ಅನುಮತಿ ಇಲ್ಲದೆ ಪ್ರವಾಸಿಗರ ಫೋಟೋ ಕ್ಲಿಕ್ಕಿಸಿದರೆ ಜೈಲು ಫಿಕ್ಸ್.

ಣಜಿ :ಗೋವಾದಲ್ಲಿ ಪ್ರವಾಸಿಗರ ಖಾಸಗಿತನ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಗೋವಾದ ಬೀಚ್‌ಗಳಲ್ಲಿ ಪ್ರವಾಸಿಗರ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಅವರ ಫೋಟೋಗಳನ್ನು ತೆಗೆಯುವಂತಿಲ್ಲ.

ಫೋಟೋ ತೆಗೆಯುವ ಮುನ್ನ ಅವರ ಅನುಮತಿ ಕಡ್ಡಾಯವಾಗಿರುತ್ತದೆ. ವಿಶೇಷವಾಗಿ ಅವರು ಬಿಸಿಲಿನಲ್ಲಿ ಮಲಗಿರುವಾಗ, ಸಮುದ್ರದಲ್ಲಿ ಮೋಜು ಮಾಡುತ್ತಿರುವಾಗ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ತೆಗೆಯುವಂತಿಲ್ಲ. ಏಕವ್ಯಕ್ತಿ ಫೋಟೋ ತೆಗೆಯುವಾಗಲೂ ಅವರ ಅನುಮತಿ ಬೇಕಾಗಿರುತ್ತದೆ.

ಪ್ರವಾಸಿಗರ ಖಾಸಗಿತನವನ್ನು ಗೌರವಿಸುವ ಸಲುವಾಗಿ ಈ ನಿಯಮಗಳನ್ನು ಮಾಡಲಾಗಿದೆ ಎಂದು ಗೋವಾ ಸರ್ಕಾರ ತಿಳಿಸಿದೆ. ಅದರೊಂದಿಗೆ ಗೋವಾದಲ್ಲಿ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದನ್ನೂ ಸಹ ನಿಷೇಧಿಸಲಾಗಿದೆ. ಹಾಗೆ ಮಾಡಿದರೆ 50 ಸಾವಿರ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶವಿದೆ. ಇನ್ನು ಬೀಚ್‌ನಲ್ಲಿ ಕುಳಿತು ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಅಪಘಾತಗಳನ್ನು ತಡೆಯಲು ಬಂಡೆಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳದಂತೆ ಸರ್ಕಾರ ಹೇಳಿದೆ.

ಇದಲ್ಲದೇ ಗೋವಾದ ಐತಿಹಾಸಿಕ ಕಟ್ಟಡಗಳಿಗೆ ಹಾನಿ ಮಾಡದಂತೆ ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಅಧಿಕ ಶುಲ್ಕ ವಿಧಿಸುವುದನ್ನು ತಪ್ಪಿಸಲು, ಮೀಟರ್‌ ಇರುವ ಟ್ಯಾಕ್ಸಿಗಳಲ್ಲೇ ಬಳಸಿ, ಅದರಲ್ಲಿ ನಮೂದಾದ ದರವನ್ನೇ ಪ್ರವಾಸಿಗರು ಪಾವತಿ ಮಾಡಬೇಕು ಎಂದು ಸೂಚಿಸಲಾಗಿದೆ. ಮಾರ್ಗಸೂಚಿ ಪ್ರಕಾರ, ಗೋವಾಗೆ ಬರುವ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಲಾದ ಹೋಟೆಲ್‌ಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಲಸಕ್ಕೆಂದು ಹೊರಟ ಬಿಎಂಟಿಸಿ ಚಾಲಕ ಅನುಮಾನಸ್ಪದ ಸಾವು.

Tue Jan 31 , 2023
ಕೆಲಸಕ್ಕೆಂದು ಹೊರಟ ಬಿಎಂಟಿಸಿ ಚಾಲಕ ಅನುಮಾನಸ್ಪದ ಸಾವು. ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ. ಪುಟ್ಟೇಗೌಡ (೨೮) ಮೃತ ಬಿಎಂಟಿಸಿ ಚಾಲಕ. ಚೆನ್ನಪಟ್ಟಣ ಮೂಲದ ಪುಟ್ಟೇಗೌಡ. ಕಳೆದ ಆರು ತಿಂಗಳಿಂದ ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ. ಇಂದು ಬೆಳಿಗ್ಗೆ ೭ ಗಂಟೆ ಸುಮಾರಿಗೆ ಊರಿನಿಂದ ಹೊರಟ ಚಾಲಕ. ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ. ಬಳಿಕ ೧೧:೩೦ರ ಸುಮಾರಿಗೆ ಸಾವಿನಪ್ಪಿರೋ ಮಾಹಿತಿ. ಕೆಂಗೇರಿಯ ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದ […]

Advertisement

Wordpress Social Share Plugin powered by Ultimatelysocial