ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಮ್ಮ ಬ್ಯಾಟಿಂಗ್‌ನಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ.

ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಮ್ಮ ಬ್ಯಾಟಿಂಗ್‌ನಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು. ಶುಭ್ಮನ್ ಗಿಲ್ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಶುಭಮನ್ ಗಿಲ್ ಅವರಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಈ ಸಾಧನೆ ಮಾಡಿದ್ದಾರೆ.

ಈ ಸಾಧನೆ ಮಾಡಿದ ಬೆನ್ನಲ್ಲೇ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಶುಭ್ಮನ್ ಗಿಲ್ ಗೆ ಹೊಸ ಹೆಸರಿಟ್ಟಿದ್ದಾರೆ. ಇನ್ನು ಆಗಾಗ್ಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಕಾಮೆಂಟರಿ ಸಮಯದಲ್ಲಿ ಹೊಗಳುವುದನ್ನು ನೀವು ಕೇಳಿರಬಹುದು

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಶುಭಮನ್ ಗಿಲ್‌ಗೆ ಹೊಸ ಹೆಸರನ್ನು ನೀಡಿದರು. ಸುನಿಲ್ ಗವಾಸ್ಕರ್ ಅವರು ಹೈದರಾಬಾದ್ ಏಕದಿನ ಪಂದ್ಯದಲ್ಲಿ ಕಾಮೆಂಟರಿ ಮಾಡುವಾಗ ಶುಭಮನ್ ಗಿಲ್‌ಗೆ ‘ಸ್ಮೂತ್‌ಮ್ಯಾನ್ ಗಿಲ್’ ಎಂಬ ಅಡ್ಡಹೆಸರನ್ನು ನೀಡಿದರು. ಅದೇ ಸಮಯದಲ್ಲಿ, ಹೈದರಾಬಾದ್ ಏಕದಿನ ಪಂದ್ಯದ ನಂತರ, ಸುನಿಲ್ ಗವಾಸ್ಕರ್ “ನಾನು ನಿಮಗೆ ಹೊಸ ಅಡ್ಡಹೆಸರನ್ನು ಇಟ್ಟಿದ್ದೇನೆ. ನೀವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ. ಇದಾದ ನಂತರ ಶುಭ್ಮನ್ ಗಿಲ್ ಮುಖದಲ್ಲಿ ನಗು ಮೂಡಿತು. ಅಲ್ಲದೆ, “ಈ ಹೆಸರು ನನಗೆ ಇಷ್ಟವಾಗಿದೆ” ಎಂದು ಯುವ ಆರಂಭಿಕ ಶುಭ್ಮನ್ ಹೇಳಿದ್ದಾರೆ.

ಹೈದರಾಬಾದ್ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ದಾಖಲೆಯ ದ್ವಿಶತಕ ಸಿಡಿಸಿದ್ದರು. ಶುಭಮನ್ ಗಿಲ್ 149 ಎಸೆತಗಳಲ್ಲಿ 208 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಶುಭಮನ್ ಗಿಲ್ ದೊಡ್ಡ ದಾಖಲೆ ಬರೆದಿದ್ದಾರೆ. ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಭಮನ್ 23 ವರ್ಷ 132 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಶಾನ್ ಕಿಶನ್ ಹೆಸರಿನಲ್ಲಿತ್ತು. ಅವರು 24 ವರ್ಷ ಮತ್ತು 145 ದಿನಗಳ ವಯಸ್ಸಿನಲ್ಲಿ ಬಾಂಗ್ಲಾದೇಶ ವಿರುದ್ಧ ODI ನಲ್ಲಿ ದ್ವಿಶತಕ ಗಳಿಸಿದರು. ಈ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಹೆಸರು ಮೂರನೇ ಸ್ಥಾನದಲ್ಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಕ್ಷಕಿಯರ ಜತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನ ವರ್ಗಾವಣೆಗೆ ಆಗ್ರಹ

Fri Feb 10 , 2023
  ದಾವಣಗೆರೆ: ಶಿಕ್ಷಕಿಯರ ಜೊತೆಗೆ ಸರ್ಕಾರಿ ಶಾಲೆ ಶಿಕ್ಷಕ ಅನುಚಿತ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಶಿಕ್ಷಕ ಅಜ್ಗರ್ ಅಲಿ ಖಾನ್ ವರ್ಗಾವಣೆಗೆ ಡಿಡಿಪಿಐ ಭರವಸೆ ನೀಡಿದ ಹಿನ್ನೆಲೆಯಲ್ಲಿ ದೊಡ್ಡಘಟ್ಟ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಅಜ್ಗರ್ ಅಲಿ ಖಾನ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಬಿಇಒ ಅವರಿಂದ ವರದಿ […]

Advertisement

Wordpress Social Share Plugin powered by Ultimatelysocial