ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ವಿರಾಟರಾಜನ ಅರಮನೆಯಲ್ಲಿ ಪಾಂಡವರ ಅಜ್ಞಾತವಾಸದ ಪ್ರಾರಂಭ.
ಧರ್ಮಜನು ತನ್ನೊಂದಿಗಿದ್ದ ಇತರ ಪರಿವಾರದವರನ್ನು ಕಳಿಸಿ ಮುಂದುವರಿದನು. ಒಂದು ವೃಕ್ಷದ ಕೆಳಗೆ ಕುಳಿತು ಸಮಾಲೋಚನೆಗೆ ತೊಡಗಿದರು. ಯಾವ ಯಾವ ದಿಕ್ಕಿನಲ್ಲಿ ಯಾವ ಯಾವ ರಾಜರಿದ್ದಾರೆ, ಎಲ್ಲಿದ್ದರೆ ತಮಗೆ ಕ್ಷೇಮ ಎಂದು ಯೋಚಿಸಿದಾಗ ಅರ್ಜುನನು ವಿರಾಟರಾಜನ ಬಗ್ಗೆ ಹೇಳಿದನು. ಧರ್ಮಜನು ಒಪ್ಪಿದನು. ತನ್ನಿಂದಾಗಿ ಎಲ್ಲರೂ ನೋಯಬೇಕಾಯಿತು ಎಂದು ಅಳಲಿದನು. ಆಗ ನಮ್ಮ ನಾಲ್ವರ ಜೀವ ನೀನೇ ಎಂದು ಸಮಾಧಾನಿಸಿದರು.
ತಾನು ಕಂಕನೆಂಬ ಹೆಸರಿನಲ್ಲಿ ರಾಜನ ಜೊತೆಯಿರುತ್ತೇನೆ ಎಂದು ಧರ್ಮಜ ನುಡಿದನು. ವಲಲನಾಗಿ ಭೀಮನು ಪಾಕಶಾಲೆಯಲ್ಲಿಯೂ, ಅರ್ಜುನನು ಊರ್ವಶಿಯ ಶಾಪದ ಫಲದ ರೂಪದಲ್ಲಿ ರಾಜಕುಮಾರಿಗೆ ನೃತ್ಯ ಕಲಿಸುವುದಾಗಿಯೂ ನಕುಲ ಸಹದೇವರು ಕುದುರೆ ಮತ್ತು ಗೋವುಗಳ ಪಾಲಕರಾಗಿಯೂ ಒಪ್ಪಿದರು. ದ್ರೌಪದಿಯು ಸೈರಂಧ್ರಿಯಾಗಿ ರಾಣಿಯ ಊಳಿಗ ಸೇರುವುದೆಂದು ನಿರ್ಧಾರವಾಯಿತು. ಎಲ್ಲರೂ ದುರ್ಗೆಯನ್ನು ಸ್ತುತಿಸಿದರು.
ಊರ ಹೊರಗಿನ ಒಂದು ಬನ್ನಿಮರದಲ್ಲಿ ತಮ್ಮ ಆಯುಧಗಳನ್ನು ಇಟ್ಟರು. ಭೀಮನಿಗೆ ಮಾತ್ರ ಕೊಡಕೂಡದೆಂದೂ ಅರ್ಜುನನು ಕೇಳಿದರೆ ಕೊಡಬಹುದೆಂದೂ ಧರ್ಮಜ ವೃಕ್ಷದೇವತೆಗೆ ಬೇಡಿಕೊಂಡನು. ಮತ್ತೆ ಭೀಮನಿಗೆ ಕೋಪ. ಆದರೆ ಧರ್ಮಜನು ಸಮಾಧಾನ ಹೇಳಿದನು. ಇದೊಂದು ವರ್ಷ ಸೈರಿಸಿಕೊಂಡಿದ್ದರೆ ಒಳಿತು ಎಂದು ಭೀಮನಿಗೆ ಅರಿವಾಯಿತು.

ಕಂಕನಾಗಿ ಬಂದವನನ್ನು ವಿರಾಟರಾಜನು ತನ್ನೊಂದಿಗೆ ಇರಿಸಿಕೊಂಡನು. ಭೀಮನಿಗೆ ಪಾಕಶಾಲೆಯ ಕೆಲಸ ದೊರೆಯಿತು. ಬೃಹನ್ನಳೆಯಾಗಿ ಅರ್ಜುನ ಬಂದನು. ಯಮಳರು ಸಹಾ ಹಯ ಮತ್ತು ಗೋವುಗಳ ರಕ್ಷಕರಾದರು. ಕೊನೆಯಲ್ಲಿ ದ್ರೌಪದಿಯು ಬಂದಳು. ಅವಳ ಚೆಲುವನ್ನು ಕಂಡು ಎಲ್ಲರೂ ಅಚ್ಚರಿಪಟ್ಟರು. ರಾಣಿಯು ಇವಳನ್ನು ಕರೆಸಿ ವಿಚಾರಿಸಲು ಗಂಧರ್ವರು ಐದು ಮಂದಿ ಪತಿಗಳನ್ನು ಒಂದು ವರ್ಷ ಕೋಪದಿಂದ ದೂರವಿಟ್ಟಿರುವುದಾಗಿ ತಿಳಿಸಿದಳು. ತಾನು ಹಿಂದೆ ರಾಣಿಯ ಅಲಂಕಾರದ ಕೆಲಸದಲ್ಲಿ ಇದ್ದುದಾಗಿ ತಿಳಿಸಿದಳು. ಸುದೇಷ್ಣಾದೇವಿಯು ಅವಳನ್ನು ಸೇರಿಸಿಕೊಂಡಳು. ಹೀಗೆ ಅವರವರು ಆರಿಸಿಕೊಂಡ ಕೆಲಸಗಳನ್ನು ನಿರ್ವಹಿಸುತ್ತ ಪಾಂಡವರು ಮತ್ತು ದ್ರೌಪದಿ ತಮ್ಮ ಅಜ್ಞಾತವಾಸವನ್ನು ಕಳೆಯತೊಡಗಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಸರಣಿ ತೀರ್ಪು: ಉಡುಪಿ ಮುಸ್ಲಿಂ ಹುಡುಗಿಯರು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ!

Wed Mar 16 , 2022
ಉಡುಪಿಯ ಬಾಲಕಿಯರು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗುವುದಿಲ್ಲ ಮತ್ತು ನ್ಯಾಯ ಸಿಗುವವರೆಗೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ. ಅವರ ಪ್ರಕಾರ ಕರ್ನಾಟಕ ಹೈಕೋರ್ಟಿನ ತೀರ್ಪು ”ಅಸಂವಿಧಾನಿಕ”. ‘‘ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೆವು. ನಮ್ಮ ವಿರುದ್ಧ ಆದೇಶ ಬಂದಿದೆ. ಹಿಜಾಬ್ ಧರಿಸದೆ ಕಾಲೇಜಿಗೆ ಹೋಗುವುದಿಲ್ಲ ಆದರೆ ಅದಕ್ಕಾಗಿ ಹೋರಾಟ ಮಾಡುತ್ತೇವೆ. […]

Advertisement

Wordpress Social Share Plugin powered by Ultimatelysocial