ಇಂದಿನ ಹರಾಜಿನಲ್ಲಿ ಇಶಾನ್ ಕಿಶನ್ ಮೇಲೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ!

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೆಲ ಆಟಗಾರರ ಲಕ್ ಖುಲಾಯಿಸಿದೆ. ಇಂದಿನ ಹರಾಜಿನಲ್ಲಿ ಇಶಾನ್ ಕಿಶನ್ ಮೇಲೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ಗೆ ಇಶಾನ್ ಮತ್ತೊಮ್ಮೆ ಮರಳಿದ್ದಾರೆ. ಮುಂಬೈ 15.25 ಕೋಟಿಗೆ ಇಶಾನ್ ಅವರನ್ನು ಖರೀದಿಸಿದೆ.ಇಶಾನ್ ಖರೀದಿಗೆ ಅನೇಕ ತಂಡಗಳು ಆಸಕ್ತಿ ತೋರಿದ್ದವು.ಮುಂಬೈ ಮೊದಲು ಪಂಜಾಬ್, ಗುಜರಾತ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ಬಿಡ್ ಮಾಡಿತ್ತು. ಆದ್ರೆ ಅಂತಿಮವಾಗಿ ಇಶಾನ್, ಮುಂಬೈ ಪಾಲಾದರು.ಇಶಾನ್ ಕಿಶನ್, ವಿಕೆಟ್ ಕೀಪರ್, ಬ್ಯಾಟ್ಸ್ ಮೆನ್. ಐಪಿಎಲ್ ನಲ್ಲಿ ಇಶಾನ್ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿಗೆ ಖರೀದಿ ಮಾಡಿತ್ತು.ಇನ್ನು ಅಂಬಟಿ ರಾಯುಡು ಸಿಎಸ್‌ಕೆಗೆ ಮರಳಿದ್ದಾರೆ. ರಾಯುಡುಗೆ ಸನ್‌ರೈಸರ್ಸ್ ಹೈದರಾಬಾದ್‌ನಿಂದ ತೀವ್ರ ಪೈಪೋಟಿ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ರಾಯುಡು 6.75 ಕೋಟಿಗೆ ಸಿಎಸ್‌ಕೆ ಪಾಲಾಗಿದ್ದಾರೆ.ಅತಿ ಹೆಚ್ಚು ಮೊತ್ತಕ್ಕೆ ಇಂದು ಮಾರಾಟವಾದ ಆಟಗಾರರಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಹರ್ಷಲ್ ಪಟೇಲ್ ಸೇರಿದ್ದಾರೆ. ಅವರನ್ನು ಕ್ರಮವಾಗಿ ಕೆಕೆಆರ್ ಹಾಗೂ ಆರ್ ಸಿ ಬಿ 12.25 ಕೋಟಿ ಹಾಗೂ 10.75 ಕೋಟಿಗೆ ಖರೀದಿ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದ ಆಕ್ರಮಣದ ಭಯದ ನಡುವೆ ಉಕ್ರೇನ್ ರಾಯಭಾರ ಕಚೇರಿ;

Sat Feb 12 , 2022
ಕೈವ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲು ಯುನೈಟೆಡ್ ಸ್ಟೇಟ್ಸ್ ಸಿದ್ಧವಾಗಿದೆ ಪಾಶ್ಚಾತ್ಯ ಗುಪ್ತಚರ ಅಧಿಕಾರಿಗಳು ಉಕ್ರೇನ್ ರಷ್ಯಾದ ಆಕ್ರಮಣ ಎಂದು ಎಚ್ಚರಿಸಿದ್ದಾರೆ ಹೆಚ್ಚೆಚ್ಚು ಸನ್ನಿಹಿತವಾಗಿದೆ. ಯುಎಸ್ ಅಧಿಕಾರಿಗಳು ಹೇಳುವಂತೆ ಸ್ಟೇಟ್ ಡಿಪಾರ್ಟ್ಮೆಂಟ್ ಶನಿವಾರದ ಆರಂಭದಲ್ಲಿ ಕೈವ್ ರಾಯಭಾರ ಕಚೇರಿಯಲ್ಲಿರುವ ಎಲ್ಲಾ ಅಮೇರಿಕನ್ ಸಿಬ್ಬಂದಿಯನ್ನು ರಷ್ಯಾದ ಆಕ್ರಮಣದ ಭಯದಿಂದ ದೇಶವನ್ನು ತೊರೆಯಬೇಕಾಗುತ್ತದೆ ಎಂದು ಘೋಷಿಸಲು ಯೋಜಿಸಿದೆ. ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕೈವ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ ಸಿಬ್ಬಂದಿಯ ಕುಟುಂಬಗಳನ್ನು […]

Advertisement

Wordpress Social Share Plugin powered by Ultimatelysocial