ಆರ್ಥೋಪೆಡಿಕ್ಸ್‌ ಪರೀಕ್ಷೆಗೆ ಹಾಜರಾದವರ ಪೈಕಿ ಪಾಸಾದವರು ಶೇ.18 ಮಾತ್ರ..!

ಆಥೋಪೆಡಿಕ್ಸ್‌ ವಿಷಯದಲ್ಲಿ ಪಿಜಿ ಮಾಡುತ್ತಿರುವ ವೈದ್ಯರಲ್ಲಿ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮಂದಿ ಮಾತ್ರವೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಹಮ್ಮಿಕೊಳ್ಳುವ ಅಂತಿಮ ಪರೀಕ್ಷೆಯ ಥಿಯರಿ ವಿಭಾಗದಲ್ಲಿ ಪಾಸ್ ಆಗುತ್ತಿದ್ದಾರೆ.

ಇನಿ‌ಟಿಯಲ್ಲಿ ಬಹುತೇಕ ಮೂರರಲ್ಲಿ ಇಬ್ಬರು ಫೇಲ್ ಆಗುತ್ತಿದ್ದಾರೆ.ಇದೇ ರೀತಿ, ಪೇಡಿಯಾಟ್ರಿಕ್ಸ್ ವಿಷಯದಲ್ಲಿ ಬರೀ 36% ಮಂದಿ ಮಾತ್ರವೇ ಪಾಸ್ ಆಗಿದ್ದಾರೆ. ನವೆಂಬರ್‌ 24ರಂದು ಎನ್‌ಬಿಇ ಘೋಷಣೆ ಮಾಡಿದ ಫಲಿತಾಂಶ ಕಂಡು ರಾಷ್ಟ್ರೀಯ ಮಂಡಳಿಯ ಡಿಪ್ಲೋಮೇಟ್ (ಡಿಎನ್‌ಬಿ) ಮಾಡುತ್ತಿರುವ ವೈದ್ಯರು ಶಾಕ್ ಆಗಿದ್ದಾರೆ.

ಖಾಸಗಿ ಆಸ್ಪತ್ರೆಗಳು ಮತ್ತು ಎನ್‌ಬಿಇ ಆಡಳಿತದ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು ನಡೆಸುವ ಎಂಡಿ/ಎಂಎಸ್‌ ತತ್ಸಮಾನ ಕೋರ್ಸ್ ಡಿಎನ್‌ಬಿ ಆಗಿದೆ.ಕೋವಿಡ್ ಅವಧಿಯಲ್ಲಿ ಉಂಟಾದ ಅಡಚಣೆಗಳನ್ನು ಪರಿಗಣಿಸಿ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರಿಗೆ ಖಾತ್ರಿ ನೀಡಲಾಗಿದ್ದರೂ ಸಹ ಪರೀಕ್ಷಾ ಪತ್ರಿಕೆಗಳು ವಿಪರೀತ ಕಠಿಣವಿದ್ದದ್ದಲ್ಲದೇ ಮೌಲ್ಯಮಾಪನವನ್ನೂ ಭಾರೀ ಕಠಿಣವಾಗಿ ನಡೆಸಲಾಗಿದೆ ಎಂದು ವೈದ್ಯರು ಆಪಾದಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಖತ್ ಟೇಸ್ಟ್ ಕೊಡುವ ಮಸಾಲಾ ಚಿಕನ್ ಲೆಗ್

Mon Dec 20 , 2021
 ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಮಸಾಲಾ ಚಿಕನ್ ಲೆಗ್ನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಚಿಕನ್ ಪ್ರಿಯರಿಗೆ ಇನ್ನಷ್ಟು ರುಚಿಕರವಾದ ಮತ್ತು ಬಾಯಲ್ಲಿ ನೀರೊರೆಸುವ ಈ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲೇ ಹೋಟೆಲ್ ಶೈಲಿಯ ರುಚಿ ಕೊಡುತ್ತದೆ ಈ ವಿಧಾನ ಟ್ರೈ ಮಾಡಿ ಬೇಕಾಗುವ ಸಾಮಗ್ರಿಗಳು * ಚಿಕನ್ ಲೆಗ್ಸ್ – 4 […]

Advertisement

Wordpress Social Share Plugin powered by Ultimatelysocial