ಯುಎಇನಲ್ಲಿ ಇನ್ನು ಸೆನ್ಸಾರ್‌ ಫ್ರೀ; 21 ವರ್ಷ ಮೇಲ್ಪಟ್ಟವರಿಗೆ ವೀಕ್ಷಣೆಯ ಹೊಸ ವ್ಯವಸ್ಥೆ;

ಯುಎಇನಲ್ಲಿ ಇನ್ನು ಸೆನ್ಸಾರ್‌ ಫ್ರೀ; 21 ವರ್ಷ ಮೇಲ್ಪಟ್ಟವರಿಗೆ ವೀಕ್ಷಣೆಯ ಹೊಸ ವ್ಯವಸ್ಥೆ

ದುಬಾೖ: ತೀರಾ ಕಟ್ಟುನಿಟ್ಟಿನ ಸಾಂಸ್ಕೃತಿಕ ಚೌಕಟ್ಟು ಹೊಂದಿದ್ದ ಯುಇಎ ಈಗಾಗಲೇ ನಿಧಾನಕ್ಕೆ ಆಧುನಿಕ ಜಗತ್ತಿಗೆ ತೆರೆದುಕೊಳ್ಳಲಾರಂಭಿಸಿದೆ. ಹೊಸತಾಗಿ ಪ್ರಕಟ ಮಾಡಿರುವ ಕ್ರಮವೊಂದರಲ್ಲಿ ಸಿನೆಮಾ ಪ್ರಮಾಣೀಕರಣ ವ್ಯವಸ್ಥೆಯನ್ನೇ ರದ್ದು ಮಾಡಿದೆ.

ಧಾರ್ಮಿಕ ನಂಬಿಕೆಗಳಿಗೆ ಅಡ್ಡಿ ಎಂಬ ಕಾರಣದಿಂದಾಗಿ ಅಲ್ಲಿ ಬಿಡುಗಡೆಯಾಗುತ್ತಿದ್ದ ಸಿನೆಮಾಗಳಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತಿತ್ತು. ಇನ್ನು ಮುಂದೆ ಅಂಥ ವ್ಯವಸ್ಥೆಯೇ ಇರುವುದಿಲ್ಲ. ಎಮಿರೇಟ್ಸ್‌ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ ಹೊಸ ತಾಗಿರುವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿ ತರಲಿದೆ.

ಅದರ ಅನ್ವಯ ಅಂತಾರಾಷ್ಟ್ರೀಯವಾಗಿ ವೀಕ್ಷಕರಿಗೆ ಅನ್ವಯವಾಗುವಂತೆ ಸಿನೆಮಾ ವೀಕ್ಷಣೆ ಮಾಡಿ 21 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ವೀಕ್ಷಿಸಲು ಅನುಕೂಲವಾಗುವಂತೆ ನಿಯಮದಲ್ಲಿ ಬದಲಾವಣೆ ಮಾಡಿದೆ. ಈ ಬಗ್ಗೆ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಲಿದೆ. ಇತ್ತೀಚೆಗಷ್ಟೇ ವಿವಾಹಿತರಾಗದ ಜೋಡಿ ಜತೆಯಾಗಿ ವಾಸಿಸುವ ನಿಟ್ಟಿನಲ್ಲಿ ಕೂಡ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿತ್ತು. ಇಷ್ಟು ಮಾತ್ರವಲ್ಲದೆ, ಪಾಶ್ಚಿಮಾತ್ಯ ಶೈಲಿಯಲ್ಲಿ ಶನಿವಾರ ಮತ್ತು ರವಿವಾರಗಳನ್ನು ವಾರಾಂತ್ಯವೆಂದು ಪರಿಗಣಿಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಕೆಲಸ ಗಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಐದು ತಾಸು ಐಶ್ವರ್ಯ ರೈ ವಿಚಾರಣೆ, ಸಂಸತ್ತಿನಲ್ಲಿ ಅತ್ತೆ ಜಯಾ ಬಚ್ಚನ್ ರುದ್ರಾವತಾರ!

Wed Dec 29 , 2021
ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಅನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ಸತತ ಐದು ತಾಸುಗಳ ಕಾಲ ವಿಚಾರಣೆ ನಡೆಸಿದೆ. 2016ರ ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಐಶ್ವರ್ಯಾ ರೈ ಹೆಸರು ಕೇಳಿ ಬಂದಿತ್ತು. ಐಶ್ವರ್ಯಾ ರೈ, ನಕಲಿ ವಿದೇಶದಲ್ಲಿ ನಕಲಿ ಸಂಸ್ಥೆ ಸ್ಥಾಪಿಸಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಬಳಿಕ ಇಂದು ಐಶ್ವರ್ಯಾ ರೈ […]

Advertisement

Wordpress Social Share Plugin powered by Ultimatelysocial