ಕನ್ನಡದ ಕಬೀರ, ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್!

ಬಾಗಲಕೋಟೆ: ಕನ್ನಡದ ಕಬೀರ, ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಇಬ್ರಾಹಿಂ ಸುತಾರ್ ಇಂದು ಮುಂಜಾನೆ 6:30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಹಿಂದೂ ಮುಸ್ಲೀಂ ಭಾವೈಕ್ಯತೆಯ ಪಾಠ ಸಾರಿದ್ದ ಇಬ್ರಾಹಿಂ ಸುತಾರ್, ಪ್ರವಚನಕ್ಕೆ ಹೆಸರಾಗಿದ್ದರಲ್ಲದೇ ಬಸವಣ್ಣನವರ ಅನುಯಾಯಿಯಾಗಿದ್ದರು.1940 ಮೇ 10 ರಂದು ಜನಿಸಿದ್ದ ಇಬ್ರಾಹಿಂ ಸುತಾರ್, ಆರ್ಥಿಕ ಸಂಕಷ್ಟದಿಂದಾಗಿ ಕೇವಲ ಮೂರನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ನೇಕಾರ ವೃತ್ತಿ ಮಾಡುತ್ತಾ, ಕುರಾನ್, ಭಗವದ್ಗೀತೆ ಅಧ್ಯಯ ಮಾಡಿ, ಪ್ರವಚನಗಳನ್ನು ಮಾಡುತ್ತ ಸರ್ವಧರ್ಮ ಸಮಾನತೆ, ಭಾವೈಕ್ಯತೆಯ ಬಗ್ಗೆ ಸಾರುತ್ತಿದ್ದರು. 1995ರಲ್ಲಿ ರಾಜ್ಯ ಸರ್ಕಾರ ಇಬ್ರಾಹಿಂ ಸುತಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದೀಗ ಆಧುನಿಕ ಸೂಫಿ ಸಂತ ಎಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ್ ನಿಧನರಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ್‌ ಸಿಂಗ್‌, ಮಾಜಿ ಶಾಲಾ ಶಿಕ್ಷಕರು. ಕಳೆದ 26 ವರ್ಷಗಳಿಂದ ಧರಣಿ ನಿರತರು!

Sat Feb 5 , 2022
  ಈ ಬಾರಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ಗೆ ಒಬ್ಬರೇ ಸಾಮಾನ್ಯ ಎದುರಾಳಿ ಇದ್ದಾರೆ. ಯಾವುದೇ ರಾಜಕೀಯ ಪಕ್ಷದಿಂದ ಈ ಅಭ್ಯರ್ಥಿ ಕಣಕ್ಕೆ ಇಳಿಯುತ್ತಿಲ್ಲ. ಬದಲಿಗೆ ಸ್ವತಂತ್ರರಾಗಿ ರಣಕಣಕ್ಕೆ ಇಳಿಯುತ್ತಿದ್ದಾರೆ.ಇವರ ಹೆಸರು ವಿಜಯ್‌ ಸಿಂಗ್‌, ಮಾಜಿ ಶಾಲಾ ಶಿಕ್ಷಕರು. ಕಳೆದ 26 ವರ್ಷಗಳಿಂದ ಧರಣಿ ನಿರತರು!ಹೌದು, ಮುಜಾಫ್ಫರ್ ‌ನಗರದಲ್ಲಿ ಭೂಕಬಳಿಕ ಮಾಫಿಯಾ ಬಹಳ ದೊಡ್ಡದಾಗಿದೆ. ಇದು ಜನಸಾಮಾನ್ಯರ ಜೀವನ ಹಾಳು […]

Advertisement

Wordpress Social Share Plugin powered by Ultimatelysocial