ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಫೆಬ್ರವರಿ 14ರಿಂದ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಫೆಬ್ರವರಿ 14ರಿಂದ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಈ ಹೊಸ ಮಾರ್ಗಸೂಚಿಯಲ್ಲಿ ಅಪಾಯದಲ್ಲಿರುವ ಹಾಗೂ ಉಳಿದ ದೇಶಗಳ ಗಡಿರೇಖೆಗಳನ್ನು ತೆಗೆದು ಹಾಕಲಾಗಿದೆ.ಹೊಸ ಮಾರ್ಗಸೂಚಿಗಳ ಪ್ರಕಾರ ಈ ಹಿಂದೆ ಕಡ್ಡಾಯಗೊಳಿಸಲಾಗಿದ್ದ 7 ದಿನಗಳ ಹೋಂ ಕ್ವಾರಂಟೈನ್​ಗಳ ಬದಲಾಗಿ 14 ದಿನಗಳ ಸ್ವಯಂ ಮೇಲ್ವಿಚಾರಣೆ ವಿಧಾನವನ್ನು ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ದೇಶಕ್ಕೆ ಆಗಮಿಸಿದವರಿಗೆ ಶಿಫಾರಸು ಮಾಡಲಾಗಿದೆ.ಈ ಸಮಯದಲ್ಲಿ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತವರು ಐಸೋಲೇಟ್​ ಆಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.ಅಂತಾರಾಷ್ಟ್ರೀಯ ಪ್ರಯಾಣದಿಂದ ಆಗಮಿಸಿದವರು ಮೊದಲು ಥರ್ಮಲ್​ ಸ್ಕ್ರೀನಿಂಗ್​​ಗೆ ಒಳಗಾಗುತ್ತಾರೆ. ಈ ಅವಧಿಯಲ್ಲಿ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೆ ಅವರು ವೈದ್ಯಕೀಯ ಸೌಲಭ್ಯದ ಜೊತೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಒಂದು ವೇಳೆ ಪ್ರಯಾಣಿಕರ ಕೋವಿಡ್​ ವರದಿಯು ಪಾಸಿಟಿವ್​ ಬಂದರೆ ಬಳಿಕ ಮಾರ್ಗಸೂಚಿಯ ನಿಯಮದಂತೆ ಅವರ ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತದೆ.ಮಾರ್ಗಸೂಚಿಯ ಪ್ರಕಾರ ಈ ಹಿಂದೆ ಕೆಲವು ದೇಶಗಳಲ್ಲಿ ಅಪಾಯಕಾರಿ ಎಂದು ನೀಡಲಾಗಿದ್ದ ಟ್ಯಾಗ್​ನ್ನು ಇದೀಗ ತೆಗೆದು ಹಾಕಲಾಗಿದೆ. 82 ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಈ ಹಿಂದೆ 72 ಗಂಟೆಗಳ ಅವಧಿಯಲ್ಲಿ ಆರ್​​ಟಿ ಪಿಸಿಆರ್​ ವರದಿಯನ್ನು ತೋರಿಸುವ ಬದಲು ಎರಡು ಡೋಸ್​ ಲಸಿಕೆಗಳನ್ನು ಪಡೆದ ಬಗ್ಗೆ ವರದಿಯನ್ನು ನೀಡಿದರೆ ಸಾಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಹಾರಗಳನ್ನು ಫ್ರೈ ಮಾಡಲು ಎಣ್ಣೆಯನ್ನು ಬಳಸುತ್ತೇವೆ. ಆದರೆ ಈ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ.

Thu Feb 10 , 2022
newup ಆಹಾರಗಳನ್ನು ಫ್ರೈ ಮಾಡಲು ಎಣ್ಣೆಯನ್ನು ಬಳಸುತ್ತೇವೆ.ಆದರೆ ಈ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದಯದ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಈ ಎಣ್ಣೆಯನ್ನು ಎಸೆಯುವ ಬದಲು ಈ ಕೆಲಸಗಳಿಗೆ ಬಳಸಬಹುದು.*ಕಾರಿನ ಮೇಲ್ಮೈಯಲ್ಲಿ ಕೊಳಕು ಇತ್ಯಾದಿಗಳು ಅಂಟಿಕೊಂಡಿದ್ದರೆ ಅದನ್ನು ತೆಗೆದುಹಾಕಲು ಈ ಅಡುಗೆ ಎಣ್ಣೆಯನ್ನು ಬಳಸಿ. ಹಾಗೇ ಅಡುಗೆ ಮನೆ, ನೆಲದ ಮೇಲೆ, ಇತರ ವಸ್ತುಗಳ ಮೇಲೆ ಅಂಟಿಕೊಂಡ ಕೊಳೆಗಳನ್ನು ತೆಗೆಯಲು ಈ ಎಣ್ಣೆ […]

Advertisement

Wordpress Social Share Plugin powered by Ultimatelysocial