ಶಿವಸೇನೆ ಪುಂಡಾಟಿಕೆ ಹತ್ತಿಕ್ಕುವ ಸಲುವಾಗಿ ಹೆಚ್.ಶಿವರಾಮೇಗೌಡರ ಕರವೇ ತೀವ್ರ ವಿರೋಧ

ನಾಡದ್ರೋಹಿ ಎಂ ಇ ಎಸ್ ಸಂಘಟನೆಯನ್ನು ನಿಷೇಧಿಸುವ ಕುರಿತು ಹಾಗೂ ಶಿವಸೇನೆ ಪುಂಡಾಟಿಕೆ ಹತ್ತಿಕ್ಕುವ ಸಲುವಾಗಿ ಹೆಚ್.ಶಿವರಾಮೇಗೌಡರ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ಮನವಿಪತ್ರ ಸಲ್ಲಿಸಲಾಯಿತು.ಬಾಗಲಕೋಟೆ ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾ ಘಟಕದಿಂದ ಎಂಇಎಸ್ ಭೂತದಹನ ಹಾಗೂ ಶಿವಸೇನೆ ಪುಂಡಾಟಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದು,ಕಳೆದ ಎರಡ್ಮೂರು ದಿನಗಳ ಹಿಂದೆ ಶಿವಸೇನೆ ಪುಂಡರಿಂದ ನಮ್ಮ ಕರುನಾಡಿನ ಹರಿಸಿನ ಮತ್ತು ಕೆಂಪು ಬಣ್ಣದ ಧ್ವಜವನ್ನು ಸುಟ್ಟು ಹಾಕುವ ಮೂಲಕ ಹಾಗೂ ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಅವಮಾನ ಮಾಡುವ ಉದ್ಧಟತನ ಮೆರೆದಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯ ಪುಂಡರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಬೇಕು.ಆದಷ್ಟು ಬೇಗ ಇಂತಹ ನಾಡದ್ರೋಹಿ ಹಾಗೂ ದೇಶದ್ರೋಹಿಗಳಿಗೆ ಶಿಕ್ಷಿಸಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ನಮ್ಮ ಈ ಮನವಿಗೆ ಆದಷ್ಟು ಬೇಗ ರಾಜ್ಯ ಸರಕಾರದವರು ಸ್ಪಂದಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಕೇಳಿ ಕೊಳ್ಳುತ್ತಿದ್ದೇವೆ ಇಲ್ಲದಿದ್ದ ಪಕ್ಷದಲ್ಲಿ ಕರವೇ ಉಗ್ರವಾದ ಹೋರಾಟ ಮಾಡಬೇಕಾಗಿರುವದು ಅನಿವಾರ್ಯ ಅಂತಾ ತಿಳಿಸುತ್ತಾ ಪೊಲೀಸ ಇಲಾಖೆಗೆ ಇಂತಹ ಪುಂಡಪೋಕರಿಗಳನ್ನು ಹತ್ತಿಕ್ಕಲು ಪೂರ್ಣ ಪ್ರಮಾಣದ ಅಧಿಕಾರ ನೀಡಬೇಕೆಂದು ಕರವೇ ಒತ್ತಾಯ ಪಡಿಸಿ ನಂತರ ಜಿಲ್ಲಾಧಿಕಾರಿಯವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮಾರುತಿ ಓಮ್ನಿ ಕಾರು

Mon Dec 20 , 2021
ಬೆಂಗಳೂರು, ಡಿ.20- ಮನೆ ಮುಂದೆ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಭಾಗಶಃ ಹಾನಿಯಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಲೇಔಟ್‍ನ ಜೈ ಮಾರುತಿ ನಗರದ 4ನೆ ಕ್ರಾಸ್ ನಿವಾಸಿಯೊಬ್ಬರು ತಮ್ಮ ಮಾರುತಿ ಓಮ್ನಿ ಕಾರನ್ನು ಚಾಲನೆ ಮಾಡಿಕೊಂಡು ರಾತ್ರಿ 11 ಗಂಟೆ ಸುಮಾರಿನಲ್ಲಿ ಮನೆಗೆ ಬಂದಿದ್ದಾರೆ. ಮನೆ ಮುಂದೆ ಕಾರು ನಿಲ್ಲಿಸಿ ಒಳಗೆ ಹೋದ 10 ನಿಮಿಷದಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು […]

Advertisement

Wordpress Social Share Plugin powered by Ultimatelysocial