ಬೆಂಗಳೂರಲ್ಲಿ ಮೇಕೆದಾಟು ಪಾದಯಾತ್ರೆ

ಬೆಂಗಳೂರು, ಮಾ.1- ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಆರಂಭಿಸಿರುವ ಎರಡನೇ ಹಂತದ ಪಾದಯಾತ್ರೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಬೆಂಗಳೂರಿನಾದ್ಯಂತ ಸಂಚರಿಸಲಿದೆ.

 

ಬೆಳಗ್ಗೆ ಕೆಂಗೇರಿ ಬಳಿಯ ಪೂರ್ಣಿಮಾ ಕಲ್ಯಾಣ ಮಂಟಪದಿಂದ ಆರಂಭವಾಗಿರುವ ಪಾದಯಾತ್ರೆ ಕೆಂಚೇನಹಳ್ಳಿ ಕ್ರಾಸ್, ಜಯರಾಮ್‍ದಾಸ್, ರೈಲ್ವೆ ಗೇಟ್ ಜಂಕ್ಷನ್, ಜ್ಞಾನಭಾರತಿ ಜಂಕ್ಷನ್, ಆರ್‍ಆರ್ ನಗರ್ ಆರ್ಚ್ ಜಂಕ್ಷನ್, ಪಂತರಪಾಳ್ಯ ಜಂಕ್ಷನ್, ನಾಯಂಡನಹಳ್ಳಿ ಜಂಕ್ಷನ್ ಬಲ ತಿರುವು ಪಡೆದು ದೇವೇಗೌಡ ವೃತ್ತ, ಪಿಇಎಸ್ ಕಾಲೇಜು ಜಂಕ್ಷನ್, ಕೆಇಬಿ ಜಂಕ್ಷನ್, ಎಂಸಿಆರ್‍ಟಿ ಜಂಕ್ಷನ್, ಇಟ್ಟಮಡು ಜಂಕ್ಷನ್, ಕತ್ರಿಗುಪ್ಪೆ ಜಂಕ್ಷನ್,

ಕಾಮಾಕ್ಯ ಜಂಕ್ಷನ್ ಎಡ ತಿರುವು ಪಡೆದು ವಿದ್ಯಾಪೀಠ ಪಾರ್ಕ್ ಬಲ ತಿರುವಿನ ಮೂಲಕ ವೆಂಕಟಾದ್ರಿ ಕಲ್ಯಾಣಮಂಟಪ ಬಲ ತಿರುವಿನ ರಿಂಗ್ ರಸ್ತೆ, ಚನ್ನಮ್ಮ ಜಂಕ್ಷನ್, ಸಂಗಮ್ ಸರ್ಕಲ್‍ನ ರಾಜಲಕ್ಷ್ಮಿ ಜಂಕ್ಷನ್, ಅರಬಿಂದೋ ಜಂಕ್ಷನ್, 46ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಜಯನಗರ 5ನೇ ಬ್ಲಾಕ್, ಮಾರೇನಹಳ್ಳಿ ಜಂಕ್ಷನ್, ರಾಗಿಗುಡ್ಡ ಜಂಕ್ಷನ್, ಜಯನಗರ 9ನೇ ಬ್ಲಾಕ್, 28ನೇ ಮುಖ್ಯರಸ್ತೆ, ಈಸ್ಟ್ ಎಂಡ್ ಜಂಕ್ಷನ್, ಜಯದೇವ ಜಂಕ್ಷನ್, ಬಿಟಿಎಂ 16ನೇ ಮುಖ್ಯರಸ್ತೆ ಜಂಕ್ಷನ್, ಬಿಟಿಎಂ 1ನೇ ಹಂತ 20ನೇ ಮುಖ್ಯರಸ್ತೆ ವರೆಗೂ ತಲುಪಲಿದೆ.

ಈ ಪಾದಯಾತ್ರೆಯಲ್ಲಿ ರಾಜರಾಜೇಶ್ವರಿನಗರ, ವಿಜಯನಗರ, ಗೋವಿಂದರಾಜನಗರ, ಯಶವಂತಪುರ, ನೆಲಮಂಗಲ, ಕುಣಿಗಲ್, ಪದ್ಮನಾಭನಗರ, ಬಸವನಗುಡಿ, ಜಯನಗರ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಸಂಜೆ ಜಯನಗರ ಹಾಗೂ ಬಿಟಿಎಂ ಲೇಔಟ್ ಕಲ್ಯಾಣ ಮಂಟಪಗಳಲ್ಲಿ ಪಾದಯಾತ್ರಿಗಳು ವಿಶ್ರಾಂತಿ ಪಡೆಯಲಿದ್ದಾರೆ. ನಾಳೆ ಪಾದಯಾತ್ರೆ ಅದ್ವೈತ್ ಪೆಟ್ರೋಲ್ ಬಂಕ್ ಸಮೀಪದಿಂದ ಆರಂಭಗೊಂಡು 20ನೇ ಮುಖ್ಯರಸ್ತೆ, ಜೆಸ್ಮಾ ಭವನ, ವಿವೇಕ್‍ನಗರ ಮೂಲಕ ಅರಮನೆ ಮೈದಾನದ ಗಾಯತ್ರಿ ವಿಹಾರಕ್ಕೆ ತಲುಪಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

US ಮಹಿಳೆ ಬೇಕಾಬಿಟ್ಟಿಯಾಗಿ ಸ್ವಚ್ಛಗೊಳಿಸುವಾಗ ನೂರಾರು ಪ್ರೇಮ ಪತ್ರಗಳನ್ನು ಕಂಡುಹಿಡಿದಳು. ನಂತರ, ಅವಳು ಇದನ್ನು ಮಾಡಿದಳು

Tue Mar 1 , 2022
ಹಲವಾರು ವರ್ಷಗಳಿಂದ ಮನೆಯಲ್ಲಿ ವಾಸಿಸುವುದನ್ನು ಕಲ್ಪಿಸಿಕೊಳ್ಳಿ ಮತ್ತು ನೀವು ಒಂದು ದಿನ ಅಸಾಮಾನ್ಯವಾದುದನ್ನು ಕಂಡುಕೊಳ್ಳುತ್ತೀರಾ? ಅಮೆರಿಕದ ವರ್ಜೀನಿಯಾದಲ್ಲಿ ವಾಸಿಸುತ್ತಿರುವ ಅನ್ನಾ ಎಲಿಜಬೆತ್ ಪ್ರಿಲ್ಲಾಮನ್ ಅವರು ಬೇಕಾಬಿಟ್ಟಿಯಾಗಿ ಸ್ವಚ್ಛಗೊಳಿಸುತ್ತಿದ್ದಾಗ ಎರಡು ಪೆಟ್ಟಿಗೆಗಳನ್ನು ಕಂಡುಹಿಡಿದರು. ಅಣ್ಣಾ ಅದನ್ನು ತೆರೆದಾಗ, ಬೆಟ್ಟಿ ಸ್ಯೂ ಎಂಬ ಅದೇ ಮಹಿಳೆಯನ್ನು ಉದ್ದೇಶಿಸಿ ನೂರಾರು ಪತ್ರಗಳಂತೆ ತೋರುತ್ತಿದ್ದಳು. ಅವರು ತಮ್ಮ ಪತ್ತೆಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಪತ್ರಗಳು 1955 ರದ್ದಾಗಿವೆ ಎಂದು ಬರೆದಿದ್ದಾರೆ. ಈ ಪತ್ರಗಳನ್ನು ಬರೆದ […]

Advertisement

Wordpress Social Share Plugin powered by Ultimatelysocial