ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್​; ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

ಬೆಂಗಳೂರು: ಗಂಡ-ಹೆಂಡತಿಯ ಜಗಳದಲ್ಲಿ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್ ಇನ್​ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್​ಐಆರ್ ದಾಖಲಿಸಿದೆ. ಬೆಂಗಳೂರಿನ ಕೆ.ಆರ್. ಪುರ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಆಗಿದ್ದ ಜಯರಾಜ್​ ಆರೋಪಿ.

ಅಲ್ಲದೆ ಎಎಸ್​ಐ ಶಿವಕುಮಾರ್ ಎಂಬವರ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜು ರಾಜನ್ ಎಂಬವರ ವಿರುದ್ಧ ಆಕೆಯ ಪತ್ನಿ ದೂರು ದಾಖಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿದ್ದ ಸಂಜು ರಾಜನ್ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದರು. ನಂತರ ಪ್ರತಿವಾರ ಠಾಣೆಗೆ ಆಗಮಿಸಿ ಸಹಿ ಮಾಡಲು ಸಂಜು ಅವರಿಂದ ಪೊಲೀಸರು 500ರಿಂದ 10 ಸಾವಿರ ರೂ. ವರೆಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.

ಜಯರಾಜ್​ ಸದ್ಯ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದು, ಶಿವಕುಮಾರ್​ ಕೆ.ಆರ್.ಪುರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಂಚ ಪಡೆದ ಬಗ್ಗೆ ದೂರು ಪಡೆದು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು, ಇನ್​ಸ್ಪೆಕ್ಟರ್​ ವಿರುದ್ಧ ಕ್ರಮಕ್ಕೆ 17ಎ ಅಡಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಇಬ್ಬರ ವಿರುದ್ಧವೂ ಎಫ್​ಐಆರ್ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಾಧು ಕೋಕಿಲಾಗೆ ಸೆಲೆಬ್ರಿಟಿಗಳನ್ನು ಕರೆತರುವ ಜವಾಬ್ದಾರಿ ನೀಡಿದ ಕಾಂಗ್ರೆಸ್

Sun Dec 26 , 2021
ಬೆಂಗಳೂರು: ಜನವರಿ 9ರಿಂದ ಮೇಕೆದಾಟು ಯೋಜನೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಕಾಂಗ್ರೆಸ್ ಕರೆ ನೀಡಿದೆ. ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಕುರಿತ ಪೂರ್ವಭಾವಿ ಸಭೆ ನಡೆಯಲಿದ್ದು, ಅಂತಿಮ ರೂಪುರೇಷೆ ಸಿದ್ಧವಾಗಲಿದೆ. ಮೇಕೆದಾಟು ಪಾದಯಾತ್ರೆಗೆ ಈ ಬಾರಿ ಕನ್ನಡ ಚಿತ್ರರಂಗ ನಟ-ನಟಿಯರು ಕೂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಟ, ಸಂಗೀತ ಸಂಯೋಜಕ ಸಾಧು ಕೋಕಿಲಾ ಅವರಿಗೆ ಪಾದಯಾತ್ರೆಗೆ ಸೆಲೆಬ್ರಿಟಿಗಳನ್ನು ಕರೆತರುವ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿದೆ. 2018ರ ಚುನಾವಣೆಯಲ್ಲಿ […]

Advertisement

Wordpress Social Share Plugin powered by Ultimatelysocial