ಕೀಲುನೋವಿನ ಸಮಸ್ಯೆ ಇದ್ದರೆ ತುಂಬಾನೇ ಹಿಂಸೆ ಅನಿಸುವುದು,

ಕೀಲುನೋವಿನ ಸಮಸ್ಯೆ ಇದ್ದರೆ ತುಂಬಾನೇ ಹಿಂಸೆ ಅನಿಸುವುದು, ಕೆಲವೊಮ್ಮೆ ಎಷ್ಟು ಮದ್ದು ಮಾಡಿದರೂ ಕಡಿಮೆಯಾಗಲ್ಲ, ಇನ್ನು ಸಂಧಿವಾತದ ಸಮಸ್ಯೆ ಇದ್ದರಂತೂ ತುಂಬಾನೇ ಕಷ್ಟ, ಓಡಾಡಲು ಕಷ್ಟವಾಗುವುದು.

ಕೀಲುನೋವು, ಸಂಧಿವಾತದ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಅನೇಕ ಮದ್ದುಗಳಿವೆ, ಪರಿಣಾಮಕಾರಿಯಾದ ಆ ಮದ್ದುಗಳಾವುವು ಎಂದು ನೋಡೋಣ ಬನ್ನಿ:

ಕೀಲುನೋವು, ಉರಿಯೂತದ ಸಮಸ್ಯೆಗೆ ಆಯುರ್ವೇದದಲ್ಲಿದೆ ರಾಮಬಾಣ..!

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತಿನಂತೆ ನಮ್ಮ ಮನೆಯಲ್ಲೇ ಔಷಧಿ ಇಟ್ಟುಕೊಂಡು ಕೀಲುನೋವು, ಉರಿಯೂತದ ಉಪಷಮನಕ್ಕಾಗಿ ನಾವು ಊರೆಲ್ಲಾ ಮದ್ದು ಹುಡುಕಿದ್ದಾಯ್ತು. ಆದ್ರೆ ಇನ್ಮುಂದೆ ಚಿಂತೆ ಬೇಡ ನಾವು ಹೇಳೋ ಈ ಮನೆ ಮದ್ದುಗಳನ್ನು ಸರಿಯಾಗಿ ಉಪಯೋಗಿಸಿದರೆ ನಿಮ್ಮ ಸಮಸ್ಯೆಗೆ ಉತ್ತಮ ಪರಿಹಾರ ಸಿಗಲಿದೆ.

1. ಅಮೃತಬಳ್ಳಿ : ರಕ್ತದಲ್ಲಿರುವ ಯೂರಿಕ್ ಆಮ್ಲದ ನಿವಾರಣೆಗೆ ಅಮೃತಬಳ್ಳಿ ತುಂಬಾನೇ ಉಪಯುಕ್ತವಾಗಿದೆ. ಅಮೃತಬಳ್ಳಿಯನ್ನು ಉಪಯೋಗಿಸುವುದರಿಂದ ಪಿತ್ತ, ವಾತದ ಸಮಸ್ಯೆ ಕೂಡ ಪರಿಹಾರವಾಗಲಿದೆ. ಇದರ ಜೊತೆಗೆ ಕೀಲುನೋವಿನ ಸಮಸ್ಯೆಗೆ ಸುಲಭ ಪರಿಹಾರ ದೊರಯಲಿದೆ.

2. ಭದ್ರಮುಷ್ಠಿ ಸಸ್ಯ  : ಇದು ಕೂಡ ಕೀಲು ನೋವಿನ ಸಮಸ್ಯೆ ಮತ್ತೊಂದು ರಾಮಬಾಣ ಔಷಧಿ. ಭದ್ರಮುಷ್ಠಿ ಸಸ್ಯದ ಒರಟಾದ ಬೇರಿನ ಪುಡಿಯನ್ನು ತೆಗೆದುಕೊಂಡು ಅದನ್ನುರಾತ್ರಿಯಿಡೀ ನೀರಿನಲ್ಲಿ ನೆನೆಸಿ ಆನಂತರ ಚೆನ್ನಾಗಿ ಕುದಿಸಿ ಸೋಸಿದ ನಂತರ ಕುಡಿಯಬೇಕು.

3. ಸಲಕ್ಕಿ : ಸಲಕ್ಕಿಯೂ ಕೂಡ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಸಿಗುವ ಮನೆಮದ್ದಾಗಿದೆ. ಇದನ್ನು ಸೇವಿಸುವುದರಿಂದ ಕೀಲುನೋವು ಹಾಗೂ ಸಂಧಿವಾತದ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಒಂದು ವೇಳೆ ಸಲಕ್ಕಿ ನಿಮ್ಮ ಊರುಗಳಲ್ಲಿ ಲಭ್ಯವಾಗದೇ ಇದ್ದರೆ ಆನ್‌ಲೈನ್‌ನಲ್ಲಿ ಮೂಲಕ ಆರ್ಡರ್ ಮಾಡಬಹುದು.

4. ಲಕ್ಕಿಗಿಡ (: ಲಕ್ಕಿಗಿಡದ ಎಲೆಯು ಹೆಚ್ಚಿನ ಆಲ್ಕಾಲಾಯಿಡ್ ಅಂಶ ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ವಾತ ಹಾಗೂ ಕೀಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದಿಷ್ಟೇ ಅಲ್ಲ, ಲಕ್ಕಿಗಿಡದ ಔಷಧಿ ಸೇವಿಸುವುದರಿಂದ ಕಫಾ, ವಾತಾ, ಪಿತ್ತದಂತಹ ತ್ರಿದೋಷ ಸಮಸ್ಯೆಗೂ ಪರಿಹಾರ ದೊರೆಯಲಿದೆ.

5. ಬೇವಿನ ಎಲೆ: ಪ್ರತಿನಿತ್ಯ ನಾಲ್ಕೈದು ಬೇವಿನ ಎಲೆ ಸೇವಿಸುವುದರಿಂದ ರೋಗ ದೂರ ಎಂಬ ಮಾತಿದೆ. ಅದೇ ರೀತಿ ಬೇವಿನ ಎಲೆಯ ಪೇಸ್ಟ್ ತಯಾರಿಸಿ ನೋವಿರುವ ಜಾಗಕ್ಕೆ ಹಚ್ಚಿದರೆ ಸಾಕು. ಬೇವಿನಲ್ಲಿ ಉರಿಯೂತವನ್ನು ಹೋಗಲಾಡಿಸುವ ಗುಣಗಳು ಇವೆ. ಇನ್ನೂ ಇದನ್ನು ಎಣ್ಣೆ ತಯಾರಿಸಿ ಕೂಡ ಹಚ್ಚಿಕೊಳ್ಳಬಹುದು ಮತ್ತು ಬೇವಿನಾಂಶವಿರುವ ಮಾತ್ರೆಯನ್ನು ಸೇವಿಸಬಹುದು.

6. ಹಾಗಲಕಾಯಿ : ಹಾಗಲಕಾಯಿಯನ್ನ ಕಂಡರೆ ಇಷ್ಟ ಪಡುವವರಿಗಿಂತ ಹಾಗಲಕಾಯಿಯನ್ನ ಕಂಡರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಇದು ಉತ್ತಮವಾದ ಔಷಧೀಯ ಗುಣ ಹೋಂದಿರುವ ಏಕೈಕ ತರಕಾರಿ. ಅದರಲ್ಲೂ ಮುಖ್ಯವಾಗಿ ವಾತಾ ಸಮಸ್ಯೆಯನ್ನು ಪರಿಹರಿಸಲು ಇದನ್ನು ಔಷಧಯಾಗಿ ಬಳಕೆ ಮಾಡಲಾಗುತ್ತದೆ. ಮತ್ತು ಕೀಲುನೋವನ್ನು ಪರಿಹರಿಸುತ್ತದೆ ಎಂದು ಆಯುರ್ವೇದದಲ್ಲಿ ನಂಬಲಾಗಿದೆ.

7. ಕಪ್ಪು ಒಣದ್ರಾಕ್ಷಿ : ಕಪ್ಪು ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಇದು ನಮ್ಮ ಮೂಳೆಯ ಸಾಂಧ್ರತೆಯನ್ನು ಹೆಚ್ಚು ಮಾಡುತ್ತದೆ ಹಾಗೇ ಸಂಧಿವಾತವನ್ನು ನಿವಾರಣೆ ಮಾಡುತ್ತದೆ. ರಾತ್ರಿ ಮಲಗೋವಾಗ ಹತ್ತರಿಂದ 15 ಕಪ್ಪು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ ಮತ್ತು ಬೆಳಗ್ಗೆ ಎದ್ದು ಅದರ ನೀರನ್ನು ಕುಡಿದು ದ್ರಾಕ್ಷಿಯನ್ನ ಜಗಿದು ತಿಂದರೆ ಉತ್ತಮ. ಇದೇ ದಿನಚರಿಯನ್ನು ಪ್ರತಿನಿತ್ಯ ಪಾಲನೆ ಮಾಡಬೇಕು.

8. ಶುಂಠಿ ಮತ್ತು ಬೆಳ್ಳುಳ್ಳಿ : ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ತಯಾರಿಸಿ ನೋವಿರುವ ಕೀಲುಗಳಿಗೆ ಹಚ್ಚಬೇಕು. ಈ ಮನೆಮದ್ದು ಕೂಡ ಪರಿಣಾಮಕಾರಿ ನೋವು ನಿವಾರಕವಾಗುತ್ತದೆ.

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಎಲ್ಲದಕ್ಕಿಂತಲೂ ಮೊದಲು ನಾವು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ದೇಹದಲ್ಲಿ ಯಾವುದೇ ತರಹದ ಸಮಸ್ಯೆಗಳು ಎದುರಾದಾಗ ಮೊದಲು ನಾವು ಇಂಗ್ಲೀಷ್ ಮದ್ದಿನ ಮೊರೆ ಹೋಗುವುದನ್ನು ಬಿಟ್ಟು ನಮ್ಮ ಮನೆಯಲ್ಲೇ, ನಮ್ಮ ಹಿತ್ತಲಲ್ಲೇ ದೊರಕುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು.

Sat Feb 4 , 2023
ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು 1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ, 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ.ಎಲ್‌. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ, ಪ್ರೊ. ಜಿ.ಎಸ್‌. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ […]

Advertisement

Wordpress Social Share Plugin powered by Ultimatelysocial