ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕಾಲ್‌ ಮಾಡಲು ಹೀಗೆ ಮಾಡಿ?

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕಾಲ್‌ ಮಾಡಲು ಹೀಗೆ ಮಾಡಿ?

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಜಿಮೇಲ್‌ ಕೂಡ ಒಂದಾಗಿದೆ. ಇಂದಿನ ದಿನಗಳಲ್ಲಿ ಜಿ-ಮೇಲ್‌ ಸೇವೆಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಅದರಲ್ಲೂ ತಮ್ಮ ಗೌಪ್ಯ ಮಾಹಿತಿ, ದಾಖಲೆಗಳನ್ನು ಹೆಚ್ಚಿನ ಜನರು ಜಿ-ಮೇಲ್‌ ಮುಖಾಂತರ ವಿನಿಮಯ ಮಾಡಿಕೊಳ್ಳುತ್ತಾರೆ.

ಜಿ-ಮೇಲ್‌ನಲ್ಲಿ ನಿಮ್ಮ ಮೇಲ್‌ ಅನ್ನು ನೀವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬಹುದು. ಇದಿಷ್ಟೇ ಅಲ್ಲ ಜಿ-ಮೇಲ್‌ ಮೂಲಕ ಕಾಲ್‌ ಕೂಡ ಮಾಡಬಹುದಾಗಿದೆ.

ಗೂಗಲ್‌
 ಹೌದು, ಗೂಗಲ್‌ ತನ್ನ ಜಿ-ಮೇಲ್‌ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಕಾಲಿಂಗ್‌ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ಗೂಗಲ್‌ನ ಎಲ್ಲಾ ಬಳಕೆದಾರರು ಈ ಕಾಲಿಂಗ್‌ ಫೀಚರ್ಸ್‌ ಅನ್ನು ಬಳಸುಬಹುದಾಗಿದೆ. ಈ ಹಿಂದೆ ಹ್ಯಾಂಗ್‌ಔಟ್ಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಿದ್ದ ಕಾರಣ ಗೂಗಲ್‌ಗೆ ಇದೇನು ಹೊಸತಲ್ಲ. ಸದ್ಯ ಗೂಗಲ್‌ನ ಜಿ-ಮೇಲ್‌ನಲ್ಲಿ ಕಾಲ್‌ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಜಿ-ಮೇಲ್‌ ಮೂಲಕ ಕಾಲ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ನಲ್ಲಿ ಜಿ-ಮೇಲ್‌ ಕರೆ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಜಿ-ಮೇಲ್‌ ಅಕೌಂಟ್‌ ತೆರೆಯಿರಿ.
ಹಂತ:2 ನಂತರ ಜಿ-ಮೇಲ್‌ ಟಾಸ್ಕ್ ಬಾರ್‌ನಲ್ಲಿರುವ “ಮೀಟ್” ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ “ನ್ಯೂ ಮೀಟ್‌” ಬಟನ್ ಮೇಲೆ ಟ್ಯಾಪ್ ಮಾಡಿ. ಮೀಟಿಂಗ್ ಲಿಂಕ್ ಅನ್ನು ಹಂಚಿಕೊಳ್ಳಲು ಆಯ್ಕೆಗಳನ್ನು ಕಂಡು ಬರಲಿದೆ.
ಹಂತ:4 ನೀವು ತ್ವರಿತ ಸಭೆಗೆ ಸೇರಲು ಆಯ್ಕೆಮಾಡಿದರೆ, ನಿಮ್ಮ ಕಾಲರ್ ಜೊತೆಗೆ ಲಿಂಕ್ ಅನ್ನು ಹಂಚಿಕೊಳ್ಳಲು “ಇನ್ವೈಟ್‌ ಲಿಂಕ್‌ ಶೇರ್‌” ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:5 ನೀವು ಲಿಂಕ್ ಅನ್ನು ಟ್ಯಾಪ್ ಮಾಡಿದರೆ, ಸ್ವಯಂಚಾಲಿತವಾಗಿ ಮೀಟಿಂಗ್ ಸ್ಪೇಸ್‌ಗೆ ಸೇರಬಹುದು.
ಹಂತ:6 ನಂತರ ಜಿ-ಮೇಲ್‌ ತೆರೆಯಿರಿ ಮತ್ತು “ಚಾಟ್” ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:7 ನಿಮ್ಮ ಚಾರ್ ವಿಂಡೋವನ್ನು ಆಯ್ಕೆಮಾಡಿ ಮತ್ತು ಅದನ್ನು ತೆರೆಯಿರಿ.
ಹಂತ:8 ಈಗ “+” ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು “ಮೀಟ್ ಲಿಂಕ್” ಆಯ್ಕೆಮಾಡಿ.
ಹಂತ:9 ಲಿಂಕ್‌ ಅನ್ನು ನಿಮ್ಮ ಸಭೆಗೆ ಭಾಗವಹಿಸುವವರಿಗೆ ಕಳುಹಿಸಬೇಕಾಗುತ್ತದೆ.
ಹಂತ:10 ಈಗ ನೀವು ಮತ್ತು ನಿಮ್ಮ ಸಂಪರ್ಕದ ಇಬ್ಬರೂ ಸಭೆಯನ್ನು ಪ್ರಾರಂಭಿಸಲು ಲಿಂಕ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘಾವಧಿಯ ವೀಡಿಯೊವನ್ನು ಪೋಸ್ಟ್ ಮಾಡುವುದು ಹೇಗೆ?

Tue Dec 21 , 2021
ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಪೈಕಿ ಇನ್‌ಸ್ಟಾಗ್ರಾಮ್‌ ವೀಡಿಯೋಸ್‌,ಸ್ಟೋರೀಸ್‌ ಫೀಚರ್ಸ್‌ ಕೂಡ ಸೇರಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋಗಳನ್ನು ಸಹ ಶೇರ್‌ ಮಾಡಬಹುದಾಗಿದೆ. ಇನ್‌ಸ್ಟಾಗ್ರಾಮ್‌ ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ನೆಚ್ಚಿನ ಫೋಟೋ ಮತ್ತು ವೀಡಿಯೊಗಳನ್ನು ಪೋಸ್ಟ್‌ಮಾಡಬಹುದು. ಆದರೆ ಶಾರ್ಟ್‌ ವೀಡಿಯೊಗಳನ್ನು ಮಾತ್ರ ಪೋಸ್ಟ್‌ಮಾಡಲು […]

Advertisement

Wordpress Social Share Plugin powered by Ultimatelysocial