಾರ್ಡ್ ಸ್ಲಾಟ್, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಒಂದು ಪೋರ್ಟ್ ರೆಪ್ಲಿಕೇಟರ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಡಿಜಿಟಲ್ ದಿಕ್ಸೂಚಿ, ಗೈರೊಸ್ಕೋಪ್, GPS, GLONASS, Beidou ಮತ್ತು QZSS ಅನ್ನು ಬೆಂಬಲಿಸಲಿದೆ. ಇನ್ನು ಮೊದಲ ಬ್ಯಾಟರಿ 8 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದ್ದರೆ ಎರಡನೆಯದು 14 ಗಂಟೆಗಳವರೆಗೆ ಇರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

#youthcongress #congress #rahulgandhi ನಿಮ್ಮ ಲೈಫ್‌ ನಲ್ಲಿ ಬೆಸ್ಟ್‌ ರೋಲ್‌ ಪ್ಲೇ ಮಾಡಿದ್ದು ಯಾರು ? LIVE @ 4 PM | Speed News Kannada |

Fri Dec 31 , 2021
#youthcongress #congress #rahulgandhi ನಿಮ್ಮ ಲೈಫ್‌ ನಲ್ಲಿ ಬೆಸ್ಟ್‌ ರೋಲ್‌ ಪ್ಲೇ ಮಾಡಿದ್ದು ಯಾರು ? LIVE @ 4 PM | Speed News Kannada | Please follow and like us:

Advertisement

Wordpress Social Share Plugin powered by Ultimatelysocial