ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮಾರುತಿ ಓಮ್ನಿ ಕಾರು

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮಾರುತಿ ಓಮ್ನಿ ಕಾರು

ಬೆಂಗಳೂರು, ಡಿ.20- ಮನೆ ಮುಂದೆ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಭಾಗಶಃ ಹಾನಿಯಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ ಲೇಔಟ್‍ನ ಜೈ ಮಾರುತಿ ನಗರದ 4ನೆ ಕ್ರಾಸ್ ನಿವಾಸಿಯೊಬ್ಬರು ತಮ್ಮ ಮಾರುತಿ ಓಮ್ನಿ ಕಾರನ್ನು ಚಾಲನೆ ಮಾಡಿಕೊಂಡು ರಾತ್ರಿ 11 ಗಂಟೆ ಸುಮಾರಿನಲ್ಲಿ ಮನೆಗೆ ಬಂದಿದ್ದಾರೆ.

ಮನೆ ಮುಂದೆ ಕಾರು ನಿಲ್ಲಿಸಿ ಒಳಗೆ ಹೋದ 10 ನಿಮಿಷದಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ನೆರೆಹೊರೆಯವರು ಗಮನಿಸಿ ತಕ್ಷಣ ಕಾರು ಮಾಲೀಕರಿಗೂ ತಿಳಿಸಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು.

ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಿಲ ಸೋರಿಕೆಯಿಂದಲೋ ಇಲ್ಲವೆ ಬ್ಯಾಟರಿ ಕಿಡಿಯಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರ ಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ರಿಗೇಡ್ ರೋಡ್ ಅಸೋಸಿಯೇಶನ್‍ನಿಂದ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಬ್ರೇಕ್

Mon Dec 20 , 2021
ಬೆಂಗಳೂರು, ಡಿ.20- ಓಮಿಕ್ರಾನ್ ಕಾರಣದಿಂದ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಬ್ರೇಕ್ ಹಾಕಲು ಬ್ರಿಗೇಡ್ ರೋಡ್ ಅಸೋಸಿಯೇಷನ್ ಆಲೋಚಿಸಿದೆ. ಹೊಸ ವರ್ಷದ ವೇಳೆ ಎಂದಿನಂತೆಯೇ ಬ್ರಿಗೇಡ್ ರೋಡ್ ಇರುತ್ತದೆ. ಹೊಸ ವರ್ಷಾಚರಣೆಗೆ ಸರ್ಕಾರ ಅವಕಾಶ ಕೊಟ್ಟರೂ ನಾವು ಸೆಲೆಬ್ರೇಟ್ ಮಾಡುವುದಿಲ್ಲ ಎಂದು ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ಹೊಸ ವರ್ಷಾಚರಣೆ ವೇಳೆ ಪ್ರತಿ ವರ್ಷ ಬ್ರಿಗೇಡ್ ರೋಡ್ ಬಗೆ ಬಗೆಯ ಲೈಟಿಂಗ್‍ಗಳಿಂದ ಕಂಗೊಳಿಸುತ್ತಿತ್ತು. ಆದರೆ ಈ ಬಾರಿ ಯಾವುದೇ ಲೈಟಿಂಗ್ ಅಥವಾ […]

Advertisement

Wordpress Social Share Plugin powered by Ultimatelysocial