ರಾಯರ ಕೃಪೆಯಿಂದ ರಾಜ್ಯಸಭಾ ಟಿಕೆಟ್

ಬೆಂಗಳೂರು, ಮೇ30: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 (ಮಂಗಳವಾರ) ಕೊನೆಯ ದಿನವಾಗಿದೆ. ಬಿಜೆಪಿ ಈಗಾಗಲೇ ರಾಜ್ಯದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮತ್ತು ನವರಸನಾಯಕ ಬಿಜೆಪಿ ಮುಖಂಡ ಜಗ್ಗೇಶ್‌ಗೆ ರಾಜ್ಯಸಭೆಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಈ ಬಗ್ಗೆ ಜಗ್ಗೇಶ್ ಸಂತಸದ ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಬಹಳ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಶಾಸಕರು, ಸಂಘದ ಹಿರಿಯರು ಸೇರಿ ಈ ನಿರ್ಧಾರವನ್ನು ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಪಕ್ಷ ಮತ್ತು ಸಂಘಟನೆಗೆ ಧನ್ಯವಾದಗಳು. ಹಿರಿಯರು ನನಗೆ ಫೋನ್ ಮಾಡಿ ದಾಖಲೆ ರೆಡಿ ಮಾಡಿಕೊಳ್ಳಲು ಹೇಳಿದರು ಅಚ್ಚರಿಯಾಯಿತು. ನಿಜಕ್ಕೂ ಇದು ರಾಯರ ಪವಾಡ. ರಾಯರ ಸಂಪೂರ್ಣ ಆಶೀರ್ವಾದದಿಂದ ಟಿಕೆಟ್ ಸಿಕ್ಕಿದೆ. ಮೇ31 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ನನಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಗಳು ಇರಲಿಲ್ಲ. ನಿರೀಕ್ಷೆ ಇಲ್ಲದ್ದರಿಂದ ದಾಖಲೆ ಸಂಗ್ರಹಕ್ಕೆ ಸ್ವಲ್ಪ ವಿಳಂಬವಾಗಿದೆ. ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ನಾಳೆ(ಮೇ31) ರಂದು ನಾಮಪತ್ರವನ್ನು ಸಲ್ಲಿಸುತ್ತೇನೆ ಎಂದು ಜಗ್ಗೇಶ್‌ರವರು ಬಿಜೆಪಿಯ ಕಚೇರಿಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ವಿರುದ್ಧ ರಣತಂತ್ರ ಹೆಣೆದ ಕಾಂಗ್ರೆಸ್​!

Mon May 30 , 2022
  ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಅಚ್ಚರಿ ರೂಪದಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಸಿರುವ ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ನಿನ್ನೆ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದ ಕುಪ್ಪೇಂದ್ರ ರೆಡ್ಡಿ, ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇದ್ದಕ್ಕಿದ್ದಂತೆ ಕಾಂಗ್ರೆಸ್‌ 2ನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದೇಕೆ? ಅಚ್ಚರಿ ರಾಜ್ಯ ನಾಯಕರ ಲೆಕ್ಕಾಚಾರ ಏನಿರಬಹುದು? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾಂಗ್ರೆಸ್​ನ ಲೆಕ್ಕಾಚಾರ ಏನಿರಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ. ಜೆಡಿಎಸ್- ಬಿಜೆಪಿ ಬಹಿರಂಗ […]

Advertisement

Wordpress Social Share Plugin powered by Ultimatelysocial