ಐ.ಟಿ., ಬ್ಯಾಂಕಿಂಗ್ ಷೇರು ಗಳಿಕೆ: ಸೆನ್ಸೆಕ್‌ 936 ಅಂಶ ಜಿಗಿತ

ಮುಂಬೈ: ಬ್ಯಾಂಕಿಂಗ್‌ ಮತ್ತು ಐ.ಟಿ. ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸೂಚ್ಯಂಕಗಳು ಏರಿಕೆ ಕಂಡವು. ಕದನ ವಿರಾಮ ಘೋಷಣೆ ಕುರಿತಾಗಿ ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿಂದಾಗಿ ಕಚ್ಚಾ ತೈಲ ದರ ಇಳಿಕೆ ಕಂಡಿದೆ.

ಇದು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 936 ಅಂಶ ಜಿಗಿತ ಕಂಡು 56,486 ಅಂಶಗಳಿಗೆ ತಲುಪಿತು. ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಶೇ 0.31ರಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 241 ಅಂಶ ಹೆಚ್ಚಾಗಿ 16,871 ಅಂಶಗಳಿಗೆ ಏರಿಕೆ ಆಯಿತು.

ಜಾಗತಿಕ ಹೂಡಿಕೆದಾರರು ಬಡ್ಡಿದರ ಏರಿಕೆಯ ನಿರೀಕ್ಷೆಯಲ್ಲಿ ಇದ್ದಾರೆ. ದೇಶದಲ್ಲಿ ಸಗಟು ಹಣದುಬ್ಬರ ಏರಿಕೆ ಆಗಿದ್ದರೂ ಭವಿಷ್ಯದಲ್ಲಿ ಬೆಲೆಗಳು ಕಡಿಮೆ ಆಗಬಹುದು ಎನ್ನುವ ಕಾರಣಕ್ಕಾಗಿ ಮಾರುಕಟ್ಟೆಯು ಆ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚೀನಾದ ಶೆನ್‌ಜೆನ್‌ನಲ್ಲಿ ಲಾಕ್‌ಡೌನ್‌ ಜಾರಿಯಾಗಿದೆ. ಇದರಿಂದಾಗಿ ಹಾಂಗ್‌ಕಾಂಗ್‌ ಮತ್ತು ಶಾಂಘೈ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿವೆ.

ಪೇಟಿಎಂ ಬಂಡವಾಳ ಮೌಲ್ಯ ಇಳಿಕೆ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಹೊಸ ಖಾತೆಗಳನ್ನು ತೆರೆಯದಂತೆ ಆರ್‌ಬಿಐ ನಿರ್ಬಂಧ ಹೇರಿರುವುದರಿಂದಾಗಿ ಪೇಟಿಎಂ ಷೇರು ಮೌಲ್ಯ ಸೋಮವಾರ ಶೇ 13ರಷ್ಟು ಇಳಿಕೆ ಕಂಡಿತು.

ಬಿಎಸ್‌ಇನಲ್ಲಿ ಕಂಪನಿ ಷೇರು ಮೌಲ್ಯ ಶೇ 12.84ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹ 675.84ಕ್ಕೆ ತಲುಪಿತು. ಎನ್‌ಎಸ್‌ಇನಲ್ಲಿ ಶೇ 12.21ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹ 680.40ಕ್ಕೆ ತಲುಪಿತು.

ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 6,429.92 ಕೋಟಿಯಷ್ಟು ಕರಗಿದೆ. ಇದರಿಂದಾಗಿ ಕಂಪನಿಯ ಒಟ್ಟಾರೆ ಬಂಡವಾಳ ಮೌಲ್ಯ ₹ 43,798 ಕೋಟಿಗೆ ಇಳಿಕೆ ಕಂಡಿದೆ.

ಕಚ್ಚಾತೈಲ ದರ ಇಳಿಕೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲ ದರವು ಶೇ 2.97ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 109.3 ಡಾಲರ್‌ಗಳಿಗೆ ತಲುಪಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಬಳಿ ರೆಕಾರ್ಡಿಂಗ್ಸ್​ ಇವೆ.ಟಾಲಿವುಟ್​ ನಟಿ, ನಿರೂಪಕಿ ರಶ್ಮಿ ವಿರುದ್ಧ ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ..!

Tue Mar 15 , 2022
ಹೈದರಾಬಾದ್​: ನಟಿ ಹಾಗೂ ನಿರೂಪಕಿ ರಶ್ಮಿ ಗೌತಮ್​ ಟಾಲಿವುಡ್​ನಲ್ಲಿ ಪ್ರಖ್ಯಾತರು. ಇವರ ಹೆಸರಿನಲ್ಲಿ ಅಭಿಮಾನಿ ಬಳಗವೇ ಇದೆ. ಮೊದಲು ನಾಯಕಿಯಾಗಿ ಸಿನಿಮಾಗೆ ಎಂಟ್ರಿ ಕೊಟ್ಟ ರಶ್ಮಿ, ಅಲ್ಲಿ ಸರಿಯಾದ ಯಶಸ್ಸು ಸಿಗದಿದ್ದಕ್ಕೆ ಕಿರುತೆರೆಯಲ್ಲಿ ನಿರೂಪಕಿಯಾಗಿ ಎರಡನೇ ಇನ್ನಿಂಗ್ಸ್​ ಆರಂಭಿಸಿದರು. ಆ ಬಳಿಕವಷ್ಟೇ ರಶ್ಮಿ ಒಳ್ಳೆಯ ಖ್ಯಾತಿ ಗಳಿಸಿದರು. ಇದರ ನಡುವೆ ರಶ್ಮಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಹಿರಿಯ ನಿರ್ಮಾಪಕ ಬಾಲಾಜಿ ನಾಗಲಿಂಗಂ​ ಅವರು ರಶ್ಮಿ ವಿರುದ್ಧ ಶಾಕಿಂಗ್​ ಕಾಮೆಂಟ್​ ಮಾಡಿದ್ದಾರೆ. ನಾಗಲಿಂಗಂ […]

Advertisement

Wordpress Social Share Plugin powered by Ultimatelysocial