ಬಾಲಿವುಡ್‌ನ ಅತ್ಯಂತ ದುಬಾರಿ ಹಾಗೂ ಬೇಡಿಕೆಯ ಸ್ಟಾರ್ ನಟಿ. ದೀಪಿಕಾ

ನಟಿ ದೀಪಿಕಾ ಪಡುಕೋಣೆ, ಬಾಲಿವುಡ್‌ನ ಅತ್ಯಂತ ದುಬಾರಿ ಹಾಗೂ ಬೇಡಿಕೆಯ ಸ್ಟಾರ್ ನಟಿ. ಮಹಿಳಾ ಪ್ರಧಾನ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳು, ರೊಮ್ಯಾಂಟಿಕ್, ಆಕ್ಷನ್ ಎಲ್ಲ ರೀತಿಯ ಸಿನಿಮಾಗಳಿಗೂ ದೀಪಿಕಾ ಪಡುಕೋಣೆ ಮೊದಲ ಆಯ್ಕೆ!

ದೀಪಿಕಾ ಪಡುಕೋಣೆ ಮಾಡುತ್ತಿರುವಷ್ಟು ಭಿನ್ನ-ಭಿನ್ನ ಮಾದರಿಯ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ಇನ್ಯಾವ ನಟಿಯರೂ ಮಾಡುತ್ತಿಲ್ಲ.

ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ, ಇದೀಗ ತೆಲುಗಿನಿಂದಲೂ ಬಹುದೊಡ್ಡ ಆಫರ್ ಅನ್ನು ದೀಪಿಕಾ ದೋಚಿಕೊಂಡಿದ್ದಾರೆ.

ಇದೀಗ ದೀಪಿಕಾ ಪಡುಕೋಣೆ ಬಗ್ಗೆ ಹೊರಬಿದ್ದಿರುವ ಹೊಸ ಸುದ್ದಿಯೆಂದರೆ, ದೀಪಿಕಾ ಪಡುಕೋಣೆ ತಮ್ಮ ಹಳೆಯ ಬಾಯ್‌ಫ್ರೆಂಡ್‌ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರಂತೆ! ಮದುವೆಯಾಗುವ ಮುಂಚೆ ಕೆಲವು ಹುಡುಗರ ಜೊತೆ ಸುತ್ತಾಡಿದ್ದರು ದೀಪಿಕಾ, ಹಾಗಿದ್ದರೆ ಯಾವ ಬಾಯ್‌ಫ್ರೆಂಡ್‌ ಜೊತೆ ದೀಪಿಕಾ ಸಿನಿಮಾ ಮಾಡುತ್ತಿದ್ದಾರೆ?

ಬಾಲಿವುಡ್‌ನಲ್ಲಿ ಬಹುಚರ್ಚಿತ ಪ್ರೇಮಕತೆಗಳೆಂದರೆ ಅದು ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಕಪೂರ್ ಪ್ರೇಮಕತೆ. ಬಹುವಾಗಿ ಚರ್ಚಿತವಾಗಿತ್ತು. ಇಬ್ಬರೂ ಬಾಲಿವುಡ್‌ನ ಸ್ಟಾರ್‌ಗಳ ಪ್ರೇಮಕತೆ ಬಹುವಾಗಿ ಚರ್ಚಿತವಾಗಿತ್ತು. ದೀಪಿಕಾ ಪಡುಕೋಣೆ ಅಂತೂ ತಮ್ಮ ಪ್ರೇಮ ಸಂಬಂಧವನ್ನು ಗಂಭೀರವಾಗಿ ಪರಿಗಣಿಸಿದ್ದರು. ರಣ್ಬೀರ್ ಕಪೂರ್ ಹೆಸರನ್ನು ‘ಆರ್‌ಕೆ’ ಎಂದು ಹಚ್ಚೆ ಸಹ ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರು ಬೇಗನೆ ಬ್ರೇಕ್‌ ಅಪ್ ಸಹ ಮಾಡಿಕೊಂಡರು. ಆದರೆ ಈಗ ಇವರಿಬ್ಬರೂ ಸ್ನೇಹಿತರಾಗಿದ್ದಾರೆ.

‘ಬ್ರಹ್ಮಾಸ್ತ್ರ; ಪಾರ್ಟ್‌ 1’ ನಲ್ಲಿ ಅತಿಥಿ ಪಾತ್ರ
ಇದೀಗ ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. 2013 ರಲ್ಲಿ ತೆರೆ ಕಂಡ ‘ಏ ಜವಾನಿ ಏ ದಿವಾನಿ’ ಸಿನಿಮಾದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ. ಇನ್ನು ಮುಂದೆ ಇವರಿಬ್ಬರು ಒಟ್ಟಿಗೆ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ರಣ್ಬೀರ್ ಕಪೂರ್‌ರ ಹೊಸ ಸಿನಿಮಾ ‘ಬ್ರಹ್ಮಾಸ್ತ್ರ’ದ ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ‘ಬ್ರಹ್ಮಾಸ್ತ್ರ; ಪಾರ್ಟ್‌ 1’ ನಲ್ಲಿ ಅತಿಥಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರಂತೆ.

‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ

‘ಬ್ರಹ್ಮಾಸ್ತ್ರ’ ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಹೇಳಿರುವಂತೆ ತಮ್ಮ ಮುಂದಿನ ಸಿನಿಮಾ ‘ಬ್ರಹ್ಮಾಸ್ತ್ರ’ ಸಿನಿಮಾದ ಪಾತ್ರಗಳ ಆಧಾರದಲ್ಲಿಯೇ ಆಗಲಿವೆಯಂತೆ. ಹಾಗಾಗಿ ದೀಪಿಕಾ ಪಡುಕೋಣೆ ಸಹ ‘ಬ್ರಹ್ಮಾಸ್ತ್ರ’ ಸಿನಿಮಾದ ಭಾಗವಾಗಿರುವ ಕಾರಣ ಮುಂದಿನ ದಿನಗಳಲ್ಲಿ ರಣ್ಬೀರ್ ಕಪೂರ್ ಜೊತೆ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬ್ರಹ್ಮಾಸ್ತ್ರ ಸಿನಿಮಾವು ಸೆಪ್ಟೆಂಬರ್ 9 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ.

ರಣ್ಬೀರ್ ಕಪೂರ್ ಮೋಸ ಮಾಡಿದ ಎಂದಿದ್ದ ದೀಪಿಕಾ

ರಣ್ಬೀರ್ ಕಪೂರ್-ದೀಪಿಕಾ ಪಡುಕೋಣೆ ಪ್ರೇಮಕತೆಯ ಬಗ್ಗೆ ಹೇಳುವುದಾದರೆ ರಣ್ಬೀರ್, ದೀಪಿಕಾರಿಂದ ದೂರಾದ ಬಳಿಕ ದೀಪಿಕಾ ಪಡುಕೋಣೆ ಖಿನ್ನತೆಗೆ ಒಳಗಾಗಿದ್ದರು. ಅವಶ್ಯಕ ಚಿಕಿತ್ಸೆ ಬಳಿಕ ಅವರು ಗುಣವಾದರು. ತಮ್ಮ ಕತ್ತಿನ ಮೇಲೆ ಹಾಕಿಸಿದ್ದ ಆರ್‌ಕೆ ಟ್ಯಾಟೂವನ್ನು ಸಹ ಅಳಿಸಿಹಾಕಿದರು. 2010 ರಲ್ಲಿ ನೀಡಿದ ಸಂದರ್ಶನದಲ್ಲಿ, ರಣ್ಬೀರ್ ಕಪೂರ್ ನನಗೆ ಮೋಸ ಮಾಡಿದ ಎಂದು ಆರೋಪಿಸಿದರು. ಆ ನಂತರದ ಸಂದರ್ಶನವೊಂದರಲ್ಲಿ ರಣ್ಬೀರ್ ಕಪೂರ್ ಅದನ್ನು ಒಪ್ಪಿಕೊಂಡರು ಸಹ.

ದೀಪಿಕಾ ಪಡುಕೋಣೆ ಪ್ರೇಮಕಹಾನಿಗಳು

ಬಹುತೇಕ ಬಾಲಿವುಡ್ ನಟಿಯರಿಗಿರುವಂತೆ ದೀಪಿಕಾ ಪಡುಕೋಣೆಗೂ ಕೆಲವು ಅಫೇರ್‌ಗಳಿದ್ದವು. ಕ್ರಿಕೆಟಿಗರಾದ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಹೆಸರು ಆರಂಭದಲ್ಲಿ ದೀಪಿಕಾ ಜೊತೆ ಕೇಳಿ ಬಂದಿತ್ತು. ಆ ಬಳಿಕ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಜೊತೆಗೂ ದೀಪಿಕಾ ಡೇಟಿಂಗ್ ಮಾಡಿದರು. ಐಪಿಎಲ್ ಕ್ರಿಕೆಟ್ ಮ್ಯಾಚ್‌ನ ವೇಳೆ ಸಿದ್ಧಾರ್ಥ್‌ ಮಲ್ಯ, ದೀಪಿಕಾಗೆ ಚುಂಬಿಸಿದ್ದು ಸುದ್ದಿಯಾಗಿತ್ತು. ನಿಹಾರ್ ಪಾಂಡ್ಯಾ ಹೆಸರಿನ ಮಾಡೆಲ್ ಹಾಗೂ ಬ್ಯುಸಿನೆಸ್ ಮ್ಯಾನ್ ಜೊತೆಗೂ ಡೇಟಿಂಗ್ ನಡೆಸಿದ್ದರು ದೀಪಿಕಾ ಪಡುಕೋಣೆ. ಆ ಬಳಿಕ ರಣ್ವೀರ್ ಸಿಂಗ್ ಅನ್ನು ಪ್ರೀತಿಸಿ ವಿವಾಹವಾಗಿ ಈಗ ಆರಾಮವಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ನಟಿ ಸೋನಮ್ ಸೀಮಂತ ಕ್ಯಾನ್ಸಲ್..!

Tue Jul 19 , 2022
  ಬಾಲಿವುಡ್ ನಟಿ ಸೋನಮ್ ಕಪೂರ್ ತಾಯ್ತನದ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಮುಂಬೈನಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಪೂರ್ ಕುಟುಂಬದದಿಂದ ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಸೋನಮ್ ಕಪೂರ್ ಸೀಮಂತ ಕಾರ್ಯವನ್ನು ಮುಂಬೈನಲ್ಲಿ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಇದೀಗ ರದ್ದಾಗಿದೆ. `ಸಾವರಿಯಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಚೆಲುವೆ ಸೋನಮ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. ಸ್ಟಾರ್ ನಟ ಅನಿಲ್ ಕಪೂರ್ ಅವರ ಮಗಳಾಗಿರುವ ಸೋನಮ್, […]

Advertisement

Wordpress Social Share Plugin powered by Ultimatelysocial