ಸರ್ಕಾರ ಮೊಟ್ಟೆ-ಬಟ್ಟೆಯಲ್ಲಿ ರಾಜಕೀಯ ಮಾಡುವುದು ಬಿಟ್ಟು, ಅಭಿವೃದ್ಧಿಯತ್ತ ಗಮನ ನೀಡಿದರೆ,

 

ಬೆಂಗಳೂರು: ಸರ್ಕಾರ ಮೊಟ್ಟೆ-ಬಟ್ಟೆಯಲ್ಲಿ ರಾಜಕೀಯ ಮಾಡುವುದು ಬಿಟ್ಟು, ಅಭಿವೃದ್ಧಿಯತ್ತ ಗಮನ ನೀಡಿದರೆ, ನಮ್ಮ ದೇಶ ಬೇಗ ಉದ್ಧಾರವಾಗುತ್ತದೆ ಎಂದು ಸೌಹಾರ್ದ-ಕರ್ನಾಟಕ ಸಂಘಟನೆ ಆಗ್ರಹಿಸಿದೆ.ಹಿಜಾಬ್ ವಿಚಾರವಾಗಿ ತುಮಕೂರು ಸಿದ್ಧಗಂಗಾ ಮಠಾಧಿಪತಿಗಳ ದರ್ಶನ ಪಡೆದು ಅಲ್ಲಿಂದ, ಸುತ್ತಮುತ್ತ ಇರುವ ದರ್ಗಾಕ್ಕೆ ಪ್ರತಿಭಟನಾ ರ್ಯಾಲಿ ನಡೆಸಲು ಸಂಘಟನೆ ನಿರ್ಧರಿಸಿದೆ.ಹಿಜಾಬ್ ಕುರಿತು ನಡೆಯುತ್ತಿರುವ ಗಲಭೆ ವಿಚಾರವಾಗಿ ಶನಿವಾರ ಖಾಸಗಿ ಹೊಟೇಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌಹಾರ್ದ- ಕರ್ನಾಟಕ ಸಂಚಾಲಕ ರವಿಕುಮಾರ್ ರಾಯಸಂದ್ರ, ನಮ್ಮದು ಸರ್ವ ಧರ್ಮ ದೇಶವಾಗಿದೆ. ಇಲ್ಲಿ ಎಲ್ಲ ಜಾತಿಯವರಿದ್ದಾರೆ. ಇಷ್ಟು ದಿನ ಇಲ್ಲದ ಸಮಸ್ಯೆ ಇದೀಗ ಬಂದಿದೆ. ಬಿಜೆಪಿ ಅವರೇ ಇದರ ಸೃಷ್ಠಿಕೃತರು. ನಮಗೆ ಸಮವಸ್ತ್ರದ ಬಗ್ಗೆ ಬೇಜಾರಿಲ್ಲ. ಆದರೆ, ಮುಖವನ್ನು ಕವರ್ ಮಾಡುವಂತಹ ಹಿಜಾಬ್ ಧರಿಸುವುದು ಬೇಡ ಎಂದರೆ ಹೇಗೆ? ಬಸವಣ್ಣ ಸರ್ವಧರ್ಮ ಪ್ರಚಾರಕಾಗಿದ್ದರು. ಇಂತಹ ನಾಡಿನಲ್ಲಿ ಜಾತಿ, ಧರ್ಮ ಬೀಜ ಬಿತ್ತುವುದು ಸರಿಯಲ್ಲ ಎಂದರು.ಸೌಹಾರ್ದ- ಕರ್ನಾಟಕ ಸಂಘಟನೆ ಸಂಚಾಲಕ ಸೈಯ್ಯದ್ ಅಬ್ಬಾಸ್ ಮಾತನಾಡಿ, ದೇಶದಲ್ಲಿ ಶೇ.93 ಶೂದ್ರರು, ಅಲ್ಪ ಸಂಖ್ಯಾತರಿದ್ದಾರೆ. ಹಿಂದು-ಮುಸ್ಲಿಂ ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಅನವಶ್ಯಕವಾಗಿ ದೊಡ್ಡದು ಮಾಡುವುದು ಬೇಡ. ಪ್ರತಿಯೊಬ್ಬರಿಗೂ ಹಿಂದು- ಮುಸ್ಲಿಂ ಸ್ನೇಹಿತರು ಇದ್ದೇ ಇರುತ್ತಾರೆ. ಇವರ ಮಧ್ಯೆ ಅನವಶ್ಯಕವಾಗಿ ಬಿರುಕು ಮೂಡಿಸುವುದು ಬೇಡ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PARADISE:ಜನಪ್ರಿಯ ಬಿರಿಯಾನಿ ಸರಣಿ ಪ್ಯಾರಡೈಸ್ ಫುಡ್ ಕೋರ್ಟ್ 2027 ರ ವೇಳೆಗೆ 500 ರೆಸ್ಟೋರೆಂಟ್ಗಳೊಂದಿಗೆ ಭಾರತದಾದ್ಯಂತ ವಿಸ್ತರಿಸಲಿದೆ!!

Sat Feb 12 , 2022
ಹೈದರಾಬಾದ್ ಎಂದಾಕ್ಷಣ ಯಾರಿಗಾದರೂ ಮೊದಲು ನೆನಪಾಗುವುದು ಬಿರಿಯಾನಿ. ಮತ್ತು ಹೈದರಾಬಾದ್‌ನಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಎಂದರೆ ಪ್ಯಾರಡೈಸ್ ಬಿರಿಯಾನಿ. ಈ ಬಿರಿಯಾನಿ ಸರಣಿಯು 2026-27 ರ ವೇಳೆಗೆ ದೇಶಾದ್ಯಂತ 500 ರೆಸ್ಟೋರೆಂಟ್‌ಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಪ್ಯಾರಡೈಸ್ ಫುಡ್ ಕೋರ್ಟ್‌ನ ವಿಸ್ತರಣಾ ಯೋಜನೆಗಳು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಹೂಡಿಕೆದಾರರಾದ ಸಮಾರಾ ಕ್ಯಾಪಿಟಲ್ ಗ್ರೂಪ್‌ನಿಂದ ಇತ್ತೀಚಿನ ಹೆಚ್ಚುವರಿ ಹೂಡಿಕೆಯ ಹಿನ್ನಲೆಯಲ್ಲಿ ರೆಸ್ಟಾರೆಂಟ್ ಸರಪಳಿಯಲ್ಲಿ ತನ್ನ ಪಾಲನ್ನು 49 ಪ್ರತಿಶತದಿಂದ ಈಗ 51 […]

Advertisement

Wordpress Social Share Plugin powered by Ultimatelysocial