ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ:

ಚೆನ್ನೈ: ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದಲ್ಲಿದ್ದ 100 ವರ್ಷಗಳಿಗೂ ಹಳೆಯದಾದ 3 ಹಿಂದು ದೇಗುಲಗಳನ್ನು ನಾನು ಒಡೆದು ಹಾಕಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಟಿ.ಆರ್‌.ಬಾಲು ವಿವಾದಿತ ಹೇಳಿಕೆ ನೀಡಿದ್ದಾರೆ.ಸೇತು ಸಮುದ್ರ ಯೋಜನೆಗೆ ಬೆಂಬಲ ಸೂಚಿಸಿ ದ್ರಾವಿಡ ಸಭೆಗಳು ಮಧುರೈನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣವಾಗುವ ಹಾದಿಯಲ್ಲಿ ಇದ್ದ 100 ವರ್ಷಗಳಿಗೂ ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ.

ಇವು ಲಕ್ಷ್ಮಿ, ಸರಸ್ವತಿ ಮತ್ತು ಪಾವರ್ತಿ ದೇವರಿಗೆ ಸೇರಿದ ದೇವಸ್ಥಾನಗಳಾಗಿದ್ದವು. ಈ ದೇಗುಲಗಳ ಧ್ವಂಸದ ವೇಳೆ ನನ್ನ ಸಹಚರರು ಮತ ಕಡಿತವಾಗುವ ಎಚ್ಚರಿಕೆ ನೀಡಿದ್ದರು. ಆದರೂ ನಾನು ತಲೆ ಕೆಡಿಸಿಕೊಳ್ಳದೇ ಇವುಗಳನ್ನು ತೆರವು ಮಾಡಿದೆ’ ಎಂದು ಹೇಳಿದ್ದಾರೆ. ಸೇತು ಸಮುದ್ರ ಯೋಜನೆಗಾಗಿ ರಾಮ ಸೇತುವೆಯನ್ನು ತೆರವು ಮಾಡಬೇಕು ಎಂಬ ಹೇಳಿಕೆಗಳು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಡಿಎಂಕೆ ಸಂಸದ ಈ ಹೇಳಿಕೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನುಮತಿ ಇಲ್ಲದೆ ಪ್ರವಾಸಿಗರ ಫೋಟೋ ಕ್ಲಿಕ್ಕಿಸಿದರೆ ಜೈಲು ಫಿಕ್ಸ್.

Tue Jan 31 , 2023
ಪಣಜಿ :ಗೋವಾದಲ್ಲಿ ಪ್ರವಾಸಿಗರ ಖಾಸಗಿತನ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಗೋವಾದ ಬೀಚ್‌ಗಳಲ್ಲಿ ಪ್ರವಾಸಿಗರ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಅವರ ಫೋಟೋಗಳನ್ನು ತೆಗೆಯುವಂತಿಲ್ಲ. ಫೋಟೋ ತೆಗೆಯುವ ಮುನ್ನ ಅವರ ಅನುಮತಿ ಕಡ್ಡಾಯವಾಗಿರುತ್ತದೆ. ವಿಶೇಷವಾಗಿ ಅವರು ಬಿಸಿಲಿನಲ್ಲಿ ಮಲಗಿರುವಾಗ, ಸಮುದ್ರದಲ್ಲಿ ಮೋಜು ಮಾಡುತ್ತಿರುವಾಗ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ತೆಗೆಯುವಂತಿಲ್ಲ. ಏಕವ್ಯಕ್ತಿ ಫೋಟೋ ತೆಗೆಯುವಾಗಲೂ ಅವರ ಅನುಮತಿ ಬೇಕಾಗಿರುತ್ತದೆ. ಪ್ರವಾಸಿಗರ ಖಾಸಗಿತನವನ್ನು ಗೌರವಿಸುವ ಸಲುವಾಗಿ ಈ […]

Advertisement

Wordpress Social Share Plugin powered by Ultimatelysocial