ಎಚ್.ವಿ.ಆರ್. ಅಯ್ಯಂಗಾರ್ ರಿಸರ್ವ್ ಬ್ಯಾಂಕ್‌ನ ಆರನೇ ಗವರ್ನರ್ ಆಗಿದ್ದರು.

 

ಕನ್ನಡದ ನೆಲದವರಾದ ಹರವು ವೆಂಕಟನರಸಿಂಹ ವರದರಾಜ ಅಯ್ಯಂಗಾರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಆರನೇ ಗವರ್ನರ್ ಆಗಿದ್ದರು. ಇಂದು ಅವರ ಸಂಸ್ಮರಣೆ ದಿನ.
ಎಚ್.ವಿ. ಆರ್. ಅಯ್ಯಂಗಾರ್ ಅವರು 1902ರ ಆಗಸ್ಟ್ 23 ರಂದು ಜನಿಸಿದರು. ಅವರದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪದ ಹರವು ಗ್ರಾಮ. ಅವರ ತಂದೆ ವೆಂಕಟ ನರಸಿಂಹ ಅಯ್ಯಂಗಾರ್. ತಾಯಿ ಚೊಕ್ಕಮ (ಶ್ರೀರಂಗಮ್ಮ). ಅಯ್ಯಂಗಾರ್ ಅವರು 1919ರ ಅವಧಿಯಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಮುಂದೆ ಐಸಿಎಸ್ ಪದವಿ ಗಳಿಸಿ 1926ರ ಅಕ್ಟೋಬರ್ 20ರಂದು ಭಾರತೀಯ ನಾಗರಿಕ ಸೇವೆಗೆ ಪ್ರವೇಶಿಸಿದರು. 1941ರಲ್ಲಿ ಅವರಿಗೆ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ (CIE) ಕಂಪ್ಯಾನಿಯನ್ ಗೌರವ ಸಂದಿತು.ಎಚ್.ವಿ. ಆರ್. ಅಯ್ಯಂಗಾರ್ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಕಾರ್ಯದರ್ಶಿಗಳಾಗಿ ಪ್ರಧಾನಿ ಅವರ ನಿಕಟ ಸಂಪರ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಎಚ್. ವಿ. ಆರ್. ಅಯ್ಯಂಗಾರ್ ಅವರು 1957 ಮಾರ್ಚ್ 1 ರಿಂದ 1962ರ ಫೆಬ್ರವರಿ 28 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು.ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಳ್ಳುವ ಮೊದಲು ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಕೆಲಕಾಲ ಸೇವೆ ಸಲ್ಲಿಸಿದರು.
ಎಚ್. ವಿ. ಆರ್. ಅಯ್ಯಂಗಾರ್ ಅವರ ಆರ್ ಬಿ ಐ ಗೌರ್ನರ್ ಆಗಿದ್ದ ಅಧಿಕಾರಾವಧಿಯಲ್ಲಿ, ಭಾರತೀಯ ನಾಣ್ಯ ವ್ಯವಸ್ಥೆಯು ಹಿಂದಿನ ಪೈ, ಪೈಸೆ ಮತ್ತು ಆಣೆ ಪದ್ಧತಿಗಳಿಂದ ಆಧುನಿಕ ದಶಮಾಂಶ ನಾಣ್ಯ ವ್ಯವಸ್ಥೆಗೆ ಪರಿಷ್ಕೃತಗೊಂಡಿತು. ಅವರ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ವೇರಿಯಬಲ್ ನಗದು ಮೀಸಲು ಅನುಪಾತ(variable reserve ration) ಕ್ರೆಡಿಟ್ ನಿಯಂತ್ರಣ (credit control) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಚಾಲನೆಗೆ ಬಂತು.ಎಚ್ ವಿ ಆರ್ ಅಯ್ಯಂಗಾರ್ ಅವರಿಗೆ 1962ರಲ್ಲಿ ಪದ್ಮವಿಭೂಷಣ ಗೌರವ ಸಂದಿತು.ಅಯ್ಯಂಗಾರ್ ಅವರು 4.1.1969 ರಿಂದ 3.1.1972 ರ ನಡುವೆ ಐಐಟಿ ಮದ್ರಾಸ್ ಅಧ್ಯಕ್ಷರಾಗಿದ್ದರು.
2002 ರಲ್ಲಿ ಎಚ್. ವಿ. ಆರ್. ಅಯ್ಯಂಗಾರ್ ಅವರ ಜನ್ಮ ಶತಮಾನೋತ್ಸವ ಸ್ಮರಣೆ ಸಂದರ್ಭದಲ್ಲಿ ‘ಸ್ನಾಪ್ಶಾಟ್ಸ್ ಆಫ್ ಹಿಸ್ಟರಿ’ಎಂಬ ಸಚಿತ್ರ ಸ್ಮರಣಿಕೆಯ ಕೃತಿಯನ್ನು ಅವರ ಪುತ್ರಿ ಇಂದಿರಾ ಮತ್ತು ಅಳಿಯಂದಿರಾದ ಬಿಪಿಎನ್ ಪಟೇಲ್ ಅವರು ಸಂಪಾದಿಸಿ ಪ್ರಕಟಿಸಿದರು. ಈ ಕೃತಿಯಲ್ಲಿ ಎಚ್. ವಿ. ಆರ್. ಅಯ್ಯಂಗಾರ್ ಅವರು 1962ರ ನಂತರದ ನಿವೃತ್ತ ಜೀವನದಲ್ಲಿ ಮೂಡಿಸಿದ ಅನೇಕ ಬರಹಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಸ್ಟ್‌ ಆಫೀಸ್‌ನಲ್ಲಿ ಹಣ ಡಬ್ಬಲ್‌ ಆಗಲು ಈ ಸ್ಕೀಮ್‌ ಮೇಲೆ ಬಂಡವಾಳ ಹೂಡಿಕೆ ಮಾಡಿ.

Thu Feb 23 , 2023
ನವದೆಹಲಿ: ಪೋಸ್ಟ್ ಆಫೀಸ್ ಸ್ಕೀಮ್ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ತರುತ್ತಲೇ ಇರುತ್ತದೆ ಇದರಿಂದ ಜನರು ತಮ್ಮ ಹಣವನ್ನು ಸುಲಭವಾಗಿ ಹೂಡಿಕೆ ಮಾಡಬಹುದು. ಇಂದು ನಾವು ನಿಮಗೆ ಪೋಸ್ಟ್ ಆಫೀಸ್‌ನ ಹೊಸ ಯೋಜನೆಯ ಬಗ್ಗೆ ಹೇಳುತ್ತೇವೆ, ಅದರ ಮೂಲಕ ನೀವು ಕೇವಲ 120 ದಿನಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು.ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ (ಕಿಸಾನ್ ವಿಕಾಸ್ ಪತ್ರ ಯೋಜನೆ) ಮತ್ತು ಈ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿದರಗಳನ್ನು […]

Advertisement

Wordpress Social Share Plugin powered by Ultimatelysocial