ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಹಾಕೋಲ್ಲ!

ಬೆಂಗಳೂರು: ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಅಡ್ಡ ಹಾಕೋಲ್ಲ! ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಚಾಲಕ ಮತ್ತು ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ರಸ್ತೆಗಳ ಬದಲು ಇನ್ಮುಂದೆ ಆರ್​ಟಿಒ ಕಚೇರಿ ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ.ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪರಿಶೀಲನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಹೊಸ ಮಾದರಿ ಅಳವಡಿಕೆಗೆ ಪೊಲೀಸ್​ ಇಲಾಖೆ ತೀರ್ಮಾನಿಸಿದೆ.ಪ್ರತಿ ಆರ್​ಟಿಒ ಕಚೇರಿ ಮುಂದೆ ಎಸ್​ಐ, ಎಎಸ್​ಐ ಹಾಜರಾಗಿ ಡಿಎಲ್​, ಫಿಟ್​ನೆಸ್​ ಸರ್ಟಿಫಿಕೇಟ್​, ವಾಹನ ನೋಂದಣಿ, ಡಿಎಲ್​ ನವೀಕೃತ ಸೇರಿ ಇತರ ಕೆಲಸಕ್ಕೆ ಬರುವ ವಾಹನ ಸವಾರರ ಮತ್ತು ಚಾಲಕರು ಪಾವತಿಸಬೇಕಿರುವ ದಂಡವನ್ನು ವಸೂಲಿ ಮಾಡುವ ಯೋಜನೆ ರೂಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯೂಸ್ ವೀಕ್ಷಣೆಗೆ ಯೋಗ್ಯವಾದ ಮಾಧ್ಯಮ ಯಾವುದು?

Sat Feb 5 , 2022
ಸಾಮನ್ಯವಾಗಿ ನ್ಯೂಸ್‌ಗಳು ಪತ್ರಿಕೆಗಳಿಗೊ ಅಥವ TV ಗಳಿಗೊ ಸೀಮಿತ ಎಂಬುದು ಹಲವರ ನಂಬಿಕೆ, ಸುದ್ದಿ ಮಾಧ್ಯಮವು ವೇಗವಾಗಿ ಬೆಳೆಯುತ್ತಿರುವಂತೆ, ಮಾಧ್ಯಮ ವೇದಿಕೆಗಳು ಕೂಡ ಬೆಳೆದಿವೆ. ಹಿಂದೆ ನಾವು ಪತ್ರಿಕೆಗಳು, ದೂರದರ್ಶನ ಸುದ್ದಿ, ರೇಡಿಯೋ ಸುದ್ದಿ ಮುಂತಾದ ಕೆಲವು ಸುದ್ದಿ ವೇದಿಕೆಗಳನ್ನು ನೋಡುತ್ತಿದ್ದೆವು. ಪ್ರಸ್ತುತ ಸನ್ನಿವೇಶವು ಬದಲಾಗಿದೆ; YouTube, Whatsapp, Google ಇತ್ಯಾದಿಗಳಂತಹ  ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ ಲಭ್ಯವಿದೆ. ವಿಶೇಷವಾಗಿ ಲಾಕ್‌ಡೌನ್‌ಗಳ ಸಮಯದಲ್ಲಿ ಈ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ದೊಡ್ಡ ಬೆಳವಣಿಗೆಯನ್ನು ಕಂಡವು ಮತ್ತು […]

Advertisement

Wordpress Social Share Plugin powered by Ultimatelysocial