ಹೈದರಾಬಾದ್ : ಸರ್ಜಿಕಲ್ ಸ್ಟ್ರೈಕ್ ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ,

ಹೈದರಾಬಾದ್ : ಸರ್ಜಿಕಲ್ ಸ್ಟ್ರೈಕ್ ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ, ಇಂದಿಗೂ ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುತ್ತಿದ್ದೇನೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಭಾನುವಾರ ಹೇಳಿಕೆ ನೀಡಿದ್ದಾರೆ.ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ವಿರುದ್ಧ ಕಿಡಿ ಕಾರಿದ ಅವರು, ಪಂಚ ರಾಜ್ಯ ಚುನಾವಣೆಗಳನ್ನು ಗೆಲ್ಲಲು ಪಕ್ಷವು ಧರ್ಮ ಮತ್ತು ಸೇನೆಯ ಉಲ್ಲೇಖಗಳನ್ನು ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಪಾಕಿಸ್ಥಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಕೀರ್ತಿ ಸೇನೆಗೆ ಸಲ್ಲುತ್ತದೆಯೇ ಹೊರತು ಬಿಜೆಪಿಗಲ್ಲ ಎಂದು ಕೆಸಿಆರ್ ಹೇಳಿದ್ದಾರೆ.ಮತದಾರರನ್ನು ತನ್ನ ಪರವಾಗಿ ಸಜ್ಜುಗೊಳಿಸಲು ಬಿಜೆಪಿ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಬಳಸುತ್ತಿದೆ ಎಂದು ಕಿಡಿಕಾರಿದರು.ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತದೆ. ಈಗ ಜನರಲ್ ಬಿಪಿನ್ ರಾವತ್ ಫೋಟೋಗಳನ್ನು ಬಳಸಲಾಗುತ್ತಿದೆ. ಏನು ಅಸಂಬದ್ಧ,’ ಎಂದು ಅವರು ಹೇಳಿದರು.ಉತ್ತರಾಖಂಡ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 2016 ರ ಸರ್ಜಿಕಲ್ ಸ್ಟ್ರೈಕ್‌ಗೆ ಪುರಾವೆ ಕೇಳಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದನ್ನು ಉಲ್ಲೇಖಿಸಿ ಕಿಡಿ ಕಾರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಸಕಿ ಖನೀಜ ಫಾತಿಮಾ ಇಂದು ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಭಾಗವಹಿಸಿದ್ದಾರೆ.

Mon Feb 14 , 2022
ಬೆಂಗಳೂರು: ಹಿಜಾಬ್- ಕೇಸರಿ ಶಾಲು ಪ್ರತಿಭಟನೆ ವೇಳೆ ‘ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಆಗಮಿಸುತ್ತೇನೆ, ಧೈರ್ಯವಿದ್ದರೆ ತಡೆಯಲಿ’ ಎಂದಿದ್ದ ಶಾಸಕಿ ಖನೀಜ ಫಾತಿಮಾ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ.ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ಖನೀಜ ಫಾತಿಮಾ ಕೆಲ ದಿನಗಳ ಹಿಂದೆ ಈ ಘೋಷಣೆ ಮಾಡಿದ್ದರು.ಅದರಂತೆ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.ಈ‌ ಹಿಂದಿನ‌ ಅಧಿವೇಶನಗಳಲ್ಲೂ ಶಾಸಕಿ ಖನೀಜ ಫಾತಿಮಾ ಹಿಜಾಬ್ ಧರಿಸಿಯೇ ಭಾಗವಹಿಸುತ್ತಿದ್ದರು.ಎಡವಿ ಬಿದ್ದ ಶಾಸಕ: ವಿಧಾನಸೌಧದ ಕೆಂಗಲ್ […]

Advertisement

Wordpress Social Share Plugin powered by Ultimatelysocial