ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ?

ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ-ಮಜ್ಜಿಗೆಯ ಹೊಂದಾಣಿಕೆ ದೇಹಕ್ಕೆ ತಂಪು ನೀಡುತ್ತದೆ. ಬೆಲ್ಲದೊಂದಿಗೆ ಚೂರು ನೀರು ಬೆರೆಸಿ, ಲಿಂಬೆರಸ
ಸೇರಿಸಿ, ಪಾನಕ ಮಾಡಿ ಸೇವಿಸುವುದೂ ಇದೆ. ಇನ್ನು, ಸಾಂಬಾರಿಗೂ ಸ್ವಲ್ಪ ಬೆಲ್ಲ, ಪಲ್ಯಕ್ಕೂ ಬೆಲ್ಲ ಸೇರಿಸುವ ಅಭ್ಯಾಸವಂತೂ ಹಲವೆಡೆ ಇದೆ. ಇದೆಲ್ಲ ಸುಮ್ಮನೆ ಬಾಯಿರುಚಿಗಲ್ಲ.

ಪಚನಶಕ್ತಿ
ಬೆಲ್ಲದಿಂದ ಪಚನಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಬೆಲ್ಲದಿಂದ ಮಲಬದ್ಧತೆಯೂ ದೂರವಾಗುತ್ತದೆ. ಪಚನಗೊಳಿಸುವ ಪ್ರಕ್ರಿಯೆಗೆ ಪುರಕವಾಗಿರುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುತ್ತದೆ. ಹೀಗಾಗಿ, ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಇಮ್ಯೂನಿಟಿ
ನೀವು ಎಂಥದ್ದೇ ಕಷಾಯ ಮಾಡಿ. ಅದಕ್ಕೆ ಬೆಲ್ಲ ಸೇರಿಸಿಕೊಳ್ಳದೆ ರುಚಿ ಬರುವುದಿಲ್ಲ. ಅಷ್ಟಕ್ಕೂ ಬೆಲ್ಲ ಸೇರಿಸುವುದು ರುಚಿಗೆ ಮಾತ್ರವೇ ಅಲ್ಲ. ಬೆಲ್ಲದಲ್ಲಿ ಸತು ಮತ್ತು ಸೆಲೆನಿಯಂ ಖನಿಜಾಂಶವಿರುತ್ತದೆ. ಇವು ಸೋಂಕುಗಳ ವಿರುದ್ಧ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ರಕ್ತ ಶುದ್ಧಿ
ನಿತ್ಯವೂ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಹೇಳಿವೆ. ಆದರೆ, ಬೆಲ್ಲ ಕೂಡ ಶುದ್ಧವಾಗಿರಬೇಕು. ಯಾವುದೇ ಕೆಟ್ಟ ಅಂಶ ಬೆರೆತಿರದ ಉತ್ತಮ ಬೆಲ್ಲ ಆರೋಗ್ಯಕ್ಕೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ.

ಲಿವರ್
ನಾವು ದಿನವೂ ಏನೇನೋ ತಿನ್ನುತ್ತಿರುತ್ತೇವೆ. ಕಂಡಿದ್ದನ್ನೆಲ್ಲ ರುಚಿ ನೋಲಿ ನಲಿಯುತ್ತೇವೆ. ಆದರೆ, ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತು ಲಿವರ್ ಗೆ ಇರಬೇಕಲ್ಲವೇ? ನಮ್ಮ ಲಿವರ್ ಅರ್ಥಾತ್ ಯಕೃತ್ ನಲ್ಲಿ ನಾವು ಸೇವಿಸುವ ಆಹಾರದಿಂದ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರತನ್ ಟಾಟಾ ನೆಟ್ ವರ್ತ್ 2022;

Fri Jan 7 , 2022
ರತನ್ ಟಾಟಾ ನಿವ್ವಳ ಮೌಲ್ಯ $1 ಬಿಲಿಯನ್. ಈ ವ್ಯಕ್ತಿ ಒಮ್ಮೆ ಉಲ್ಲೇಖಿಸಿದ “ನಾನು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಂಬುವುದಿಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅದನ್ನು ಸರಿಯಾಗಿ ಮಾಡುತ್ತೇನೆ. ಮತ್ತು ಈಗ ಅವರ ನಿರ್ಧಾರವು 100 ಬಿಲಿಯನ್ USD ಗಿಂತ ಹೆಚ್ಚು ಮೌಲ್ಯದ್ದಾಗಿದೆ. ಮೂಲದಿಂದ ಪ್ರಾರಂಭಿಸಿ ಈಗ ಟಾಟಾ ಗ್ರೂಪ್‌ನ ಮೇಲ್ಛಾವಣಿಯಾಗಿರುವ ಈ ವ್ಯಕ್ತಿಗೆ ವಿವರಣೆಯ ಅಗತ್ಯವಿಲ್ಲ, ಅವರು ಬೇರೆ ಯಾರೂ ಅಲ್ಲ, ಶ್ರೀ ರತನ್ ಟಾಟಾ. […]

Advertisement

Wordpress Social Share Plugin powered by Ultimatelysocial