ಕೆ. ವಿಶ್ವನಾಥ್ ಮಹಾನ್ ನಿರ್ದೇಶಕ.

ಕೆ. ವಿಶ್ವನಾಥ್ ಎಂದರೆ ಸಂಗೀತದ ಮಾಧುರ್ಯದ ನಾದ ಹೊರಹೊಮ್ಮುತ್ತದೆ. ಶಂಕರಾಭರಣಂ ಚಿತ್ರದಲ್ಲಿ ಒಬ್ಬ ಪುಟ್ಟ ಹುಡುಗ ಸಂಗೀತದ ಬಗ್ಗೆ ಅಪಾರ ನಿಷ್ಠೆಯಿರುವ ಶಂಕರಶಾಸ್ತ್ರಿಗಳ ಮನೆಗೆ ಬರುತ್ತಾನೆ. ಬಂದು ಅವರ ಮನೆಯ ಒಂದು ಕಂಬ ಮುಟ್ಟಿದಾಗಲೂ ತಂಬೂರಿಯ ಸಂಗೀತದ ಮೀಟುವಿಕೆಯ ಅನುಭಾವ ಆ ಹುಡುಗನಿಗೆ ದೊರಕುತ್ತದೆ. ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿಮುತ್ಯಂ, ಸಿರಿಸಿರಿಮುವ್ವ, ಸಪ್ತಪದಿ, ಸ್ವರಾಭಿಷೇಕಂ, ಶ್ರುತಿಲಯಲು, ಸ್ವಯಂ ಕೃಷಿ, ಸ್ವರ್ಣ ಕಮಲಂ, ಸ್ವಾತಿ ಕಿರಣಂ, ಸಿರಿವೆನ್ನಲ, ಸಂಗೀತ ಸಂಗಮಂ, ಅನ್ಬೇ ಶಿವಂ ಮುಂತಾದ ಚಿತ್ರಗಳ ಹೆಸರನ್ನು ನೆನೆದಾಗ ಸಹಾ ಈ ಆಪ್ತ ಸಂಗೀತದ ಭಾವ ನಮ್ಮಲ್ಲಿ ತೆರೆದುಕೊಳ್ಳುತ್ತದೆ. ಇಂಥಹ ಮನೋಜ್ಞ ಸಾಂಸ್ಕೃತಿಕ ಚಿತ್ರಗಳನ್ನು ನೀಡಿದವರು ಕೆ. ವಿಶ್ವನಾಥ್.ಕೆ. ವಿಶ್ವನಾಥ್ 1930ರ ಫೆಬ್ರುವರಿ 19ರಂದುಅಂಧ್ರಪ್ರದೇಶದ ವಿಜಯವಾಡಾದಲ್ಲಿ ಜನಿಸಿದರು. ಒಂದು ಕಾಲದಲ್ಲಿ ಹಲವು ರೀತಿಯ ಏಕತಾನತೆಯಿಂದ ನರಳುತ್ತಿದ್ದ ತೆಲುಗು ಚಿತ್ರರಂಗಕ್ಕೆ ಸಂಗೀತ, ನೃತ್ಯ, ಸಾಹಿತ್ಯಗಳ ಪುನರುತ್ಥಾನದ ಮೂಲಕ ತಂಗಾಳಿಯನ್ನು ತಂದು ಅಂತಹ ತಂಗಾಳಿಯನ್ನು ಅವರದೇ ಆದ ಮೇಲ್ಕಂಡ ಕೆಲವೊಂದು ಚಿತ್ರಗಳ ರೂಪಕಗಳ ಮೂಲಕ ಹಿಂದೀ, ತಮಿಳು, ಮಲಯಾಳಂ ಚಿತ್ರರಂಗಗಳಲ್ಲಿಯೂ ತಂದುದು ಮಾತ್ರವೇ ಅಲ್ಲದೆ ಒಂದು ರೀತಿಯಲ್ಲಿ ಪರೋಕ್ಷವಾಗಿ ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಗೀತ ನೃತ್ಯಗಳ ಪರಂಪರೆಯನ್ನು ಮತ್ತೊಮ್ಮೆ ಪುನರುತ್ಥಾನಗೊಳಿಸಿದವರು ‘ಕಾಶಿನಾಥುನಿ ಕೆ. ವಿಶ್ವನಾಥ್’ ಅವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.

Sat Feb 4 , 2023
ಕರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಿಂದ ದೂರವಾದಷ್ಟೂ ಅದು ನಮ್ಮನ್ನು ಬಳಿ ಕರೆಯುತ್ತದೆ. ಅದರಲ್ಲೂ ಹೋಟೇಲ್ ಬೀದಿ ಬದಿಗಳಲ್ಲಿ ಸಿಗುವಂತಹ ಆಹಾರವನ್ನು ಸೇವಿಸಲೇಬಾರದು. ಇಂಥ ಸಣ್ಣ ಅಂಗಡಿಗಳಲ್ಲಿ ಹೈಡ್ರೋಜನೀಕರಣದ ಎಣ್ಣೆಯನ್ನು ಬಳಸುತ್ತಾರೆ. ಇದರಲ್ಲಿ ಟ್ರಾನ್ಸ್ ಫ್ಯಾಟ್ ಅಧಿಕವಾಗಿದ್ದು ಆಹಾರಕ್ಕೆ ರುಚಿ ಕೊಡುತ್ತದೆ ಆದರೆ ಆರೋಗ್ಯ ಕೆಡುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿ ಹೆಚ್ಚು ತಿನ್ನುವುದರಿಂದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯದ ಸಂಬಂಧಿತ ಕಾಯಿಲೆಗಳು ಬರುತ್ತವೆ. ಮನೆಯಲ್ಲಿ ಆರೋಗ್ಯಕರ ಎಣ್ಣೆಯಿಂದ ತಯಾರಿಸಿದ […]

Advertisement

Wordpress Social Share Plugin powered by Ultimatelysocial