ಪ್ರೇಮಿಗಳ ಕುಟುಂಬಸ್ಥರ ಕಲಹ, ಬಿಡಿಸೋಕೆ ಬಂದವನ ಕೊಲೆಯಲ್ಲಿ ಅಂತ್ಯ.

 

ಆದಿ ಅನಾದಿ ಕಾಲದಿಂದ ಪ್ರೀತಿಗಾಗಿ ಪ್ರೇಮಿಗಳು ಬಲಿಯಾಗಿರುವುದು ನಾವೆಲ್ಲ ಕೇಳಿರುವ ವಿಷಯ. ಆದ್ರೆ ಪ್ರೇಮ ವಿಷಯಕ್ಕೆ ಪ್ರಾರಂಭವಾದ ಕಲಹ ಮೂರನೇ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. ಪ್ರೇಮಿಗಳ ಕುಟುಂಬಸ್ಥರ ಕಲಹ, ಜಗಳ ಬಿಡಿಸೋಕೆ ಬಂದ ವ್ಯಕ್ತಿಯನ್ನು ಬಲಿ ಪಡೆದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ ಮನೆ ಬಿಟ್ಟು ಓಡಿಹೋದ್ರು ಯುವ ಪ್ರೇಮಿಗಳು ಪ್ರೀತಿ ನಿರಾಕರಿಸಿ ಕಲಹಕ್ಕೆ ಇಳಿದ ಎರಡೂ ಕುಟುಂಬಸ್ಥರುಸಂಧಾನಕ್ಕೆ ಬಂದವನ ಸಂಹಾರದಲ್ಲಿ ಅಂತ್ಯವಾಯ್ತು ಪ್ರೇಮ ಕಲಹ ಒಂದೆಡೆ ಗಂಡನನ್ನು ಕಳೆದಿಕೊಂಡ ಮಹಿಳೆಯ ಗೋಳಾಟ. ಇದೇನಪ್ಪಾ ಹೀಗಾಗೋಯ್ತು ಅಂತಾ ತಲೆ‌ ಮೇಲೆ ಕೈ ಹೊತ್ತು ಕುಳಿತಿರುವ ಗ್ರಾಮಸ್ಥರು ಒಂದೆಡೆಯಾದ್ರೆ,ಜಗಳ ಬಿಡಿಸೋಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮತ್ತೊಂದೆಡೆ. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ,ಯ ಗೊಲ್ಲರಹಟ್ಟಿ ಗ್ರಾಮದಲ್ಲಿ.ಇಷ್ಟಕ್ಕೂ ಇಲ್ಲಿ ನಡೆದ್ದಾದ್ರೂ ಏನು ಅಂತೀರಾಗೊಲ್ಲರಹಟ್ಟಿಯ ಬೊಮ್ಮಯ್ಯ ಹಾಗೂ ನಿಂಗಮ್ಮ ದಂಪತಿಗಳ ಮಗನಾದ ಸಿದ್ದೇಶ ಹಾಗೂ ಅದೇ ಗ್ರಾಮದ ಕಲಕತಿಪ್ಪಯ್ಯ ಹಾಗೂ ಸುಶೀಲಮ್ಮ ದಂಪತಿಗಳ ಮಗಳಾದ ಬೋರಮ್ಮ ಪರಸ್ಪರ ಪ್ರೀತಿ ಮಾಡ್ತಿದ್ರು. ಆದ್ರೆ ಇದು ಮನೆಯವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಇಬ್ಬರೂ ಪ್ರೇಮಿಗಳು ಮದುವೆಯಾಗೋಕೆ ಅಂತಾ ಮನೆ ಬಿಟ್ಟು ಓಡಿ ಹೋಗಿದ್ರು. ಈ ವಿಷಯ ತಿಳಿದ ಎರಡೂ ಕುಟುಂಬದವರು ಕಲಹಕ್ಕೆ ಇಳಿದ್ರು. ಈ ವೇಳೆ ಪಕ್ಕದ ಮನೆಯ ಬೊಮ್ಮಲಿಂಗಯ್ಯ ಎಂಬವರು ಆದದ್ದು ಆಗಿ ಹೋಯ್ತು. ಈ ಜಗಳವನ್ನು ಇತ್ಯರ್ಥ ಮಾಡೋಣ ಅಂತಾ ಎರಡೂ ಕುಟುಂಬಗಳಿಗೆ ತಿಳಿ ಹೇಳಿ ಜಗಳ ಬಗೆಹರಿಸಿದ್ರು. ಇದಾದ ಅರ್ಧ ಗಂಟೆ ನಂತರ ಕಲಕತಿಪ್ಪಯ್ಯ ಕುಟುಂಬಸ್ಥರು ಬಂದು ಏಕಾಏಕಿ ಸಿದ್ದೇಶ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ರು. ಇದನ್ನು ಬಿಡಿಸೋಕೆ ಮುಂದಾದ ಬೊಮ್ಮಲಿಂಗಯ್ಯ ಮೇಲೆ ಮಾರಣಾಂತಿಕ ಹಲ್ಲೆ‌ಮಾಡಿದ್ರು. ಈ ವೇಳೆ ಪೆಟ್ಟು ತಿಂದ ಬೊಮ್ಮಲಿಂಗಯ್ಯ ಸಾವನ್ನಪ್ಪಿದ್ದಾರೆ ಅಂತಾ ಬೊಮ್ಮಲಿಂಗಯ್ಯ ಸಂಬಂಧಿಗಳ ಆರೋಪ..ಪಾಪಣ್ಣ ಮೃತರ ಸಂಬಂಧಿ ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಸ್.ಪಿ ಕೆ. ಪರಶುರಾಮ್ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪಾಪಣ್ಣ ಎಂಬುವರು ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆಯ ನಂತರವಷ್ಟೇ ಹೆಚ್ಚಿನ‌ ಮಾಹಿತಿ ತಿಳಿಯಲಿದೆ. ಎಸ್ಪಿ ಕೆ. ಪರಶುರಾಮ್ಒಟ್ಟಾರೆ ಸುಖಾಂತ್ಯವನ್ನು ಕಾಣಬೇಕಿದ್ದ ಪ್ರೇಮ ಕಥೆ ಈಗ ಒಂದು ಕುಟುಂಬವನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಪ್ರೇಮಿಗಳ ಕುಟುಂಬದ ಜಗಳ ಬಿಡಿಸೋಕೆ ಬಂದವರ ಪ್ರಾಣ ತೆಗೆದದ್ದು ಮಾತ್ರ ದುರಂತವೇ ಸರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವ ಯಾವ ವಾಹನಗಳಿಗೆ ಎಷ್ಟೇಷ್ಟು ಟೋಲ್ ಶುಲ್ಕ ಕಟ್ಟಬೇಕು,

Thu Mar 2 , 2023
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಅಧಿಕೃತ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಯಾವ ವಾಹನಗಳಿಂದ ಎಷ್ಟೇಷ್ಟು? ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.ಒಟ್ಟು 8,172 ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ 117ಕಿಲೋ ಮೀಟರ್ ನಿರ್ಮಾಣವಾಗಿದೆ. ಈ ಎರಡು ನಗರದ ಜನತೆಗೆ ಇದರಿಂದ ಭಾರೀ ಅನುಕೂಲವಾಗಲಿದೆ. ಸಮಯ ಉಳಿತಾಯವಾಗಲಿದ್ದು, ಕೆಲವೇ ಗಂಟೆಗಳಲ್ಲಿ ಪರಸ್ಪರ ನಗರವನ್ನು ಸಂಪರ್ಕಿಸಬಹುದಾಗಿದೆ. ಈ ಮಾರ್ಗದಲ್ಲಿ ಟೋಲ್ ಶುಲ್ಕದ ಸಂಗ್ರಹದ ಆರಂಭ […]

Advertisement

Wordpress Social Share Plugin powered by Ultimatelysocial