“ನಾನು ಇನ್ನೂ 25 ವರ್ಷ ನಟಿಸುತ್ತೇನೆ” ಎಂದ ಶಿವಣ್ಣ.

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹೀರೊ ಶಿವರಾಜ್‌ಕುಮಾರ್. ವಯಸ್ಸು 60, ಆದರೂ ಯಂಗ್‌ ಅಂಡ್ ಎನೆರ್ಜೆಟಿಕ್. ಶಿವಣ್ಣನಿಗೆ ಇಷ್ಟೊಂದು ವಯಸ್ಸು ಆಗೊಯ್ತಾ? ಅಂತ ಯಾರೂ ಊಹಿಸಲು ಸಾಧ್ಯವೇ ಇಲ್ಲ.

ದಿನದಿಂದ ದಿನಕ್ಕೆ ಶಿವರಾಜ್‌ಕುಮಾರ್ ಯಂಗ್ ಆಗುತ್ತಿದ್ದಾರೆ.

ಅವರ ಎಜರ್ಜಿ, ಸ್ಪೀಡ್ ಇವೆಲ್ಲವನ್ನೂ ಬೀಟ್ ಮಾಡೋಕೆ ಇಂದಿನ ಯುವಕರಿಗೇ ಸಾಧ್ಯವಿಲ್ಲ. ಆದರೂ, 125 ಸಿನಿಮಾಗಳು ಆಯ್ತು. ಇನ್ನೊಂದು 25 ಸಿನಿಮಾ ಮಾಡಿ ಶಿವಣ್ಣ ನಟನೆಯಿಂದ ನಿವೃತ್ತಿ ಪಡೆಯಬಹುದು ಎಂದು ಭಾವಿಸಿದ್ದರು. ಆದರಕ್ಕೆ ಶಿವಣ್ಣ ಸಂದೇಶ ರವಾನೆ ಮಾಡಿದ್ದಾರೆ.

ಶಿವರಾಜ್‌ಕುಮಾರ್ ಅಭಿನಯದ 125ನೇ ಸಿನಿಮಾ ‘ವೇದ’ 50 ದಿನಗಳನ್ನು ಪೂರೈಸಿದೆ. ಈ ವೇಳೆ ಸಿನಿಮಾ ಗೆದ್ದಿರೋ ಸಂಭ್ರಮವನ್ನು ಚಿತ್ರತಂಡದ ಜೊತೆ ಹಂಚಿಕೊಂಡಿದ್ದಾರೆ. ಈ ವೇಳೆ ನಟನೆಯಿಂದ ನಿವೃತ್ತಿ ಆಗೋ ಮಾತೇ ಇಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ಅಷ್ಟಕ್ಕೂ ಶಿವಣ್ಣನ ಮುಂದಿನ 25 ವರ್ಷದ ಪ್ಲ್ಯಾನ್, ವೇದ ಯಶಸ್ಸು ಇವೆಲ್ಲದರ ಬಗ್ಗೆ ಏನು ಹೇಳಿದ್ದಾರೆ ಅನ್ನೋದರ ಝಲಕ್ ಇಲ್ಲಿದೆ.

ನಿವೃತ್ತಿ ಮಾತೇ ಇಲ್ಲ.. ಇನ್ನೂ 25 ವರ್ಷ ನಟನೆ

‘ವೇದ’ ಯಶಸ್ಸಿನ ಸಂಭ್ರಮದಲ್ಲಿದ್ದ ಶಿವಣ್ಣ ಫ್ಯೂಚರ್ ಪ್ಲ್ಯಾನ್ ಏನು? ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ನಿರ್ಮಾಪಕರು ಸಿನಿಮಾ ಮಾಡುವುದಕ್ಕೆ ಬರುತ್ತಿರೋದಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಹಾಗೇ ಇನ್ನೂ 25 ವರ್ಷ ನಟನೆ ಮಾಡುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.”37 ವರ್ಷದಿಂದಲೇ ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದೀರಾ. ಯಾವುದೋ ಮೂಡ್ನಲ್ಲಿ ಕೋಪದಲ್ಲಿ ಏನೋ ಹೇಳಿದ್ದೀನಿ. ಅದನ್ನು ತಡೆದುಕೊಂಡು ಸಪೋರ್ಟ್ ಮಾಡಿದ್ದೀರ ಧನ್ಯವಾದಗಳು. ಇನ್ನೂ ಹೆಚ್ಚು ಸಿನಿಮಾ ಮಾಡಬೇಕು ಅಂತ ನಿರ್ಮಾಪಕರು ಬಂದು ಸಿನಿಮಾ ಮಾಡುತ್ತಿದ್ದಾರೆ ಅದು ನನ್ನ ಭಾಗ್ಯ ಅಂತ ಭಾವಿಸುತ್ತೇನೆ. ನನಗೆ ಅನಿಸುತ್ತೆ ಇನ್ನೂ ಒಂದು 25 ವರ್ಷ ನಟನೆ ಮಾಡಬಹುದು ಅಂತ ಅನಿಸುತ್ತೆ.” ಎಂದಿದ್ದು ಶಿವಣ್ಣ ಅಭಿಮಾನಿಗಳಿಗೆ ಖುಷಿಯನ್ನು ದುಪ್ಪಟ್ಟು ಮಾಡಿದೆ.

ಚಿತ್ರರಂಗಕ್ಕೆ ಬಂದು 37 ವರ್ಷ

ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದು ಫೆಬ್ರವರಿ 19ಕ್ಕೆ 37 ವರ್ಷಗಳನ್ನು ಪೂರೈಸಿದ್ದಾರೆ. ಈ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಶಿವಣ್ಣ ಪತ್ರವನ್ನು ಬರೆದಿದ್ದಾರೆ. “ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆನಂದ್‌ಯಿಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆಕಟ್ಟಲಾಗದ್ದು” ಎಂದು ಶಿವರಾಜ್‌ಕುಮಾರ್ ಪತ್ರ ಬರೆದು ಟ್ವೀಟ್ ಮಾಡಿದ್ದಾರೆ.

“ಇಡೀ ಇಂಡಸ್ಟ್ರಿನೇ ಒಂದು ಕುಟುಂಬ. ಎಲ್ಲಾ ಇಂಡಸ್ಟ್ರಿ ಸದಸ್ಯರೂ ನಮ್ಮ ಫ್ಯಾಮಿಲಿ ಇದ್ದಂಗೆ. ನಮ್ಮ ತಂದೆ-ತಾಯಿ, ಉದಯ್ ಶಂಕರ್ ಅವರು, ಸಿಂಗೀತಂ ಶ್ರೀನಿವಾಸ ರಾವ್‌ ಅವರು, ಶಂಕರ್ ಗಣೇಶ್ ಅವರು ಸಾಕಷ್ಟು ಜನರನ್ನು ನೆನಪಿಸಿಕೊಳ್ಳಲೇಬೇಕು. 1986 ಆನಂದ್ ಸಿನಿಮಾದಿಂದ ಬಂದಿದ್ದು ಅವತ್ತಿಂದ 125ನೇ ಸಿನಿಮಾ ‘ವೇದ’. ಅದಕ್ಕೆ ನನ್ನ ತಾಯಿ ಪ್ರಡ್ಯೂಸರ್, ವೇದಗೆ ನನ್ನ ಹೆಂಡ್ತಿ ಪ್ರಡ್ಯೂಸರ್. ಎರಡೂ ನನಗೆ ತುಂಬಾ ಹತ್ತಿರವಾಗಿರೋದು. ಯಾಕಂದ್ರೆ, ಒಬ್ಬರು ತಾಯಿ. ಇನ್ನೊಬ್ಬರು ಹೆಂಡ್ತಿ.” ಎನ್ನುತ್ತಾರೆ ಶಿವಣ್ಣ.

‘ವೇದ’ ಸಕ್ಸಸ್ ಫುಲ್ ಖುಷ್

” ಈ ನಡುವೆ 100 ದಿನ ಆಗೋದು ಕಮ್ಮಿ. ಈಗ ‘ಕಾಂತಾರ’ ಒಂದು 100 ಡೇಸ್ ಆಗಿದೆ. ಅದಕ್ಕಿಂತ ಮುಂಚೆ ‘ಟಗರು’ 25 ಡೇಸ್ ಆಗಿತ್ತು. ಈಗ ‘ವೇದ’ 50 ದಿನಗಳಾಗಿದೆ. ರಾಯಚೂರು ಅಲ್ಲಿ ಇಲ್ಲಿ 10ನೇ ವಾರ ಓಡುತ್ತಿದೆ. ಓಟಿಟಿಯಲ್ಲೂ 10 ಕೋಟಿ ಸ್ಟ್ರೀಮಿಂಗ್ ನಿಮಿಷಗಳಷ್ಟು ಜನ ಸಿನಿಮಾ ನೋಡಿದ್ದಾರೆ. ವೇದ ತೆಲುಗು ರೆಡಿಯಾದಾಗ ಓಟಿಟಿಯಲ್ಲಿ ಬಂತು ಆದರೂ, ರಿಲೀಸ್ ಮಾಡಿದ್ವಿ.” ಎಂದು ಶಿವಣ್ಣ ಹೇಳಿದ್ದಾರೆ.

ಎಲ್ಲಾ ಶಿವಣ್ಣ ಮಾಡ್ಬಿಟ್ಟ ಅಂದ್ರೆ ಹೇಗೆ?

“1 ರಿಂದ 125ನೇ ಸಿನಿಮಾದಲ್ಲಿ ಏನು ಹೆಮ್ಮೆ ಅಂದರೆ, ಇಲ್ಲಿ ಶಿವಣ್ಣನಿಗಿಂತ ಫಿಮೇಲ್ ಕ್ಯಾರೆಕ್ಟರ್‌ಗಳು ಚೆನ್ನಾಗಿ ಆಕ್ಟ್ ಮಾಡಿದ್ದಾರೆ ಅಂತ ಕೇಳಿ ನನಗೆ ಬಹಳ ಖುಷಿಯಾಗಿದೆ. ಯಾಕಂದ್ರೆ, ಬಹಳ ಅಪರೂಪ ಹೀಗೆ ಸಿಗೋದು. ಎಲ್ಲಾ ಶಿವಣ್ಣ ಮಾಡ್ಬಿಟ್ಟ.. ಶಿವಣ್ಣ ಮಾಡ್ಬಿಟ್ಟ ಅಂದ್ರೆ, ಇಲ್ಲ ಇವರೆಲ್ಲಾ ಮಾಡಿಸಿದ್ದಾರೆ. ಅಲ್ಲದೆ ಈ ಎಲ್ಲಾ ಪಾತ್ರಗಳೂ ಶೈನ್ ಆಗಿರೋದು ನಮಗೆ ಬಹಳ ಹೆಮ್ಮೆ.” ಎಂದು ಗಾನವಿ ಲಕ್ಷ್ಮನ್, ಅದಿತಿ ಸಾಗರ್, ಉಮಾಶ್ರೀ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಪ್ಪಿನಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ.

Tue Feb 21 , 2023
ಹೊಸ ಬಡಾವಣೆಯಲ್ಲಿ ವಿಕ್ರಮ ರೈತ ಯುವಕರ ಕ್ಷೇಮಾಭಿವೃದ್ಧಿ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಉಪ್ಪು ಮತ್ತು ಇತರೆ ಬಣ್ಣಗಳಿಂದ ಶಿವಮೂರ್ತಿಯನ್ನು ಅಲಂಕಾರ ಮಾಡಿದ್ದು, ಸಂಜೆ ಜಾಗರಣೆ ಪ್ರಯುಕ್ತ ಆರ್‍ಕೆಸ್ಟ್ರಾ ಇತರೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ವಿಜೃಂಭಣೆಯಿಂದ ಆಚರಿಸಿದರು.ಹಬ್ಬದ ಪ್ರಯುಕ್ತ ಬೇತಮಂಗಲ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮ ಗಳಿಂದ ನಾಗರಿಕರು ಪಾಲ್ಗೋಂಡು ಮನರಂಜನೆ ಕಾರ್ಯಕ್ರಮ ವೀಕ್ಷಿಸಿದರು. ಉಪ್ಪು ಮತ್ತು ಇತರೆ ಬಣ್ಣಗಳಿಂದ ಮತ್ತು ವಿದ್ಯುತ್ ದ್ವೀಪಗಳಿಂದ ಅಲಂಕಾರಗೊಂಡಿದ್ದ ಶಿವಮೂರ್ತಿ ದೇವರಿಗೆ ವಿಶೇಷ […]

Advertisement

Wordpress Social Share Plugin powered by Ultimatelysocial